ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ; ಪುನೀತ್‌ ರಾಜ್‌ಕುಮಾರ್‌ಗೆ ಅರ್ಪಿಸಿದ 'ಕಾಂತಾರ' ರಿಷಬ್ ಶೆಟ್ಟಿ

First Published | Feb 21, 2023, 9:42 AM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಫೆಬ್ರವರಿ 20ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಾರ ಚಿತ್ರಕ್ಕೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಾಂತಾರ ಚಿತ್ರವನ್ನು ನಿರ್ದೇಶಿಸಿ ನಟಿಸಿ ಡಿವೈನ್ ಸ್ಟಾರ್ ಎಂದು ಅಭಿಮಾನಿಗಳಿಂದ ಪ್ರೀತಿಯ ಬಿರುದು ಪಡೆದಿರುವ ರಿಷಬ್ ಶೆಟ್ಟಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.

ಫೆಬ್ರವರಿ 20ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ ನಟ ಅತ್ಯಂತ ಭರವಸೆಯ ನಟ ಹಿಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Tap to resize

'ಈ ಪ್ರೀತಿ, ಪುರಸ್ಕಾರಕ್ಕೆ ನಾನು ಸದಾ ಚಿರಋಣಿ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನೆಮಾ ಮಾಡುವ,ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ' ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ. 

 'ನನ್ನನ್ನು ನಂಬಿ ಅವಕಾಶ ಕೊಟ್ಟಿದ ಹೊಂಬಾಳೆ ಫಿಲ್ಮ್‌ ಮತ್ತು ವಿಜಯ್ ಕಿರಗಂದೂರು ಸರ್‌ ಅವರಿಗೆ ಋಣಿಯಾಗಿರುವೆ. ನಿಮ್ಮ ಜೊತೆ ಕೈ ಜೋಡಿಸಿ ಹೆಚ್ಚು ಸಿನಿಮಾ ಮಾಡಲು ಕಾಯುತ್ತಿರುವೆ' ಎಂದು ಹೇಳಿದ್ದಾರೆ.

'ಕಾಂತಾರ ಇಡೀ ತಂಡದಿಂದ ಇದು ಸಾಧ್ಯವಾಗಿದ್ದು ಹೀಗಾಗಿ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರಿಗೆ ಈ ಪ್ರಶಸ್ತಿಯನ್ನು ಅರ್ಪಿಸುವೆ. ನನ್ನ ಪಿಲ್ಲರ್ ಆಫ್‌ ಲೈಫ್‌ ಪ್ರಗತಿ ಶೆಟ್ಟಿ ಕೂಡ' ಎಂದು ಹೇಳಿದ್ದಾರೆ. 

ಈ ಪ್ರಶಸ್ತಿಯನ್ನು ದೈವ ನರ್ತಕರು, ಕರ್ನಾಟಕದ ಜನತೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಭಗವಾನ್ ಸರ್‌ಗೆ ಅರ್ಪಿಸುವೆ ಎಂದಿದ್ದಾರೆ. 

Latest Videos

click me!