ಮಾಳವಿಕಾ ಮೋಹನ್ ಹುಟ್ಟಿದ್ದು ಕೇರಳದಲ್ಲಿ 1992ರಲ್ಲಿ ಆದರೆ ಬೆಳೆದಿದ್ದು ಮುಂಬೈನಲ್ಲಿ.
ಖ್ಯಾತ ಸಿನಿಮಾಟೋಗ್ರಾಫರ್ ಮೋಹನ್ ಪುತ್ರಿ ಮಾಳವಿಕಾ.
ಮುಂಬೈ ವಿಲ್ಸನ್ ಕಾಲೇಜಿನಲ್ಲಿ ಮಾಸ್ ಮೀಡಿಯಾದಲ್ಲಿ ಪದವಿ ಪಡೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫ್ಯಾಷನ್ ಬ್ಲಾಗರ್ ಅಗಿ ಗುರುತಿಸಿಕೊಂಡಿದ್ದಾರೆ.
'ಸ್ಕಾರ್ಲೆಟ್ ವಿಂಡೋ' ಎಂಬ ಫ್ಯಾಷನ್ ಬ್ಲಾಗ್ ನಡೆಸುತ್ತಾರೆ.
ಪ್ರಾಣಿ ಪ್ರಿಯೆ ಮಾಳವಿಕಾ ಹೆಚ್ಚಾಗಿ ವೈಲ್ಡ್ ಲೈಫ್ ಸವಾರಿ ಮಾಡುತ್ತಾರೆ.
ಚಿಕ್ಕ ವಯಸ್ಸಿನಿಂದಲೂ ಮಾಳವಿಕಾಗೆ ಚಿಟ್ಟೆ ಕಂಡರೆ ಸಿಕ್ಕಾಪಟ್ಟೆ ಭಯವಂತೆ.
ಇನ್‌ಸ್ಟಾಗ್ರಾಂನಲ್ಲಿ ಮಾಳವಿಕಾ 1.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ವಿಜಯ್ ದಳಪತಿ ಹಾಗೂ ವಿಜಯ್ ಸೇತುಪತಿ ಅಭಿನಯದ 'ಮಾಸ್ಟರ್' ಚಿತ್ರದಲ್ಲಿ ಅಭಿನಯಿಸಿದ್ದಾರೆ.
ದೀಪಿಕಾ ಪಡುಕೋಣೆ ಅಭಿನಯಿಸಬೇಕಾದ 'Beyond the clouds' ಚಿತ್ರದಲ್ಲಿ ಮಾಳವಿಕಾ ದೀಪಿಕಾ ಪಾತ್ರ ಗಿಟ್ಟಿಸಿಕೊಂಡಿದ್ದಾರೆ.
Suvarna News