ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಕ್ಲೋಸ್ ಕಸಿನ್ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋಗಳು ಹಂಚಿಕೊಂಡಿದ್ದಾರೆ.
26
'ಬಣ್ಣ ಬಣ್ಣದ ಬಟ್ಟೆ ಧರಿಸುವುದು, ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು, ಕುಟುಂಬಸ್ಥರನ್ನು ಭೇಟಿ ಮಾಡುವುದು ಹಾಗೇ ಸಿಕ್ಕಾಪಟ್ಟೆ ಮಜಾ ಮಾಡಿದ್ದೀವಿ' ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.
36
'ಇಡೀ ಮದುವೆ ಬ್ಯುಸಿ ಕೆಲಸ ಮುಗಿಸಿದ ನಂತರ ಪಾಪ್‌ಸಿಕಲ್ (ಐಸ್ ಕ್ಯಾಂಡಿ) ಸೇವಿಸುವ ಮೂಲಕ ಮುಗಿಸಲಾಗಿದೆ. ಮದುವೆ ಎಷ್ಟು ಖುಷಿ ಕೊಡುತ್ತವೆ ಅಲ್ವಾ?' ಎಂದು ರಾಧಿಕಾ ಹೇಳಿದ್ದಾರೆ.
46
ರಾಧಿಕಾ ಕ್ಲೋಸ್ ಕಸಿನ್ ಮದುವೆ ಕೊಂಕಣಿ ಶೈಲಿಯಲ್ಲಿ ಮಾಡಲಾಗಿದೆ. ಪ್ರತಿಯೊಂದು ಶಾಸ್ತ್ರದ ಫೋಟೋಗಳನ್ನು ಅಪ್ಲೋಡ್ ಮಾಡಿ ಮದುವೆ ಹೇಗಿತ್ತು ಎಂದು ಅಪ್ಡೇಟ್ ನೀಡಿದ್ದಾರೆ.
56
ಶ್ವೇತ ಬಣ್ಣದ 3 ಪೀಸ್ ಸೂಟ್‌ನಲ್ಲಿ ಯಥರ್ವ್ ಕಾಣಿಸಿಕೊಂಡರೆ, ಕಲರ್‌ಫುಲ್ ಫ್ಲೋರಲ್ ಡ್ರೆಸ್‌ನಲ್ಲಿ ಐರಾ ಪೋಸ್ ಕೊಟ್ಟಿದ್ದಾರೆ. ಸ್ಟಾರ್ ಕಿಡ್ಸ್ ಸಿನಿಮಾ ಮಾಡಿ ಎಂದಿದ್ದಾರೆ ನೆಟ್ಟಿಗರು.
66
ಕುಟುಂಬಸ್ಥರ ಮದುವೆಯಲ್ಲೂ ರಾಧಿಕಾ ಇಷ್ಟೊಂದು ಸಿಂಪಲ್ ಆಗಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅದರಲ್ಲೂ ಕ್ಯಾಮೆರಾಗೆ ಐರಾ ಮತ್ತು ಯಥರ್ವ್ ಫೋಸ್ ಕೊಟ್ಟಿರುವುದು ವೈರಲ್ ಆಗುತ್ತಿದೆ.