ಅಕ್ಕ ಐಶ್ವರ್ಯ ಸರ್ಜಾ ಮದುವೆಯಲ್ಲಿ ಸಖತ್ತಾಗಿ ಮಿಂಚಿದ ಅಂಜನಾ ಅರ್ಜುನ್

Published : Jun 19, 2024, 03:32 PM ISTUpdated : Jun 19, 2024, 04:41 PM IST

ಇತ್ತೀಚೆಗಷ್ಟೇ ನಟ ಅರ್ಜುನ್ ಸರ್ಜಾ ಹಿರಿಯ ಪುತ್ರಿ ಐಶ್ವರ್ಯ ಸರ್ಜಾ ವಿವಾಹ ನಡೆದಿದ್ದು, ಅಕ್ಕನ ಮದುವೆಯಲ್ಲಿ ಅಂಜನಾ ಅರ್ಜುನ್ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.   

PREV
17
ಅಕ್ಕ ಐಶ್ವರ್ಯ ಸರ್ಜಾ ಮದುವೆಯಲ್ಲಿ ಸಖತ್ತಾಗಿ ಮಿಂಚಿದ ಅಂಜನಾ ಅರ್ಜುನ್

ದಕ್ಷಿಣ ಭಾರತದ ಜನಪ್ರಿಯ ನಟ ಅರ್ಜುನ್ ಸರ್ಜಾ (Arjun Sarja) -ನಿವೇದಿತಾ ದಂಪತಿ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ ವಿವಾಹ, ತಮಿಳಿನ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಜೊತೆ ಜೂನ್ 10 ರಂದು ಅದ್ಧೂರಿಯಾಗಿ ನಡೆದಿತ್ತು. 
 

27

ಅಕ್ಕನ ಮದುವೆ ಸಮಾರಂಭದಲ್ಲಿ ತಂಗಿ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ ಅರ್ಜುನ್ (Anjana Sarja) ಮಿಂಚಿದ್ದು, ಸಂಭ್ರಮದ ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಅಂಜನಾ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

37

ಅಕ್ಕನ ಮದುವೆ (Aishwarya Sarjas Marriage) ಸಮಾರಂಭಕ್ಕೆ ಅಂಜನಾ ತುಂಬಾ ಸಿಂಪಲ್ ಆಗಿರುವ ಆಫ್ ವೈಟ್ ಬಣ್ಣದ ಸೀರೆ, ಅದೇ ಬಣ್ಣದ ಮೆಘಾ ಸ್ಲೀವ್ ಬ್ಲೌಸ್ ಧರಿಸಿ, ಸಿಂಪಲ್ ಡೈಮಂಡ್ ಇಯರಿಂಗ್, ಡೈಮಂಡ್ ನೆಕ್ಲೆಸ್ ಧರಿಸಿದ್ದಾರೆ. ಇನ್ನ ರಿಸೆಪ್ಶನ್‌ಗೆ ಪೀಚ್ ಬಣ್ಣದ ನೆಟೆಡ್ ಸೀರೆಯಲ್ಲಿ ಅದ್ಭುತವಾಗಿ ಮಿಂಚಿದ್ದರು. 
 

47

ಅಂಜನಾ ಬಗ್ಗೆ ಹೇಳೋದಾದ್ರೆ ಇವರೂ ಅಕ್ಕ ಐಶ್ವರ್ಯಳಂತೆ ಅಂದಗಾತಿ, ತುಂಬಾ ಕ್ಯೂಟ್ ಆಗಿದ್ದಾರೆ. ಐಶ್ವರ್ಯಾ ಸಿನಿಮಾಗಳಲ್ಲಿ ಮಿಂಚಿದ್ರೆ, ತಂಗಿ ಅಂಜನಾ ತಮ್ಮದೇ ಆದ ಸರ್ಜಾಸ್ ವರ್ಲ್ಡ್ ಬ್ರ್ಯಾಂಡ್ ಮೂಲಕ ಸದ್ದು ಮಾಡ್ತಿದ್ದಾರೆ. 
 

57

ಅಂಜನಾ ತುಂಬಾ ಬೋಲ್ಡ್ ಆಗಿದ್ದು, ತಮ್ಮ ಬೋಲ್ಡ್ ಫೋಟೋ ಶೂಟ್, ಮಾಡರ್ನ್ ಡ್ರೆಸ್‌ಗಳಲ್ಲಿ ಫೋಟೋ ಶೂಟ್ ಮಾಡಿಸುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡ್ತಿರ್ತಾರೆ ನಟಿ. ಸಿನಿಮಾದಿಂದ ದೂರ ಇದ್ರೂ ಇವರಿಗೆ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. 
 

67

ಕೆಲವು ವರ್ಷಗಳ ಹಿಂದಷ್ಟೇ ಅಂಜನಾ ತಮ್ಮದೇ ಆದ ಹ್ಯಾಂಡ್ ಬ್ಯಾಗ್ ಬ್ರ್ಯಾಂಡ್ (hand bag brand) ಆರಂಭಿಸಿದ್ದು, ಇದರ ಪ್ರಾಮುಖ್ಯತೆ ಅಂದ್ರೆ, ಇಲ್ಲಿ ಪ್ರಾಣಿಗಳ ಚರ್ಮದ ಬದಲಾಗಿ, ಗಿಡಗಳ ಲೆದರ್ ಬಳಸಿ ಕೈ ಚೀಲ ತಯಾರಿಸಲಾಗುತ್ತದೆ. 
 

77

ಅಂಜನಾ ಅವರೇ  ಸರ್ಜಾಸ್ ವರ್ಲ್ಡ್ ಬ್ರ್ಯಾಂಡ್ ನ (Sarjas World Brand) ಸಿಇಒ ಮತ್ತು ಮಾಲೀಕರೂ ಆಗಿದ್ದಾರೆ. ಇವರ ಇನ್ಸ್ಟಾಗ್ರಾಂ ಪೇಜ್‌ಗೆ ಹೋದ್ರೆ, ಅಲ್ಲಿ ನೀವು ಸರ್ಜಾಸ್ ವರ್ಲ್ಡ್ ಬ್ರ್ಯಾಂಡ್ ಪೇಜ್ ಲಿಂಕ್ ಕಾಣಬಹುದು, ಬಹು ಸುಂದರವಾದ ಹ್ಯಾಂಡ್ ಬ್ಯಾಗ್‌ಗಳು ಇಲ್ಲಿ ಲಭ್ಯವಿದೆ. 
 

Read more Photos on
click me!

Recommended Stories