ಮಾಲ್ಡೀವ್ಸ್ (ಜ. 21) ಕೆಜಿಎಫ್ ಟೀಸರ್ ಸಂಭ್ರಮದಲ್ಲಿರುವ ಯಶ್ ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಕುಟುಂಬದೊಂದಿಗೆ ದಿನ ಕಳೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳೊಂದಿಗಿನ ಕ್ಯೂಟ್ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಯಶ್ ಹುಟ್ಟುಹಬ್ಬದ ದಿನಕ್ಕೂ ಮುನ್ನ ಕೆಜಿಎಫ್ ಚಾಪ್ಟರ್ ಎರಡರ ಟೀಸರ್ ರಿಲೀಸ್ ಆಗಿತ್ತು. ಅಭಿಮಾನಿಗಳು ಟೀಸರ್ ಮೆಚ್ಚಿಕೊಂಡಿದ್ದು ಮಿಲಿಯನ್ ಗಟ್ಟಲೇ ವೀವ್ಸ್ ಸಿಕ್ಕಿತ್ತು. ಯಶ್, ರಾಧಿಕಾ ಪಂಡಿತ್, ಐರಾ ಮತ್ತು ಯಥರ್ವ ಜತೆಯಾಗಿ ಕಾಲ ಕಳೆಯುತ್ತಿದ್ದಾರೆ. ಅಭಿಮಾನಿಗಳು ಇನ್ನಷ್ಟು ಪೋಟೊ ಹಂಚಿಕೊಳ್ಳಿ ಎಂದು ಬೇಡಿಕೆ ಇಟ್ಟಿದ್ದರು. ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿರುವ ರಾಕಿ ಬಾಯ್ ಮತ್ತು ರಾಧಿಕಾ ಸರಣಿ ಪೋಟೋ ಹಂಚಿಕೊಂಡಿದ್ದಾರೆ. ಕ್ಯೂಟ್ ಪೋಟೋಗಳಿಗೆ ಹಾರೈಕೆಗಳು ಹರಿದು ಬಂದಿವೆ KGF 2 Rocking Star Yash and Radhika Pandit in Maldives photos goes viral Social Media ಮಾಲ್ಡೀವ್ಸ್ ನಲ್ಲಿ ಕುಟುಂಬ ಸಮೇತ ಯಶ್ ಪ್ರವಾಸ KGF 2, Radhika Pandit, Yash, Maldives, Sandalwood, ಕೆಜಿಎಫ್ 2 , ರಾಧಿಕಾ ಪಂಡಿತ್ , ಯಶ್ , ಮಾಲ್ಡೀವ್ಸ್ , ಸ್ಯಾಂಡಲ್ವುಡ್