ಮ್ಯಾಕ್ಸ್‌ ನಿರ್ದೇಶಕರಿಗೆ ದುಬಾರಿ‌ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್: ಏನಂತ ಗೆಸ್ ಮಾಡ್ತೀರಾ?

Published : Sep 25, 2025, 05:56 PM IST

ಕಿಚ್ಚ ಸುದೀಪ್‌ ತಮ್ಮ ಆಪ್ತರಿಗೆ, ತಮ್ಮ ಸಿನಿಮಾಗಳ ನಿರ್ದೇಶಕರಿಗೆ ಗಿಫ್ಟ್ ನೀಡುವುದರಲ್ಲಿ ಸದಾ ಮುಂದಿರುತ್ತಾರೆ. ಈ ಹಿಂದೆ ಅನೂಪ್ ಭಂಡಾರಿ, ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಕಾರುಗಳನ್ನು ನೀಡಿದ್ದು ಗೊತ್ತೇ ಇದೆ.

PREV
17
ಬಾದ್ ಷಾ ಕಿಚ್ಚ ಸುದೀಪ್‌

ಸ್ಯಾಂಡಲ್‌ವುಡ್‌ನ ಬಾದ್ ಷಾ ಕಿಚ್ಚ ಸುದೀಪ್‌ಗೆ ಮ್ಯಾಕ್ಸ್‌ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ಡೈರೆಕ್ಟರ್ ವಿಜಯ್ ಕಾರ್ತಿಕೇಯಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

27
ಮ್ಯಾಕ್ಸ್ ನಿರ್ದೇಶಕರಿಗೆ ಗಿಫ್ಟ್

ಕಿಚ್ಚ ಸುದೀಪ್‌ ತಮ್ಮ ಆಪ್ತರಿಗೆ, ತಮ್ಮ ಸಿನಿಮಾಗಳ ನಿರ್ದೇಶಕರಿಗೆ ಗಿಫ್ಟ್ ನೀಡುವುದರಲ್ಲಿ ಸದಾ ಮುಂದಿರುತ್ತಾರೆ. ಈ ಹಿಂದೆ ಅನೂಪ್ ಭಂಡಾರಿ, ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಕಾರುಗಳನ್ನು ನೀಡಿದ್ದು ಗೊತ್ತೇ ಇದೆ. ಇದೀಗ ಮ್ಯಾಕ್ಸ್ ನಿರ್ದೇಶಕರಿಗೆ ಸುದೀಪ್ ಕಾರನ್ನು ಗಿಫ್ಟ್ ನೀಡಿದ್ದಾರೆ.

37
ಮಾಸ್‌ ಅವತಾರದಲ್ಲಿ ಸುದೀಪ್

ಕಿಚ್ಚ ಸುದೀಪ್‌ ಅವರಿಗೆ ವಿಕ್ರಾಂತ್‌ ರೋಣ ಚಿತ್ರದ ಬಳಿಕ ಮ್ಯಾಕ್ಸ್‌ ಸಿನಿಮಾ ದೊಡ್ಡ ಹಿಟ್‌ ತಂದು ಕೊಟ್ಟಿತು. 2024ರ ಕೊನೆಯಲ್ಲಿ ಬಂದ ಮ್ಯಾಕ್ಸ್‌ನಲ್ಲಿ ಮಾಸ್‌ ಅವತಾರದಲ್ಲಿ ಸುದೀಪ್ ಮಿಂಚಿದ್ದರು. ನಿರ್ದೇಶಕ ವಿಜಯ್ ಕಾರ್ತಿಕೇಯ ಡೈರೆಕ್ಷನ್ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

47
ಫೋಟೋಸ್ ವೈರಲ್

ಮ್ಯಾಕ್ಸ್‌ ಬಳಿಕ ವಿಜಯ್‌ ಅವರೊಂದಿಗೆ ಕಿಚ್ಚ ಸುದೀಪ್‌ ಮಾರ್ಕ್‌ ಸಿನಿಮಾವನ್ನು ಮಾಡುತ್ತಿದ್ದಾರೆ. ಮಾರ್ಕ್‌ ಶೂಟಿಂಗ್‌ ನಡೆಯುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್‌ ಅವರು ವಿಜಯ್ ಕಾರ್ತಿಕೇಯ​ಗೆ ಪ್ರೀತಿಯಿಂದ ಕಾರೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈ ಸಂದರ್ಭದ ಫೋಟೋಸ್ ವೈರಲ್ ಆಗಿವೆ.

57
ಧನ್ಯವಾದಗಳು ಕಿಚ್ಚ ಸರ್

ಸದ್ಯ ಈ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ವಿಜಯ್ ಕಾರ್ತಿಕೇಯ ಹಂಚಿಕೊಂಡಿದ್ದು, 'ಕಿಚ್ಚ ಸುದೀಪ್ ಸರ್ ಮತ್ತು ಅವರ ಕುಟುಂಬದಿಂದ ಬಂದ ಈ ಅದ್ಭುತ ಉಡುಗೊರೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಧನ್ಯವಾದಗಳು ಕಿಚ್ಚ ಸರ್' ಎಂದು ವಿಜಯ್ ಬರೆದುಕೊಂಡಿದ್ದಾರೆ.

67
ಸ್ಕೋಡಾ ಕಂಪನಿಯ Kylaq ಮಾಡೆಲ್ ಕಾರು

ಕಿಚ್ಚ ಸುದೀಪ್ ಅವರು ತಮ್ಮ ಜೆ.ಪಿ.ನಗರದ ನಿವಾಸದಲ್ಲೇ ಹೊಸ ಕಾರನ್ನು ನಿರ್ದೇಶಕ ವಿಜಯ್ ಕಾರ್ತಿಕೇಯಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದು ಸ್ಕೋಡಾ ಕಂಪನಿಯ Kylaq ಮಾಡೆಲ್ ಕಾರು. ಇನ್ನು ಸುದೀಪ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಕ್ಕೆ ವಿಜಯ್ ಕಾರ್ತಿಕೇಯ ಬಹಳ ಖುಷಿಯಾಗಿದ್ದಾರೆ.

77
ಮಾರ್ಕ್‌ ಯಾವಾಗ ರಿಲೀಸ್?

ಜುಲೈ ತಿಂಗಳಿನಲ್ಲಿ ಮಾರ್ಕ್‌ ಸಿನಿಮಾ ಅನೌನ್ಸ್‌ ಆಗಿದ್ದು, ಭರದಿಂದ ಶೂಟಿಂಗ್‌ ನಡೆಯುತ್ತಿದೆ. ಆದಷ್ಟು ಬೇಗ ಶೂಟಿಂಗ್‌ ಮುಗಿಸಿ ಡಿಸೆಂಬರ್‌ 25ಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

Read more Photos on
click me!

Recommended Stories