ಸುದೀಪ್ ಫ್ಯಾಂಟಮ್ ಪೋಸ್ಟರ್ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು!

First Published | Aug 10, 2020, 8:44 AM IST

ನಟ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ‘ಫ್ಯಾಂಟಮ್‌’ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಆಗುತ್ತಿದೆ. ಇಂದು (ಆ.10) ಬೆಳಗ್ಗೆ 10 ಗಂಟೆಗೆ ಪೋಸ್ಟರ್‌ ಬಿಡುಗಡೆ ಆಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

ಈಗಾಗಲೇ ಒಂದು ಸಣ್ಣ ದೃಶ್ಯದ ತುಣುಕಿನಿಂದ ದೊಡ್ಡ ಮಟ್ಟದಲ್ಲಿ ಭರವಸೆ ಹುಟ್ಟಿಸಿದ ಈ ಚಿತ್ರವನ್ನು ಅನೂಪ್‌ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ.
ನಿರ್ಮಾಪಕ ಜಾಕ್‌ ಮಂಜು ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ.
Tap to resize

ಚಿತ್ರದ ಗುಮ್ಮ ಬಂದ ಟೀಸರ್‌ ಸೂಪರ್‌ ಹಿಟ್‌ ಆದ ಬೆನ್ನಲ್ಲೇ ಈಗ ಫ್ಯಾಂಟಮ್‌ ಚಿತ್ರದಲ್ಲಿನ ಸುದೀಪ್‌ ಅವರ ಪಾತ್ರದ ವಿಕ್ರಾಂತ್‌ ರಾಣಾ ಫಸ್ಟ್‌ ಲುಕ್‌ ಪೋಸ್ಟರ್‌ ಅನಾವರಣಗೊಳ್ಳುತ್ತಿದೆ.
‘ನಮ್ಮ ಚಿತ್ರದ ಪ್ರತಿಯೊಂದು ಪಾತ್ರದ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆ ಮಾಡುತ್ತಿದ್ದೇವೆ. ಈ ಪೈಕಿ ಮೊದಲಿಗೆ ನಾಯಕ ಸುದೀಪ್‌ ಅವರ ಪಾತ್ರದ ಲುಕ್‌ ಬಿಡುಗಡೆ ಆಗುತ್ತಿದೆ'
' ಆ ನಂತರ ಬೇರೆ ಬೇರೆ ಪಾತ್ರಗಳ ಫಸ್ಟ್‌ ಲುಕ್‌ ಪ್ರೇಕ್ಷಕರ ಮುಂದೆ ಬರಲಿದೆ. ಸಾಕಷ್ಟುಕುತೂಹಲ ಮೂಡಿಸುವ ಪೋಸ್ಟರ್‌ ಇದಾಗಿದ್ದು, ಎಲ್ಲರಿಗೂ ಈ ಪೋಸ್ಟರ್‌ ಇಷ್ಟವಾಗಲಿದೆ’ ಎಂಬುದು ನಿರ್ದೇಶಕ ಅನೂಪ್‌ ಭಂಡಾರಿ ಅವರ ಮಾತು.
ಸದ್ಯ ಕೊರೋನಾ ಸಂಕಷ್ಟದ ನಡುವೆಯೂ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಫ್ಯಾಂಟಮ್‌ ಚಿತ್ರಕ್ಕೆ ಹೈದರಾಬಾದ್‌ನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ.

Latest Videos

click me!