ತನಗಾಗಿ ಜಗತ್ತಿನೊಂದಿಗೆ ಹೋರಾಡಿ, ಯಶಸ್ಸಿನ ಭಾಗವಾದ ಅತ್ತಿಗೆಗೆ ರಾಖಿ ಕಟ್ಟಿ ಕೃತಜ್ಞತೆ ಸಲ್ಲಿಸಿದ ಸಂಗೀತ ಶೃಂಗೇರಿ

First Published | Aug 20, 2024, 2:35 PM IST

ನಟಿ ಸಂಗೀತಾ ಶೃಂಗೇರಿ ಅವರ ರಕ್ಷಾ ಬಂಧನ ಆಚರಣೆಯಲ್ಲಿ ಅಣ್ಣನೊಂದಿಗೆ ಅತ್ತಿಗೆಗೂ ವಿಶೇಷ ಸ್ಥಾನ ನೀಡಿದ್ದಾರೆ. ಬಿಗ್ ಬಾಸ್  ಪಯಣದಲ್ಲಿ ಅತ್ತಿಗೆ ನೀಡಿದ ಬೆಂಬಲಕ್ಕೆ ಸಂಗೀತಾ ಭಾವುಕ ಕೃತಜ್ಞತೆ ಸಲ್ಲಿಸಿದ್ದು, ಅತ್ತಿಗೆಗೆ ರಾಖಿ ಕಟ್ಟಿ ಶುಭ ಕೋರಿದ್ದಾರೆ. 
 

ನಿನ್ನೆ ದೇಶಾದ್ಯಂತ ರಕ್ಷಾ ಬಂಧನವನ್ನ (Raksha Bandhan) ಹಬ್ಬವಾಗಿ ಪ್ರತಿ ಮನೆಮನೆಯಲ್ಲೂ ಸಂಭ್ರಮದಿಂದ ಆಚರಿಸಲಾಗಿತ್ತು. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಹ ಸಹೋದರತೆಯ ಬಾಂಧವ್ಯ ಸಾರುವ ರಕ್ಷಾ ಬಂಧವನವನ್ನ ಸಂಭ್ರಮಿಸಿದ್ರು. ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಸ್ಪರ್ಧಿ ಸಂಗೀತ ಶೃಂಗೇರಿ ಕೂಡ ರಕ್ಷಾ ಬಂಧನ ಸಂಭ್ರಮಿಸಿದ್ದಾರೆ. 
 

ಸಂಗೀತ ಶೃಂಗೇರಿ (Sangeetha Sringeri) ತಮ್ಮ ಪ್ರೀತಿಯ ಅಣ್ಣನಿಗೆ ಹಾಗೂ ಅತ್ತಿಗೆಗೆ ರಕ್ಷಾ ಬಂಧನ ಕಟ್ಟಿ ಸಂಭ್ರಮಿಸಿದ್ದಾರೆ. ಅಣ್ಣ ಮತ್ತು ಅತ್ತಿಗೆಗೆ ರಾಖಿ ಕಟ್ಟುವ ಸುಂದರವಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಂಗೀತ, ತನ್ನನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸುತ್ತಿರುವ ಈ ಜೋಡಿಗೆ ಶುಭ ಕೋರಿದ್ದಾರೆ. 
 

Tap to resize

ಅಣ್ಣನಿಗೆ ರಾಖಿ ಕಟ್ಟುತ್ತಿರುವ ಫೋಟೋಗಳನ್ನು ಹಂಚಿಕೊಂಡಿರುವ ಸಂಗೀತಾ ಹ್ಯಾಪಿ ರಕ್ಷಾ ಬಂಧನ ನಿನ್ನ ಜೀವನದ ಉದ್ದಕ್ಕೂ ಸಂತೋಷ, ಸಮೃದ್ಧಿ ಮತ್ತು ಬೆಳವಣಿಗೆ ಸಿಗಲಿ. ನನ್ನ ಜೀವನದ ಎಲ್ಲಾ ಹಂತದಲ್ಲೂ ನನ್ನೊಂದಿಗೆ ಇದ್ದು, ನನ್ನನ್ನು ಬೆಂಬಲಿಸಿದಕ್ಕೆ ಥ್ಯಾಂಕ್ಯೂ ಎಂದಿದ್ದಾರೆ. 
 

ಸಂಗೀತ ಶೃಂಗೇರಿ ತಮ್ಮ ಅತ್ತಿಗೆ ಸುಚಿ (Suchi) ಜೊತೆ ಎಷ್ಟೊಂದು ಕ್ಲೋಸ್ ಆಗಿದ್ದಾರೆ ಅನ್ನೋದನ್ನ ನೀವೇ ನೋಡಿದ್ದೀರಿ. ಅಣ್ಣನಿಗಿಂತ ಹೆಚ್ಚಾಗಿ ಸಂಗೀತ ಕ್ಲೋಸ್ ಆಗಿರೋದು ಅತ್ತಿಗೆ ಜೊತೆಗೆ. ಸಂಗೀತಾ ಬಿಗ್ ಬಾಸ್ ನಲ್ಲಿರೋವಾಗ, ಸಂಗೀತ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನೋಡಿಕೊಳ್ತಿದ್ದಿದ್ದೇ ಸುಚಿ. ಒಂದಕ್ಕಿಂತ ಒಂದು ಅದ್ಭುತ ಪೋಸ್ಟ್ ಹಾಕೋ ಮೂಲಕ ಸಂಗೀತ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದರು ಸುಚಿ. 
 

ಬಿಗ್ ಬಾಸ್ ಮನೆಯಲ್ಲಿ (Bigg Boss) ಸಂಗೀತ ತಮಗೆ ತುಂಬಾನೆ ನೋವಾದಾಗ, ಹೇಳಿ ಕೊಂಡ ಹೆಸರು ಕೂಡ ಸುಚಿಯವರದ್ದೆ. ಅಷ್ಟೇ ಅಲ್ಲ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಕೂಡ, ಕಾರ್ಯಕ್ರಮದ ಫಿನಾಲೆಯಲ್ಲಿ ಸುಚಿಯವರು ಇಷ್ಟುಸಮಯ ಪಟ್ಟ ಪರಿಶ್ರಮದ ಬಗ್ಗೆ ಹಾಡಿ ಹೊಗಳಿದ್ದರೂ ಕೂಡ. ತನ್ನ ಎಲ್ಲಾ ಹಂತದಲ್ಲೂ ಜೊತೆಯಾದ ಅತ್ತಿಗೆಗೂ ಸಂಗೀತ ರಾಖಿ ಕಟ್ಟುವ ಮೂಲಕ ಶುಭ ಕೋರಿದ್ದಾರೆ. 
 

ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಅತ್ತಿಗೆಗೆ ರಾಖಿ ಕಟ್ಟುವ ಹಾಗೂ ಮತ್ತೊಂದಿಷ್ಟು ಫೋಟೋ ಶೇರ್ ಮಾಡಿರುವ ಸಂಗೀತಾ, ರಕ್ಷಾ ಬಂಧನದ ಶುಭಾಶಯಗಳು ಸುಚಿ, ಯಾವಾಗಲೂ ನನ್ನೊಂದಿಗೆ ಇದ್ದಕ್ಕಾಗಿ, ನನಗಾಗಿ ಪ್ರಪಂಚದೊಂದಿಗೆ ಹೋರಾಡಿದ್ದಕ್ಕಾಗಿ ಮತ್ತು ಇಂದು ನನ್ನ ಯಶಸ್ಸಿನಲ್ಲಿ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು, ನೀವು ಆಯ್ಕೆ ಮಾಡುವ ಪ್ರತಿಯೊಂದು ಮಾರ್ಗದಲ್ಲೂ ನಿಮಗೆ ಸಮೃದ್ಧಿ ಆರೋಗ್ಯ ಮತ್ತು ಯಶಸ್ಸನ್ನು ನಾನು ಬಯಸುತ್ತೇನೆ. ನೀವು ಅತ್ಯುತ್ತಮ ಸಹೋದರಿ, ಹೆಂಡತಿ, ತಾಯಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಯಾವಾಗಲೂ ರಕ್ಷಿಸುವ ಮತ್ತು ಸಲಹುವ ಆಪ್ತ ಸ್ನೇಹಿತೆ ನೀವು ಎಂದು ಬರೆದುಕೊಂಡಿದ್ದಾರೆ ಸಂಗೀತ ಶೃಂಗೇರಿ.
 

ಈ ಅತ್ತಿಗೆ ನಾದಿಯ ಬಾಂಧವ್ಯ ನೋಡಿ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ನಿಮ್ಮ ಜೋಡಿಯನ್ನು ನೋಡೋದೆ ಚೆಂದ ಎಂದು ಹೇಳಿದ್ದಾರೆ. ನಿಮ್ಮದು ಎಂದಿಗೂ ಬೇರೆ ಮಾಡಲಾಗದ ಬಾಂಧವ್ಯ, ನಿಮ್ಮಿಬ್ಬರ ಬಾಂಧವ್ಯ ಯಾವಾಗ್ಲೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ ಜನ. ಈ ಪೋಸ್ಟ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. 
 

Latest Videos

click me!