ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ - ಪ್ರಗತಿ ಆನಿವರ್ಸರಿ ಸೆಲೆಬ್ರೇಶನ್ ಹೇಗಿತ್ತು ನೋಡಿ…

Published : Feb 19, 2025, 04:15 PM ISTUpdated : Feb 19, 2025, 04:30 PM IST

ಫೆಬ್ರುವರಿ ಆರಂಭದಲ್ಲಿ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದ ನಟ ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿಯವರ ಸುಂದರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.   

PREV
18
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ - ಪ್ರಗತಿ ಆನಿವರ್ಸರಿ ಸೆಲೆಬ್ರೇಶನ್ ಹೇಗಿತ್ತು ನೋಡಿ…

ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಭ್ ಶೆಟ್ಟಿ (Rishabh Shetty) ಇತ್ತೀಚೆಗಷ್ಟೇ ಅಂದ್ರೆ ಫೆಬ್ರುವರಿ ಆರಂಭದಲ್ಲಿ ತಮ್ಮ ಒಂಭತ್ತನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದರು. 
 

28

ಇದೀಗ ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ವೆಡ್ಡಿಂಗ್ ಆನಿವರ್ಸರಿಯ ಸಂಭ್ರಮದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಿಷಭ್ ಮತ್ತು ಪ್ರಗತಿ ತಮ್ಮ ಮುದ್ದಿನ ಮಕ್ಕಳೊಂದಿಗೆ ಸಮುದ್ರ ಕಿನಾರೆಯಲ್ಲಿ ಮುದ್ದಾಗಿ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ. 
 

38

ಅತ್ಯುತ್ತಮ ದಿನಗಳು ಮತ್ತು ನೆನಪುಗಳಲ್ಲಿ ಒಂದಾಗಿರುವ ಆನಿವರ್ಸರಿ ಸೆಲೆಬ್ರೇಷನ್ (Anniversary Celebration) ಮಧುರ ನೆನಪುಗಳು, ಅಲ್ಲಿ ಪ್ರೀತಿಯು ಒಂದು ಆಚರಣೆಯಂತೆ ಭಾಸವಾಯಿತು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಥ್ರೋ ಬ್ಯಾಕ್ ಫೋಟೊಗಳು ಎಂದು ಸಹ ಹೇಳಿದ್ದಾರೆ. 
 

48

ಸಮುದ್ರ ಕಿನಾರೆಯಲ್ಲಿ ಪ್ರಗತಿ ಶೆಟ್ಟಿ, ಗಂಡ ರಿಷಭ್ ಹಾಗೂ ಮಕ್ಕಳಾದ ರನ್ವಿತ್ ಮತ್ತು ರಾಧ್ಯಾ ಜೊತೆ ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದು, ನಾಲ್ಕು ಜನವೂ ಜೊತೆಯಾಗಿ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ರಿಷಭ್ ಪತ್ನಿಯ ಕೆನ್ನೆಗೆ ಹೂಮುತ್ತನ್ನೂ ನೀಡಿದ್ದಾರೆ. 
 

58

ರಿಷಭ್ ಶೆಟ್ಟಿ ಮತ್ತು ಇಬ್ಬರು ಮುದ್ದು ಮಕ್ಕಳು ಬಿಳಿ ಬಣ್ಣದ ಡ್ರೆಸ್ ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದರೆ, ಪತ್ನಿ ಪ್ರಗತಿ ನೀಲಿ ಬಣ್ಣದ ಫ್ಲೋರಲ್ ಡ್ರೆಸ್ ಧರಿಸಿದ್ದು, ಅದರ ಮೇಲೆ ಬಿಳಿ ಬಣ್ಣದ ಶ್ರಗ್ ಧರಿಸಿದ್ದಾರೆ. ಸದ್ಯ ಈ ಮುದ್ದಾದ ಫ್ಯಾಮಿಲಿ ಫೋಟೊ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. 
 

68

ರಿಷಭ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಇದೇ ಫೆಬ್ರುವರಿ 10 ರಂದು ತಮ್ಮ 9ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಆ ದಿನ ರಿಷಭ್, ಇಬ್ಬರ ಮುದ್ದಾದ ವಿಡಿಯೋ ಶೇರ್ ಮಾಡುವ ಮೂಲಕ ಪತ್ನಿಗೆ ಶುಭಾಶಯ ಕೋರಿದ್ದರು. 
 

78

ಈ ವಿಡೀಯೋ ಜೊತೆಗೆ ನನ್ನ ಸಂಗಾತಿಯಾಗಿ ಹೃದಯಕ್ಕೆ ಒಲವನ್ನು, ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು ನೀನು. ಈ ಸಂಸಾರವೆಂಬ ಸಾರ್ಥಕತೆಯಲ್ಲಿ ನನ್ನ ಸಹನೆ, ಶಕ್ತಿ, ಸರ್ವಸ್ವಗಳಾಗಿ ಸದಾ ಜೊತೆಗಿರು ಎಂದು ಮುದ್ದಾಗಿ ಅಡಿಬರಹವನ್ನು ಸಹ ಬರೆದಿದ್ದರು. 
 

88

2017ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗಿ, ಒಂದೇ ವರ್ಷದಲ್ಲಿ ಮದುವೆಯೂ ಆಗಿ ಇದೀಗ 9ನೇ ಆನಿವರ್ಸರಿ ಆಚರಿಸುತ್ತಿದ್ದಾರೆ. ರಿಷಬ್  ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಫ್ಯಾಷನ್ ಡಿಸೈನರ್ ಆಗಿದ್ದು, ಪತಿಯ ಸಿನಿಮಾಗಳಲ್ಲಿ ಕಾಷ್ಟ್ಯೂಮ್ ಡಿಸೈನರ್ ಇವರೇ. 
 

Read more Photos on
click me!

Recommended Stories