ಕಸರತ್ತಿಗೂ ಸೈ ಈ ಕಿರಿಕ್‌ ಬೆಡಗಿ ಸಂಯುಕ್ತಾ ಹೆಗ್ಡೆ!

First Published | Mar 5, 2020, 4:24 PM IST

ನಟಿಸಿದ ಸಿನಿಮಾಕ್ಕಿಂತ ಹೆಚ್ಚು ಸುದ್ದಿಯಲ್ಲಿರವವರು ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ದೆ. ಹೋದಲ್ಲೆಲ್ಲಾ ಏನಾದರೂ ಒಂದು ಕಿರಿಕ್‌ ಮಾಡ್ಕೊಂಡು, ಸದಾ ಸುದ್ದಿಯಲ್ಲಿರುತ್ತಾರೆ. ಬಿಕಿನಿ ಫೋಟೋದಿಂದ ಹಿಡಿದು, ತಮ್ಮ ಫಾರಿನ್‌ ಬಾಯ್‌ಫ್ರೆಂಡ್‌ ಜೊತೆ ಸುತ್ತಾಡುವ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡ್ತಾ ಇರ್ತಾರೆ. ಇವರು ಬರೀ ಸುದ್ದಿ ಮಾಡುವುದಕ್ಕೆ ಮಾತ್ರ ಫೆಮಸ್‌ ಅಂದ್ಕೋಬೇಡಿ, ವ್ಯಾಯಾಮದಲ್ಲೂ ಎಕ್ಸ್‌ಪರ್ಟ್‌ ಇವರು. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡುವ ವರ್ಕೌಟ್‌ ವಿಡೀಯೊ ಮತ್ತು ಪೋಟೋಗಳಿಗೆ ನೆಟ್ಟಿಗರೂ ಫುಲ್‌ ಫಿದಾ. ನೀವೂ ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ. 

ಮೊದಲ ಚಿತ್ರ ಕಿರಿಕ್ ಪಾರ್ಟಿಯಲ್ಲಿ ಅಭಿನಯದಿಂದ ಜನಮನಗೆದ್ದ ಬಿಂದಾಸ್‌ ಬೆಡಗಿ ಸಂಯುಕ್ತ ಹೆಗ್ಡೆ.
ಇವರು ಬೋಲ್ಡ್‌ನೆಸ್ಸ್‌ಗೆ ಹೆಸರುವಾಸಿ. ಸಾಮಾಜಿಕ ತಾಣದಲ್ಲಿ ವಿದೇಶಿ ಬಾಯ್‌ಫ್ರೆಂಡ್‌ ಜೊತೆ ಫೋಟೊ ಹಾಕಿ ಸುದ್ದಿ ಮಾಡಿದ್ದರು.
Tap to resize

ಅವರು ನಟಿಸಿದ ತಮಿಳು ಚಿತ್ರದ ಲಿಪ್‍ಲಾಕ್ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು .
ಇನ್‌ಸ್ಟಾಗ್ರಾಮ್‌ನಲ್ಲಿ ಕಸರತ್ತಿನ ಫೋಟೋಗಳನ್ನು ಹೆಚ್ಚಾಗಿ ಶೇರ್‌ ಮಡಿಕೊಳ್ಳುತ್ತಾರೆ ಸಂಯುಕ್ತಾ.
ಬಿಕಿನಿಯಲ್ಲಿ ಪೋಸ್‌ ನೀಡಿ, ಹಲವರ ನಿದ್ರೆಗಡಿಸಿದ ನಟಿ.
ಹಿಂದಿಯ 'ರೋಡೀಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೆಮಿಫೈನಲ್‌‌ವರೆಗೂ ತಲಪಿದ ಕೀರ್ತಿ ಇವರದ್ದು.
ಅವರ ಬಾಯ್​ಫ್ರೆಂಡ್​ ಎಂದು ಹೇಳಲಾದ ಫಾರಿನ್‌ ಹುಡುಗ ಕ್ರಿಸ್​ ಸಾವರ್​ ಜೊತೆ ಸುತ್ತಾಟದ ಹಲವು ಫೋಟೊಗಳು ಶೇರ್‌ ಮಾಡಿದ್ದರು ಸಂಯುಕ್ತಾ.
ನಟಿಸಿದ ಚೊಚ್ಚಲನ ಚಿತ್ರ ಕಿರಿಕ್‌ ಪಾರ್ಟಿಯ ಅಭಿನಯಕ್ಕೆ ಉತ್ತಮ ಪೋ‍ಷಕ ನಟಿಗಾಗಿ ಫಿಲ್ಮ್ ಫೇರ್ ಆವಾರ್ಡ್‌ ಗೆದ್ದುಕೊಂಡಿದ್ದಾರೆ ಸಂಯುಕ್ತ.
ಕಿರಿಕ್ ಹುಡುಗಿ ನಟನೆಯ ಜೊತೆ ಯೋಗ ಮತ್ತು ಡ್ಯಾನ್ಸಿಗೂ ಸೈ .
ಸಂಯುಕ್ತ ಹೆಗ್ಡೆ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಫೋಟೋ ಮತ್ತು ವಿಡಿಯೋ ಶೇರ್‌ ಮಾಡುತ್ತಲೇ ಇರುತ್ತಾರೆ.

Latest Videos

click me!