ಲವ್ ಓಟಿಪಿ ಕೇಳ್ತಿದ್ದಾರೆ ಅನೀಶ್‌ ತೇಜೇಶ್ವರ್‌: ಓವರ್‌ ಟಾರ್ಚರ್‌ ಪ್ರೆಜರ್‌ಗೆ ಆಕ್ಷನ್ ಕಟ್ ಮಾಡ್ತಾರಂತೆ!

Published : Feb 17, 2025, 04:52 PM ISTUpdated : Feb 17, 2025, 04:53 PM IST

ಚಿತ್ರದ ಶೀರ್ಷಿಕೆಯಲ್ಲಿರುವ ‘ಓಟಿಪಿ’ ಎಂದರೆ ಓವರ್‌ ಟಾರ್ಚರ್‌ ಪ್ರೆಜರ್‌ ಎಂದರ್ಥ. ಈ ತಲೆಮಾರಿನ ಯುವ ಪ್ರೇಮಿಗಳ ಕತೆಯನ್ನು ಒಳಗೊಂಡ ಚಿತ್ರವಿದು. ನಟನೆ ಜತೆಗೆ ಅನೀಶ್‌ ತೇಜೇಶ್ವರ್‌ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಎಂ ವಿಜಯ್‌ ರೆಡ್ಡಿ ನಿರ್ಮಿಸಲಿದ್ದಾರೆ.

PREV
16
ಲವ್ ಓಟಿಪಿ ಕೇಳ್ತಿದ್ದಾರೆ ಅನೀಶ್‌ ತೇಜೇಶ್ವರ್‌: ಓವರ್‌ ಟಾರ್ಚರ್‌ ಪ್ರೆಜರ್‌ಗೆ ಆಕ್ಷನ್ ಕಟ್ ಮಾಡ್ತಾರಂತೆ!

ಅನೀಶ್‌ ತೇಜೇಶ್ವರ್‌ ಅವರ ನಟನೆಯ ಹೊಸ ಚಿತ್ರದ ಟೈಟಲ್‌ ಘೋಷಣೆ ಆಗಿದೆ. ‘ಲವ್‌ ಓಟಿಪಿ’ ಎಂಬುದು ಚಿತ್ರದ ಹೆಸರು. ಕನ್ನಡ ಮತ್ತು ತೆಲುಗಿನಲ್ಲಿ ಮೂಡಿ ಬರಲಿರುವ ಈ ಚಿತ್ರದ ಶೀರ್ಷಿಕೆಯನ್ನು ಪ್ರೇಮಿಗಳ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. 

26

ಅಂದಹಾಗೆ ಚಿತ್ರದ ಶೀರ್ಷಿಕೆಯಲ್ಲಿರುವ ‘ಓಟಿಪಿ’ ಎಂದರೆ ಓವರ್‌ ಟಾರ್ಚರ್‌ ಪ್ರೆಜರ್‌ ಎಂದರ್ಥ. ಈ ತಲೆಮಾರಿನ ಯುವ ಪ್ರೇಮಿಗಳ ಕತೆಯನ್ನು ಒಳಗೊಂಡ ಚಿತ್ರವಿದು. ನಟನೆ ಜತೆಗೆ ಅನೀಶ್‌ ತೇಜೇಶ್ವರ್‌ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಎಂ ವಿಜಯ್‌ ರೆಡ್ಡಿ ನಿರ್ಮಿಸಲಿದ್ದಾರೆ.

36

‘ರಾಮಾರ್ಜುನ ಚಿತ್ರದ ನಂತರ ಮತ್ತೆ ನಿರ್ದೇಶಕ್ಕಿಳಿಯುತ್ತಿದ್ದೇನೆ. ನಟನೆ ಮತ್ತು ನಿರ್ದೇಶನ ಎರಡೂ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಈ ಚಿತ್ರದಲ್ಲಿ ನನ್ನನ್ನು ವಿಶಿಷ್ಟ ಪಾತ್ರಲ್ಲಿ ನೋಡಬಹುದು. ಚಿತ್ರದ ಶೀರ್ಷಿಕೆ, ತಾರಾಗಣ ಸೇರಿದಂತೆ ಉಳಿದ ವಿವರಗಳನ್ನು ಸದ್ಯದಲ್ಲೇ ಬಹಿರಂಗಗೊಳಿಸುತ್ತೇನೆ’ ಎನ್ನುತ್ತಾರೆ ಅನೀಶ್‌ ತೇಜೇಶ್ವರ್‌.
 

46

ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ನಮ್ಮ ತಂಡವು ಶ್ರಮಿಸುತ್ತಿದೆ. ನೀವು ನನ್ನನ್ನು ಮತ್ತೊಂದು ಭರವಸೆಯ ಮತ್ತು ವಿಶಿಷ್ಟ ಪಾತ್ರದಲ್ಲಿ ನೋಡುತ್ತೀರಿ ಎಂದು ನಾನು ನಂಬುತ್ತೇನೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪಲು, ನಾವು ಕನ್ನಡ ಮತ್ತು ತೆಲುಗು ಎರಡರಲ್ಲೂ ಏಕಕಾಲದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ ಎಂದಿದ್ದಾರೆ.
 

56

ಇನ್ನು 2010ರಲ್ಲಿ ತೆರೆಕಂಡ ನಮ್ಮ ಏರಿಯಾದಲ್ಲೊಂದಿನ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಅನೀಶ್‌ ತೇಜೇಶ್ವರ್‌ ಪಾದಾರ್ಪಣೆ ಮಾಡಿದರು.

66

ನಂತರ ಕಾಫಿ ವಿತ್ ಮೈ ವೈಫ್ ಎಂಬ ಕನ್ನಡ ಮತ್ತು ತೆಲುಗು ಚಿತ್ರ ಮಾಡಿದರು.ಇವರಿಗೆ ಹೆಸರು ತಂದು ಕೊಟ್ಟಿದ್ದು `ಅಕಿರ' ಚಿತ್ರ. ಇದರಲ್ಲಿನ ಡ್ಯಾನ್ಸ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.
 

Read more Photos on
click me!

Recommended Stories