ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿ ಮಾಡಿದ ಸಿನಿಮಾ ಕಾಂತಾರ. ಸದ್ಯ ಕಾಂತಾರ 1 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕುಂದಾಪುರದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.
ಕಾಂತಾರ ಚಿತ್ರದ ಮೂಲಕ ಫ್ಯಾಷನ್ ಡಿಸೈನರ್ ಹಾಗೂ ಪರ್ಸನಲ್ ಡಿಸೈನರ್ ಆಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟವರು ಪ್ರಗತಿ. ಅಲ್ಲದೆ ಕಾಂತಾರ ಚಿತ್ರದಲ್ಲಿ ಮಕ್ಕಳ ಜೊತೆ ನಟಿಸಿದ್ದಾರೆ ಕೂಡ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರಗತಿ ಶೆಟ್ಟಿ ಇದೀಗ ಪರ್ಪಲ್ ಬಣ್ಣದ ರೇಶ್ಮೆ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಮಂಗಳೂರು ಮಲ್ಲಿಗೆ ಹೂವ ಮುಡಿದಿರುವುದು ನೆಟ್ಟಿಗರ ಗಮನ ಸೆಳೆದಿದೆ.
'Wrapped in elegance, captured with love.Thanks to him for the perfect shot' ಎಂದು ಪ್ರಗತಿ ಬರೆದುಕೊಂಡಿದ್ದಾರೆ. ಹಾಗಿದ್ರೆ ಈ ಫೋಟೋ ಕ್ಲಿಕ್ ಮಾಡಿರುವುದು ರಿಷಬ್ ಎನ್ನಬಹುದು.
ರಿಕ್ಕಿ ಸಿನಿಮಾ ರಿಲೀಸ್ ದಿನ ಥಿಯೇಟರ್‌ನಲ್ಲಿ ಪ್ರಗತಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಮೊದಲ ಸಲ ಭೇಟಿ ಮಾಡಿರುವುದು. ಅಲ್ಲಿಂದ ಸ್ನೇಹ ಬೆಳೆದು ಪ್ರೀತಿಯಾಗಿ ಬೆಳೆಯಿತ್ತು.
ಕಾಂತಾರ 2 ಚಿತ್ರಕ್ಕೂ ಪ್ರಗತಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರಣ ಪ್ರಗತಿ ಕೂಡ ಮಕ್ಕಳ ಜೊತೆ ಕುಂದಾಪುರಕ್ಕೆ ಆಗಾಗ ಭೇಟಿ ನೀಡುತ್ತಾರೆ.