ಕಂಠಸಿರಿಯಿಂದ ಈಗಾಗಲೇ ಮೋಡಿ ಮಾಡಿರುವ ಕಿಚ್ಚ ಸುದೀಪ್ ಪುತ್ರಿ ಸಾನ್ವಿ, ನಟನೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಮಗಳ ಸಿನಿಮಾ ಎಂಟ್ರಿ ಬಗ್ಗೆ ಮಾತನಾಡಿದ ಸುದೀಪ್, ಆಕೆಗೆ ನಟನೆಯಲ್ಲಿ ಸಂಪೂರ್ಣ ಆಸಕ್ತಿಯಿದೆ ಎಂದಿದ್ದು, ಮಗಳ ಎಂಟ್ರಿ ಬಗ್ಗೆ ಹೇಳಿದ್ದೇನು?
ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಅವರ ಕಂಠಕ್ಕೆ ಇದಾದಲೇ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ. ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ‘ಅಪ್ಪಾ ಐ ಲವ್ ಯೂ ಪಾ..’ ಎಂದು ಹಾಡಿ ಮೋಡಿ ಮಾಡಿದ್ದರು ಸಾನ್ವಿ. ಅಷ್ಟೇ ಅಲ್ಲದೇ ಕೆಲ ತಿಂಗಳ ಹಿಂದೆ ಸಾನ್ವಿ ಅವರು ಟಾಲಿವುಡ್ಗೆ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾರೆ. ಅವರು ಅಲ್ಲಿ ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ತಮ್ಮ ಕಂಠಸಿರಿಯಿಂದ ಟಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ.
26
ಸಾನ್ವಿ ಸುದೀಪ್ ಸಿನಿಮಾಕ್ಕೆ ಎಂಟ್ರಿ?
ಇದೀಗ ಸುದೀಪ್ ಅವರ ಮಗಳು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಬೇಕು ಎನ್ನುವುದು ಅವರ ಅಭಿಮಾನಿಗಳ ಮಹದಾಸೆ. ಆ ಬಗ್ಗೆ ಸುದೀಪ್ ಅವರಿಗೆ ಪ್ರಶ್ನೆ ಕೇಳಿದಾಗಿದೆ. ಯಶಸ್ಟಾಕೀಸ್ಗೆ ನೀಡಿರುವ ಸಂದರ್ಶನದಲ್ಲಿ ಕಿಚ್ಚ ಅವರು ಈ ವಿಷಯವನ್ನು ರಿವೀಲ್ ಮಾಡಿದ್ದಾರೆ.
36
ಸಿನಿಮಾ ರಂಗಕ್ಕೆ ಎಂಟ್ರಿ ಕೊಡಬಹುದು
ಖಂಡಿತವಾಗಿಯೂ ಆಕೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಬಹುದು. ಅವರಿಗೆ 100% ನಟನೆಯಲ್ಲಿ ಇಂಟರೆಸ್ಟ್ ಇದೆ. ಅವರಿಗೆ ಮಾಡಬೇಕು ಎಂದು ಎನ್ನಿಸಿ, ಅವರು ಸೆಲೆಕ್ಟ್ ಆಗಿ, ಅವರಿಗೆ ಒಂದು ಸಿನಿಮಾ ಸಿಕ್ಕು, ಆಕೆಗೆ ಫಿಲ್ಮ್ ಇಂಡಸ್ಟ್ರಿಗೆ ಎಂಟರ್ ಆಗಬೇಕು ಎಂದು ಎನ್ನಿಸಿದರೆ ನಮ್ಮದೇನೂ ಅಭ್ಯಂತರ ಇಲ್ಲ ಎಂದು ಸುದೀಪ್ ಹೇಳಿದ್ದಾರೆ.
ಈ ಬಗ್ಗೆ ಸದ್ಯ ಮನೆಯಲ್ಲಿ ಯಾವುದೇ ಮಾತುಕತೆ ನಡೆದಿಲ್ಲ. ಅವರಿಗೆ ಅವರದ್ದೇ ಆದ ಆಸೆಗಳು ಇರುತ್ತವೆ. ನಾವು ಅವರನ್ನು ಹೀಗೆಯೇ ಮಾಡಿ ಎಂದು ಕೈಹಿಡಿದುಕೊಂಡು ಹೋಗಲು ಆಗುವುದಿಲ್ಲ. ಅಪ್ಪನಾಗಿ ಆಕೆಗೆ ಸಪೋರ್ಟ್ ಮಾಡುತ್ತೇನೆ ಅಷ್ಟೇ ಎಂದು ಸಾನ್ವಿ ಬಗ್ಗೆ ಸುದೀಪ್ ಹೇಳಿದ್ದಾರೆ.
56
ಅವರೇ ಜೀವನ ನಡೆಸಬೇಕು
ಅವರೇ ಜೀವನ ನಡೆಸಬೇಕು, ಅವರೇ ಬೀಳಬೇಕು, ಅವರೇ ಏಳಬೇಕು. ಅವರಿಗೆ ಗೊತ್ತಾಗಬೇಕಾಗಿರುವುದು ಒಂದೇ. ಅವರ ಬೆನ್ನ ಹಿಂದೆ ನಾವಿದ್ದೇವೆ ಎನ್ನುವುದು ಅಷ್ಟೇ. ಏನಾದರೂ ತಪ್ಪು ನಡೆದರೆ ಆಕೆಯ ಬೆನ್ನ ಹಿಂದೆ ನಾವು ಇದ್ದೇವೆ ಎನ್ನುವ ಭರವಸೆ ಇರಬೇಕು ಅಷ್ಟೇ ಎಂದಿದ್ದಾರೆ.
66
ಸ್ಟ್ರಾಂಗ್ ಮಾಡಬೇಕು
ಆಕೆ ಒಂದು ಹುಡುಗಿಯಾಗಿ, ನನ್ನ ಮಗಳಾಗಿ ಅವರಿಗೆ ನಾವು ಸ್ಟ್ರಾಂಗ್ ಮಾಡಬೇಕು. ಆದರೆ ನಮ್ಮ ಮೇಲೆಯೇ ಡಿಪೆಂಡ್ ಆಗಿರಬೇಕು ಎನ್ನುವುದು ಅಲ್ಲ. ಅವರಿಗೆ ಏನು ಇಷ್ಟವೋ ಅದನ್ನು ಮಾಡುತ್ತಾರೆ, ನಾವು ಬೆಂಬಲವಾಗಿ ನಿಂತಿರುತ್ತೇವೆ ಎಂದು ಕಿಚ್ಚ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.