'ಮಾಮ ಬಂದಿದ್ದೀನಿ, ಕಣ್ಣು ಬಿಡೋ'; ಬಿಕ್ಕಿ ಬಿಕ್ಕಿ ಅತ್ತ ಅರ್ಜುನ್‌ ಸರ್ಜಾ!

First Published | Jun 8, 2020, 11:35 AM IST

22 ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರೂ, ಯಾವುದೇ ಕಾಂಟ್ರವರ್ಸಿ ಇಲ್ಲದೆ, ಎಲ್ಲರೊಟ್ಟಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ನಟ ಚಿರಂಜೀವಿ ಚಿರನಿದ್ರೆಗೆ ಜಾರಿರುವುದು ಇನ್ನೂ ಊಹಿಸಿಕೊಳ್ಳಲು ಅಸಾಧ್ಯವಾದ ವಿಚಾರ. ಚಿರು ನೋಡಲು ಬಂದು ಪ್ರೀತಿಯ ಮಾವ ಅರ್ಜುನ್‌ ಹೇಳಿದ ಮಾತುಗಳು ಎಲ್ಲರ ಕಣ್ಣಂಚಿನಲ್ಲೂ ನೀರು ತರಿಸುವಂತಿದೆ. .

ಫೋಟೋಸ್: ವೀರಮಣಿ
 

ಜೂನ್‌ 7ರಂದು ಚಿರನಿದ್ರೆಗೆ ಜಾರಿದ ಯುವ ನಟ ಚಿರಂಜೀವಿ ಸರ್ಜಾ.
ವಿಚಾರ ತಿಳಿಯುತಿದ್ದಂತೆ, ಚೆನ್ನೈನಲ್ಲಿ ವಾಸವಿರುದ ಅರ್ಜುನ್‌ ಸರ್ಜಾ ಹೊರಟು ಬೆಂಗಳೂರಿಗೆ ಬಂದಿದ್ದಾರೆ.
Tap to resize

ಮಧ್ಯರಾತ್ರಿ ಕೆಆರ್‌ ರಸ್ತೆಯಲ್ಲಿರುವ ಚಿರು ಮನೆ ತಲುಪಿದ್ದಾರೆ.
ಅಳಿಯನನ್ನು ಇಂಥ ಪರಿಸ್ಥತಿಯಲ್ಲಿ ನೋಡಿ, ಬಿಕ್ಕಿ ಬಿಕ್ಕಿ ಅತ್ತ ಅರ್ಜುನ್‌.
'ಮಾಮ ಬಂದಿದ್ದೀನಿ, ಕಣ್ಣ ಬಿಡೋ ಪ್ಲೀಸ್' ಎಂದು ಚಿರುಗೆ ಅಂಗಲಾಚಿದ ಪ್ರೀತಿಯ ಮಾವ.
ಗರ್ಭಿಣಿ ಮೇಘನಾ ರಾಜ್‌ ಚಿರು ಪಕ್ಕದಲ್ಲೇ ಮೌನವಾಗಿ ಕುಳಿತಿದ್ದರು.
ತಮ್ಮ ಧ್ರುವ ಸರ್ಜಾ ಅಣ್ಣನ ಪಾರ್ಥಿವ ಶರೀರದ ಮುಂದೆಯೇ ನಿಂತು ಬಿಕ್ಕಿ ಅತ್ತ ದೃಶ್ಯ ಎಂಥವರ ಮನವನ್ನೂ ಕಲಕುವಂತಿತ್ತು.
ಮೇಘನಾ ಸೀಮಂತವನ್ನು ಅದ್ಧೂರಿಯಾಗಿ ಮಾಡಬೇಕೆಂದು ಕನಸು ಕಂಡಿದ್ದ ಚಿರು .
ಸಪ್ಟೆಂಬರ್‌ನಲ್ಲಿ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
10 ವರ್ಷಗಳ ಕಾಲ ಮೇಘನಾ ಚಿರು ಪ್ರೀತಿಸಿ, ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Latest Videos

click me!