ದುಬೈನಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡ ಯಶ್-ರಾಧಿಕಾ; ಸಿಂಡ್ರೆಲಾ ಸಿನಿ ಎಂಟ್ರಿ ಯಾವಾಗ?

Suvarna News   | Asianet News
Published : Oct 19, 2021, 10:44 AM IST

ಎಲ್ಲಿ ನೋಡಿದರೂ ರಾಕಿಂಗ್ ಕಪಲ್ ಕಲರ್‌ಫುಲ್‌ ಫೋಟೋಗಳು ವೈರಲ್ ಆಗುತ್ತಿವೆ. ಮಮ್ಮಿ ರಾಧಿಕಾ ಮತ್ತೆ ಚಿತ್ರರಂಗಕ್ಕೆ ಬರಲೇ ಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.... 

PREV
18
ದುಬೈನಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡ ಯಶ್-ರಾಧಿಕಾ; ಸಿಂಡ್ರೆಲಾ ಸಿನಿ ಎಂಟ್ರಿ ಯಾವಾಗ?

ಸ್ಯಾಂಡಲ್‌ವುಡ್‌ ರಾಕಿಂಗ್ ಜೋಡಿ (Rocking pair), ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ದುಬೈ (Dubai) ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. 

28

ದುಬೈ ಪ್ರವಾಸದ ವೇಳೆ ಸಾಕಷ್ಟು ಕನ್ನಡಿಗರನ್ನು ಭೇಟಿ ಮಾಡಿದ್ದಾರೆ. ಅಲ್ಲಿನ ಅಭಿಮಾನಿಗಳು (Fans) ಈ ಸೆಲೆಬ್ರಿಟಿ ಜೋಡಿಯನ್ನು ಮುತ್ತಿಕೊಂಡು ಫೋಟೋ ಸೆರೆ ಹಿಡೆದಿದ್ದಾರೆ. 

38

ಯಶ್ (Yash) ಮತ್ತು ರಾಧಿಕಾ ಜಾಲಿ ಸಮಯ ಕಳೆಯಲು ದುಬೈಗೆ ಹೋಗಿದ್ದಾರಾ ಅಥವಾ ಸಿನಿಮಾ ಕೆಲಸಗಳಿಗಾ ಎಂಬ ಕಾರಣವಿನ್ನೂ ತಿಳಿದು ಬಂದಿಲ್ಲ. ಯಾವುದೋ ಬ್ಯುಸಿನೆಸ್ ಸಲುವಾಗಿ ಎಂಬ ಮಾತುಗಳೂ ಕೇಳಿ ಬರುತ್ತಿವೆ. 

48

ಯಶ್ ಮತ್ತು ರಾಧಿಕಾ (Radhika Pandit) ಡಿಫರೆಂಟ್ ಆಗಿ ಹೇರ್‌ ಮೇಕ್‌ಓವರ್ ಮಾಡಿಸಿಕೊಂಡಿದ್ದಾರೆ, ಸ್ಟೈಲಿಷ್ ಆಗಿ ಎಲ್ಲರ ಕಣ್ಸೆಳೆದಿದ್ದಾರೆ. 

58

ಅದರಲ್ಲೂ ಸ್ಯಾಂಡಲ್‌ವುಡ್‌ ಸಿಂಡ್ರೆಲಾ After long time ತುಂಬಾನೇ ಡಿಫರೆಂಟ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಚಿತ್ರರಂಗಕ್ಕೆ ಪ್ರವೇಶಿಸುವ ಸಮಯದಲ್ಲಿ ರಾಧಿಕಾ ಅವರಿಗೆ ಈ ಹೇರ್‌ಲುಕ್‌ ಇತ್ತು.

68

ಎರಡು ತಾಯಿ ಮಕ್ಕಳಾದರೂ ರಾಧಿಕಾ ಇಷ್ಟೊಂದು ಚಾರ್ಮಿಂಗ್ ಆಗಿರುವುದಕ್ಕೆ ನೆಟ್ಟಿಗರು ಸಿನಿ ರೀ- ಎಂಟ್ರಿ ಬಗ್ಗೆ ಮತ್ತೆ ಪ್ರಶ್ನೆ ಮಾಡಿದ್ದಾರೆ. 

78

ಇಬ್ಬರೂ ವಿಭಿನ್ನ ಡಿಸೈನರ್ ವೇರ್ ಸಾಂಪ್ರದಾಯಿಕ ಉಡುಪು (Traditional wear) ಧರಿಸಿ ಅಲ್ಲೇ ದಸರಾ ಹಬ್ಬವನ್ನು ಆಚರಿಸಿದ್ದಾರೆ. 

88

ಯಶ್ ಮತ್ತು ರಾಧಿಕಾ ಮಾತ್ರವಲ್ಲ, ಇತ್ತೀಚಿಗೆ ದುಬೈನಲ್ಲಿ ನಡೆದ ಎಕ್ಸಪೋಗೆ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎಸ್. ಅಶ್ವಥ್‌ ನಾತಾಯಣ್ ಭಾಗವಹಿಸಿದ್ದರು.

click me!

Recommended Stories