ವಿಜಯಲಕ್ಷ್ಮಿ ದರ್ಶನ್ ದೂರು: ಜಗಳಕ್ಕಲ್ಲ, ಎಂಟರ್ಟೈನಮೆಂಟ್‌ಗಾಗಿ ನಾನು ಸಿನೆಮಾಗೆ ಬಂದವನೆಂದ ಕಿಚ್ಚ

Published : Dec 27, 2025, 03:48 PM IST

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ದೂರು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಕುರಿತು ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಅನಾವಶ್ಯಕ ವಿವಾದಗಳಲ್ಲಿ ತಮಗೆ ಆಸಕ್ತಿ ಇಲ್ಲ, ಸಮಸ್ಯೆಗಳಿದ್ದರೆ ನೇರವಾಗಿ ಮಾತನಾಡುವಂತೆ ಮತ್ತು ಚಿತ್ರರಂಗದಲ್ಲಿ ಸೌಹಾರ್ದತೆ ಕಾಪಾಡುವಂತೆ ಕರೆ ನೀಡಿದ್ದಾರೆ.

PREV
15
ವಿಜಯಲಕ್ಷ್ಮಿ ದೂರು ವಿಚಾರಕ್ಕೆ ಕಿಚ್ಚ ಪ್ರತಿಕ್ರಿಯೆ

ಬೆಂಗಳೂರು:  ಕೊಲೆ ಆರೋಪಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಸಲ್ಲಿಸಿರುವ ದೂರು ಮತ್ತು ‘ಕ್ಲಾಸ್ ಫ್ಯಾನ್ಸ್’ ಎಂಬ ಕೋಟ್‌ ಅನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಕುರಿತು ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ಸುದೀಪ್, ಅನಾವಶ್ಯಕ ವಿವಾದಗಳು ಮತ್ತು ಆರೋಪಗಳ ಬಗ್ಗೆ ತಮಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

25
ನಾನು ಒಳ್ಳೆಯವನು ಅಲ್ಲ: ಕಿಚ್ಚ

“ನಾನು ಕಪಾಳಕ್ಕೆ ಹೊಡಿಸಿಕೊಳ್ಳುವಷ್ಟು ಒಳ್ಳೆಯವನು ಅಲ್ಲ. ಪ್ರೀತಿಯಿಂದ ತಾಯಿ ಹೊಡೆಯುವುದು ಬೇರೆ ವಿಷಯ, ಆದರೆ ಪಕ್ಕದ ಮನೆಯವರು ಹೊಡೆದರೆ ಹೇಗಿರುತ್ತೆ ಎನ್ನುವ ಭಾವನೆ ಎಲ್ಲರಿಗೂ ಗೊತ್ತಿರುತ್ತದೆ. ನಮ್ಮ ಬಗ್ಗೆ ಅವರಿಗೆ ಒಲವು ಇದ್ದಾಗ ಮಾತ್ರ ಅವರು ಏನಾದರೂ ಹೇಳುತ್ತಾರೆ” ಎಂದು ಸುದೀಪ್ ಹೇಳಿದ್ದಾರೆ.

35
ಯಾರಾದರೂ ಫೇಕ್ ಐಡಿ ಮೂಲಕ ಮಾಡಿರಬಹುದು

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳ ಬಗ್ಗೆ ಮಾತನಾಡಿದ ಅವರು, ಇವುಗಳನ್ನು ಯಾರಾದರೂ ಫೇಕ್ ಐಡಿ ಮೂಲಕ ಮಾಡಿರಬಹುದು. ಇಂತಹ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ನನಗೆ ಕಾಣುತ್ತಿಲ್ಲ. ನಾನು ಜಗಳ ಮಾಡೋದಕ್ಕೆ ಸಿನಿಮಾ ಇಂಡಸ್ಟ್ರಿಗೆ ಬಂದವನಲ್ಲ. ಎಲ್ಲರನ್ನೂ ನಗಿಸಲು, ಮನರಂಜನೆ ನೀಡಲು ಮತ್ತು ಎಂಟರ್ಟೈನ್ ಮಾಡಲು ಬಂದವನು. ಯುದ್ಧ ಅಂತಾ ಪದಗಳು ಇಲ್ಲಿಗೆ ಸೂಕ್ತವಲ್ಲ” ಎಂದು ಹೇಳಿದರು.

45
ಸಮಸ್ಯೆ ಇದ್ದರೆ ನೇರವಾಗಿ ಮಾತನಾಡೋಣ

“ನನ್ನ ವಿಚಾರಗಳನ್ನು ನಾನು ಸ್ಪಷ್ಟವಾಗಿ ಮಾತನಾಡಬಲ್ಲೆ. ಇಡೀ ಇಂಡಸ್ಟ್ರಿ ಚೆನ್ನಾಗಿಯೇ ಇದೆ. ಯಾರಾದರೂ ನನ್ನ ಬಳಿ ಬಂದು ‘ನಮ್ಮ ಹುಡುಗರು ಸರಿಯಿಲ್ಲ’ ಎಂದು ಹೇಳಿದರೆ, ಅದನ್ನು ಸರಿಪಡಿಸಿಕೊಳ್ಳೋಣ. ಸಮಸ್ಯೆ ಇದ್ದರೆ ನೇರವಾಗಿ ಮಾತನಾಡೋಣ” ಎಂದು ಸುದೀಪ್ ಹೇಳಿದ್ದಾರೆ.

55
ವಿಜಯಲಕ್ಷ್ಮಿ ಯಾರ ಬಗ್ಗೆ ಆರೋಪ ಮಾಡಿದ್ದಾರೆ ಸ್ಪಷ್ಟವಾಗಿ ಹೇಳಿದರೆ ಚಂದ

ವಿಜಯಲಕ್ಷ್ಮಿ ಅವರು ಯಾರಿಗೆ ದೂರು ನೀಡಿದ್ದಾರೆ, ಯಾರ ಬಗ್ಗೆ ಆರೋಪ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎನ್ನುವುದನ್ನೂ ಸುದೀಪ್ ಉಲ್ಲೇಖಿಸಿದ್ದಾರೆ. “ಅವರು ಯಾರಿಗೆ ಹೇಳಿದ್ದಾರೆ, ಯಾರ ಹೆಸರನ್ನು ಉಲ್ಲೇಖಿಸಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿದರೆ ಚಂದ. ಅದನ್ನು ಕೇಳಿ, ಅದರ ಬಗ್ಗೆ ಮಾತನಾಡಲು ನಾನು ಸಿದ್ಧನಿದ್ದೇನೆ” ಎಂದು ಹೇಳಿದರು. ಒಟ್ಟಿನಲ್ಲಿ, ಅನಗತ್ಯ ವಿವಾದಗಳನ್ನು ದೂರವಿಟ್ಟು, ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆ ಮುಂದುವರಿಯಬೇಕು ಎಂಬ ಸಂದೇಶವನ್ನು ಕಿಚ್ಚ ಸುದೀಪ್ ಈ ಮೂಲಕ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories