Yuva Rajkumar Film:ಪುನೀತ್‌ರಾಜ್‌ಕುಮಾರ್ ಅವರಿಗಾಗಿಯೇ ಬರೆದುಕೊಂಡಿದ್ದ ಕಥೆಗೆ ಯುವ ನಾಯಕ!

Suvarna News   | Asianet News
Published : Dec 13, 2021, 04:15 PM IST

 ನಟ ಪುನೀತ್‌ರಾಜ್‌ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರ ಕಾಂಬಿನೇಶನ್‌ನಲ್ಲಿ ಮತ್ತೊಂದು ಸಿನಿಮಾ ಬರುವ ತಯಾರಿಯಲ್ಲಿತ್ತು. ಆ ಚಿತ್ರಕ್ಕೆ ಯುವ ನಾಯಕನಾಗಲಿದ್ದಾರೆ.  Photo Credit: YuvaRajkumar Instagram 

PREV
110
Yuva Rajkumar Film:ಪುನೀತ್‌ರಾಜ್‌ಕುಮಾರ್ ಅವರಿಗಾಗಿಯೇ ಬರೆದುಕೊಂಡಿದ್ದ ಕಥೆಗೆ ಯುವ ನಾಯಕ!

ನಿರ್ದೇಶಕ ಸಂತೋಷ್ ಆನಂದ್‌ರಾಮ್ ‘ಯುವರತ್ನ’ ನಂತರ ಪುನೀತ್ (Puneeth Rajkumar) ಅವರಿಗಾಗಿಯೇ ಸಂತೋಷ್ ಅವರು ಕತೆ ಬರೆದುಕೊಂಡಿದ್ದರು. 

210

 ಪುನೀತ್ ಅವರು ಕೂಡ ಕತೆ ಓಕೆ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ದ್ವಿತ್ವ ’ ಸಿನಿಮಾ ನಂತರ ಮತ್ತೆ ‘ರಾಜಕುಮಾರ’ ಜೋಡಿಯಿಂದ ಮತ್ತೊಂದು ಸಿನಿಮಾ ಬರುತ್ತಿತ್ತು. 

310

ಈ ಚಿತ್ರವನ್ನು ವಿಜಯ್ ಕಿರಗಂದೂರು ಅವರೇ ನಿರ್ಮಿಸಬೇಕಿತ್ತು. ‘ಯುವರತ್ನ’ ಚಿತ್ರದ ನಂತರ ಸೆಟ್ಟೇರಬೇಕಿದ್ದ ಈ ಸಿನಿಮಾ ಪುನೀತ್ ಅಗಲಿಕೆಯಿಂದ ಕತೆ ಟೇಕಪ್ ಆಗಲಿಲ್ಲ.

410

ಆದರೆ, ಈಗ ಪುನೀತ್ ಅವರಿಗಾಗಿಯೇ ಬರೆದಿದ್ದ ಕತೆಗೆ ಜೀವ ಬರುತ್ತಿದೆ. ಹೌದು, ಈ ಕತೆಯನ್ನು ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವರಾಜ್‌ಕುಮಾರ್ ಅವರಿಗೆ ಈ ಚಿತ್ರ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

510

ಈಗಾಗಲೇ ಈ ನಿಟ್ಟಿನಲ್ಲಿ ಮಾತುಕತೆ ಮಾತುಕತೆ ಆಗಿದೆ ಎನ್ನಲಾಗುತ್ತಿದೆ. ಹಾಗೆ ನೋಡಿದರೆ ‘ಯುವ-01’  ಹೆಸರಿನಲ್ಲಿ ಸೆಟ್ಟೇರಿದ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿತ್ತು.

610

ಮೊದಲ ಚಿತ್ರ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ಇನ್ನೂ ಶೂಟಿಂಗ್ ಹಂತದಲ್ಲಿದೆ. ಈಗ ಪುನೀತ್ ಅವರ ಕತೆಗೆ ಯುವರಾಜ್‌ಕುಮಾರ್ ಹೀರೋ ಆಗುತ್ತಿದ್ದಾರೆ ಎನ್ನುವುದು ಸದ್ಯದ ಬ್ರೇಕಿಂಗ್ ಸುದ್ದಿ. 

710

ಯುವರಾಜ್‌ಕುಮಾರ್ ಅವರನ್ನು ದೊಡ್ಡ ಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬುದು ಪುನೀತ್ ಅವರ ಆಸೆಯೂ ಆಗಿತ್ತು. ಹೀಗಾಗಿ ಮೊದಲ ಚಿತ್ರದ ಟೈಟಲ್ ಟೀಸರ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರು.

810

ಯಾಕೋ ಚಿತ್ರದ ಇನ್ನೂ ಶೂಟಿಂಗ್ ಹಂತ ದಾಟಿ ಬಂದಿಲ್ಲ. ಹೀಗಾಗಿ ಪುನೀತ್ ಅವರ ಕನಸಿನಂತೆ ಅವರಿಗಾಗಿಯೇ ಬರೆದಿದ್ದ ಕತೆಯ ಮೂಲಕ ಯುವರಾಜ್‌ಕುಮಾರ್ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸುವ ಕೆಲಸಕ್ಕೆ ಮುಂದಾಗಿದ್ದು, ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರು ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

910

ಎಲ್ಲವೂ ಅಂದುಕೊಂಡಂತೆ ಆದರೆ, ಜನವರಿ ಎರಡು ಅಥವಾ ಮೂರನೇ ವಾರದಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಆದರೆ, ಈ ಚಿತ್ರಕ್ಕೆ ಎಂದಿನಂತೆ ಹೊಂಬಾಳೆ ಫಿಲಮ್‌ಸ್ನ ವಿಜಯ್ ಕಿರಗಂದೂರು ಅವರೇ ನಿರ್ಮಾಪಕರಾಗಲಿದ್ದಾರೆಯೇ ಅಥವಾ ಪಿಆರ್‌ಕೆಯಿಂದ ಈ ಚಿತ್ರ ನಿರ್ಮಾಣಗೊಳ್ಳಲಿದೆಯೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. 

1010

ಎಲ್ಲವೂ ಜನವರಿ ತಿಂಗಳಲ್ಲಿ ಅಂತಿಮಗೊಳ್ಳಲಿದ್ದು, ನಿಂತೇ ಹೋಗಲಿದೆ ಎಂದುಕೊಂಡಿದ್ದು ಪುನೀತ್ ಅವರಿಗಾಗಿ ಬರೆದ ಕತೆಯನ್ನು ತೆರೆ ಮೇಲೆ ಮೂಡಿಸುವ ಸನ್ನಹಗಳು ನಡೆಯುತ್ತಿ ಎಂಬುದು ಪವರ್ ಸ್ಟಾರ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

Read more Photos on
click me!

Recommended Stories