Kichcha Sudeep: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ ಸುದೀಪ್ ದಂಪತಿ

Suvarna News   | Asianet News
Published : Dec 11, 2021, 04:37 PM IST

ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಕುಟುಂಬ ಸಮೇತರಾಗಿ ಭೇಟಿ ನೀಡಿ, ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.  

PREV
16
Kichcha Sudeep: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ ಸುದೀಪ್ ದಂಪತಿ

ಸ್ಯಾಂಡಲ್‌ವುಡ್‌ (Sandalwood) ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ (Kichcha Sudeep)​ ಅವರು ಚಿತ್ರರಂಗದಲ್ಲಿ ಸದಾ ಬ್ಯುಸಿ ಆಗಿರುತ್ತಾರೆ. ಅವರು ಸಿನಿಮಾ ಕೆಲಸಗಳ ಜತೆ ಕುಟುಂಬಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. 

26

ಕುಟುಂಬದ ಜತೆ ಅವರು ಹೆಚ್ಚು ಸಮಯ ಕಳೆಯುತ್ತಾರೆ. ಈಗ ಅವರು ಪತ್ನಿ ಪ್ರಿಯಾ (Priya) ಜೊತೆ ಕುಟುಂಬ ಸಮೇತರಾಗಿ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ (Kukke Subramanya) ದೇವಸ್ಥಾನಕ್ಕೆ ತೆರಳಿದ್ದಾರೆ. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನವನ್ನು ಪಡೆದಿದ್ದಾರೆ. 

36

ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠೆ ಸೇವೆ ಸಲ್ಲಿಸಿದ್ದಾರೆ. ನಂತರ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಇದೆ. 

46

ಸುದೀಪ್​ ಸದ್ಯ,  'ವಿಕ್ರಾಂತ್​ ರೋಣ' (Vikranth Rona) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಟೀಸರ್, ​ ಪೋಸ್ಟರ್ ಲುಕ್‌ಗಳು ಹಾಗೂ ಡೆಡ್ ಮ್ಯಾನ್ ಆಂಥೆಮ್ ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದ್ದು, ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

56

ಈ ಚಿತ್ರವು '3ಡಿ'ಯಲ್ಲಿ ತೆರೆಕಾಣಲಿದ್ದು, ನಿರೂಪ್‌ ಭಂಡಾರಿ (Nirup Bhandari) ಹಾಗೂ ನೀತಾ ಅಶೋಕ್‌ (Neetha Ashok) ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸ್ವತಃ ಸುದೀಪ್‌ ಅವರೇ ಡಬ್ಬಿಂಗ್‌ ಮಾಡಿದ್ದಾರೆ.

66

ಸುದೀಪ್ ಹಾಗೂ  ಅನೂಪ್ ಭಂಡಾರಿ (Anup Bhandari) ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ 'ವಿಕ್ರಾಂತ್ ರೋಣ' ಸಿನಿಮಾವು ಮುಂದಿನ ವರ್ಷ2022ರ ಫೆಬ್ರವರಿ 24ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.  ಈ ಚಿತ್ರಕ್ಕೆ ನಿರ್ಮಾಪಕ ಜಾಕ್‌ ಮಂಜು ಬಂಡವಾಳ  ಹೂಡಿದ್ದು, ಸಾಕಷ್ಟು ಹೈಪ್​ ಪಡೆದುಕೊಂಡಿದೆ.

Read more Photos on
click me!

Recommended Stories