ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ 2025 ನಡೆಯುತ್ತಿದೆ. ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಹರಿದುಬರುತ್ತಲೇ ಇದ್ದಾರೆ. ಈಗ ಕಾರುಣ್ಯಾ ಕೂಡ ಭಾಗಿಯಾಗಿದ್ದಾರೆ.
26
ನಟಿ ಕಾರುಣ್ಯಾ ರಾಮ್ ಮತ್ತು ಆಪ್ತರು ಈಗ ಪ್ರಯಾಗ್‌ರಾಜ್ ಕಡೆ ಪ್ರಯಾಣ ಮಾಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾರುಣ್ಯ ಫೋಟೋ ಅಪ್ಲೋಡ್ ಮಾಡಿದ್ದಾರೆ.
36
'ಹರ ಹರ ಮಹಾದೇವ್....ನಾವು ಏನೂ ಪ್ಲ್ಯಾನ್ ಮಾಡಿರಲಿಲ್ಲ ಆದರೆ ದೇವರು ಪ್ರತಿಯೊಬ್ಬರಿಗೂ ಅವರದ್ದೇ ಪ್ಲ್ಯಾನ್ ಮಾಡಿದ್ದಾನೆ' ಎಂದು ಕಾರುಣ್ಯ ಬರೆದುಕೊಂಡಿದ್ದಾರೆ.
46
'ನಮ್ಮ ಜೀವನದಲ್ಲಿ ಮಿರಾಕಲ್‌ಗಳು ಆಗುತ್ತದೆ ಅದಕ್ಕೆ ಇದೇ ಸಾಕ್ಷಿಯಾಗಿದೆ. ಮಹಾ ಕುಂಭಮೇಳೆ 2025ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿರುವುದು' ಎಂದಿದ್ದಾರೆ ಕಾರುಣ್ಯ.
56
'ಗಂಗಾ, ಯಮುನಾ, ಸರಸ್ವತಿ ಮಾತಾ. ನನ್ನ ಎಲ್ಲಾ ಸರಸ್ವತಿ ಮತ್ತು ಹನುಮಾನ, ಸೀತಾ ಮಂದಿರಕ್ಕೆ ಭೇಟಿ ನೀಡಿದ್ದೀನಿ' ಎಂದು ಕಾರುಣ್ಯ ಸುಮಾರು ಫೋಟೋಗಳನ್ನು ಹಾಕಿದ್ದಾರೆ.
66
ಬನಾರಸಿ, ವಾರಣಾಸಿ, ಕಾಶಿ, ಗಂಗಾ ಮಾತಾ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಸೆರೆ ಹಿಡಿದ ಪ್ರತಿಯೊಂದು ದೃಶ್ಯಗಳನ್ನು ಕಾರುಣ್ಯ ರಾಮ್ ಅಪ್ಲೋಡ್ ಮಾಡಿದ್ದಾರೆ.