ಬಾಲಿವುಡ್‌‌ನಲ್ಲೂ ಕಮಾಲ್ ತೋರಿದ ಸ್ಯಾಂಡಲ್‌ವುಡ್ ನಟರಿವರು; ಕನ್ನಡಿಗರ ಹೆಗ್ಗಳಿಕೆ!

First Published | Apr 28, 2020, 7:12 PM IST

ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟರು ಹಿಂದಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಹಾಗೇ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಿಂದ ಅನೇಕರು ಸ್ಯಾಂಡಲ್‌ವುಡ್‌‌ನಲ್ಲಿಯೂ ತಮ್ಮ ಅಭಿನಯದ ಛಾಪು ಮೂಡಿಸಿದವರಿದ್ದಾರೆ. ಬಾಲಿವುಡ್‌ನಲ್ಲಿಯೂ ಕಮಾಲ್ ತೋರಿದ ಕನ್ನಡದ ನಟರಿವರು.

ಅನಂತ್ ನಾಗ್.
ಅನಂತ್ ನಾಗ್ 'ನಿಶಾಂತ್', 'ಭೂಮಿಕಾ: ದಿ ರೋಲ್', 'ಕೊಂಡೂರ', 'ಕಲಿಯುಗ್' ಹಾಗೂ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Tap to resize

ಡಾ. ವಿಷ್ಣು ವರ್ಧನ್‌ .
ವಿಷ್ಣು ವರ್ಧನ್ 'ಏಕ್ ನಯಾ ಇತಿಹಾಸ್', 'ಇನ್ಸ್‌ಪೆಕ್ಟರ್ ಧನುಷ್', 'ಆಶಾಂತ್' ಹಾಗೂ 'ಜಾಲಿಮ್' ಎಂಬ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಅಂಬರೀಶ್‌.
'ನಾಗರಹಾವು' ಬಹುಭಾಷಾ ಸಿನಿಮಾವಾಗಿದ್ದು, ಜಲೀಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗಿರೀಶ್ ಕಾರ್ನಾಡ್
ರಂಗಭೂಮಿ, ಚಿತ್ರ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದ ಗಿರೀಶ್ ಕಾರ್ನಾಡ್ ಟೈಗರ್ ಜಿಂದಾ ಹೈ, ಚಾಲಕ್ ಇನ್ ಡಸ್ಟರ್, ಶಿವಾಯ್, ಏಕ್ ಥಾ ಟೈಗರ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಶಂಕರ್ ನಾಗ್‌
ಶಂಕರ್ ನಾಗ್‌ ಅಭಿನಯಿಸಿಲ್ಲವಾದರೂ 'ಲಾಲಾಚ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಕಿಚ್ಚ ಸುದೀಪ್‌
ಕಿಚ್ಚ ಸುದೀಪ್ 'ಫೂಂಕ್', 'ರಾನ್', 'ದಬಾಂಗ್ 3' ಚಿತ್ರಗಳಲ್ಲಿ ತಮ್ಮ ಕಲಾ ನೈಪುಣ್ಯತೆ ತೋರಿದ್ದಾರೆ.
Rocking Star Yash.
ಕೆಜಿಫ್-1 ಹಿಂದಿಯಲ್ಲಿಯೂ ಬಿಡುಗಡೆಯಾಗಿದ್ದು, ಆ ಮೂಲಕ ಬಾಲಿವುಡ್‌ಗೆ ಕಾಲಿಟ್ಟಂತಾಗಿದೆ.

Latest Videos

click me!