ಬಿಕಿನಿ ಧರಿಸಿ ಉಯ್ಯಾಲೆ ಆಡಿದ ಸಂಯುಕ್ತಾ ಹೆಗ್ಡೆ: ಬೇಸಿಗೆಯಲ್ಲಿ ಮತ್ತಷ್ಟು ಟೆಂಪರೇಚರ್ ಹೆಚ್ಚಿಸ್ಬೇಡಿ ಎಂದ ಪಡ್ಡೆಹೈಕ್ಳು!

First Published | May 16, 2024, 7:07 PM IST

ಚಂದನವನದ ಹಾಟ್‌ ಆಂಡ್‌ ಬೋಲ್ಡ್‌ ಸುಂದರಿ, ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಮನ್ನಣೆ ಗಳಿಸಿದ ಸಂಯುಕ್ತಾ ಹೆಗ್ಡೆ ಅವರು ಹಾಟೆಸ್ಟ್ ಬಿಕಿನಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ಕಿರಿಕ್‌ ಸುಂದರಿ ನಟಿ ಸಂಯುಕ್ತಾ ಹೆಗ್ಡೆ ಥೈಲ್ಯಾಂಡ್‌ನ ಬೀಚ್‌ವೊಂದರಲ್ಲಿ ವೆಕೇಷನ್ ಎಂಜಾಯ್‌ ಮಾಡಲು ಹೋಗಿದ್ದಾರೆ. ಅಲ್ಲಿ ಬಿಕಿನಿ ಧರಸಿಕೊಂಡು ಸೋಶಿಯಲ್ ಮಿಡಿಯಾದಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.   

ನಟಿ ಸಂಯುಕ್ತಾ ಹೆಗ್ಡೆ ಆಕರ್ಷಕವಾದ ಪ್ರಿಂಟೆಡ್ ಬಿಕಿನಿ ಹಾಕಿಕೊಂಡು ಸಖತ್‌  ಹಾಟ್ ಆಗಿ ಫೋಟೋಗಳಿಗೆ ಪೋಸ್‌ ನೀಡುವುದರ ಮೂಲಕ, ಈ ಚೆಲುವೆ ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ್ದಾರೆ.  

Tap to resize

ಸೌತ್‌ ಬೋಲ್ಡ್‌ ಬೆಡಗಿ ಸಂಯುಕ್ತಾ ಹೆಗ್ಡೆ ಬೀಚ್‌ ಬಳಿ ಬಿಕಿನಿಯಲ್ಲಿ  ಉಯ್ಯಾಲೆ ಆಡಿದ ದೃಶ್ಯ ನೆಟ್ಟಿಗರನ್ನು ಇನ್ನಷ್ಟು ಗಮನ ಸೆಳೆಯುವಂತೆ ಮಾಡಿದಂತಿದೆ. 

ಸಂಯುಕ್ತಾ ಹೆಗ್ಡೆ ಮರಳಿನಲ್ಲಿ ಕಾಲು ಚಾಚಿ ಕುಳಿತು ಅಲ್ಲಿಯ ವಾತಾವರಣವನ್ನು ಸಖತ್‌ ಖುಷಿಯಾಗಿ ಎಂಜಾಯ್‌ ಮಾಡುತ್ತಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ವಿಟಮಿನ್‌ sea ಕೊರತೆ ಮತ್ತೆ ಕಾಣ್ತಿದೆ. ಅದಕ್ಕೆ ಪರಿಹಾರ ಶೀಘ್ರದಲ್ಲೇ ಸಿಗುತ್ತೆ ಅಂತಲೂ ಗೊತ್ತಿದೆ. ಈ ಫೋಟೋಗಳನ್ನು ಕೆಲ ಸಮಯದ ಹಿಂದೆ ಥೈಲ್ಯಾಂಡ್‌ನಲ್ಲಿ ಕ್ಲಿಕ್ಕಿಸಿದ್ದು. 

ಬೀಚ್‌ ಅಂದ್ರೆ ಭಾಳ ಇಷ್ಟ. ಬೀಚ್‌ ಫೋಟೋಗಳನ್ನು ನೋಡಿದಾಗ ಮತ್ತೆ ಅಲ್ಲಿಗೆ ಯಾವಾಗ ಹೋಗ್ತೀನೋ ಅಂತನಿಸುತ್ತೆ’ ಎಂದು ತಮ್ಮ ಬೀಚ್‌ ಪ್ರೀತಿಯನ್ನೂ ಹಂಚಿಕೊಂಡಿದ್ದಾರೆ.

ಸಂಯುಕ್ತಾ ಹೆಗ್ಡೆ ಪೋಟೋಗಳಿಗೆ ಕಾಮೆಂಟ್‌ ಬಾಕ್ಸ್‌ನಲ್ಲಿ ನೆಟ್ಟಿಗರು ನಿಮ್ ಫಿಟ್ನೆಸ್ ಫರ್ಪೇಕ್ಟ್ ಆಗಿದೆಯೆಂದು ಹೊಗಳಿದ್ದಾರೆ. ಈ ನಟಿ ತಮ್ಮ ಸಿನಿಮಾಗಳ ಜೊತೆಗೆ ಅಭಿಮಾನಿಗಳ ಜೊತೆಗೆ ಇಂಟರಾಕ್ಟೀವ್‌ ಆಗಿ ಕೂಡ ಇರುತ್ತಾರೆ.  

ನಟಿ ಸಂಯುಕ್ತಾ ಹೆಗ್ಡೆ ಫೋಟೋಗಳಿಗೆ ಸೋಶಿಯಲ್‌ ಮಿಡಿಯಾದಲ್ಲಿ 44 ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿದ್ದು, ಹಾಗೆಯೇ ಈ ನಟಿಯ ಹಾಟ್ ಅವತಾರಕ್ಕೆ ಫಿದಾ ಆಗಿ ಸಾಕಷ್ಟು ಕಾಮೆಂಟ್‌ಗಳು ಕೂಡ ಬಂದಿವೆ.  

Latest Videos

click me!