ಬೋಳು ತಲೆಗೆ ಕೂದಲು ಕಸಿ ಮಾಡಿಸಿಕೊಂಡ ಕನ್ನಡದ ಸ್ಟಾರ್ ನಟರಿವರು!

Published : Jun 25, 2024, 07:24 PM IST

ಸ್ಯಾಂಡಲ್‌ ವುಡ್‌ ನ ಅನೇಕ ಸ್ಟಾರ್ ನಟರು ತಮ್ಮ ಬೊಕ್ಕ ತಲೆಗೆ ವಿಗ್, ಹೇರ್ ಫಿಕ್ಸಿಂಗ್ ಮತ್ತು ಹೇರ್ ಟ್ರಾನ್ಸ್‌ಪ್ಲಾಂಟ್ ಮಾಡಿಸಿಕೊಂಡಿದ್ದಾರೆ. ಅಂತಹ ನಟರ ಬಗ್ಗೆ ಇಲ್ಲಿ ನೀಡಲಾಗಿದೆ.  

PREV
16
ಬೋಳು ತಲೆಗೆ ಕೂದಲು ಕಸಿ ಮಾಡಿಸಿಕೊಂಡ ಕನ್ನಡದ ಸ್ಟಾರ್ ನಟರಿವರು!

ಒಬ್ಬ ಭಾರತೀಯ ನಟ, ನಿರ್ದೇಶಕ, ಚಿತ್ರಕಥೆಗಾರ ಮತ್ತು ದೂರದರ್ಶನ ನಿರೂಪಕರಾಗಿರುವ ನಟ ರಮೇಶ್ ಅರವಿಂದ್ ಅವರು 590ರ ಹರೆಯದಲ್ಲೂ ಸುರ ಸುಂದರನಾಗಿ ಕಾಣುತ್ತಾರೆ. 90ರ ದಶಕದ ನಟ ತಮ್ಮ ಕೂದಲು ಹೇರ್ ಟ್ರಾನ್ಸ್ ಪ್ಲಾಂಟ್.

26

ಕನ್ನಡದಲ್ಲಿ ಹಾಸ್ಯನಟನಾಗಿ ಮಿಂಚಿ ಬಳಿಕ ನಾಯಕ ನಟನಾಗಿ ಬಡ್ತಿ ಪಡೆದ ನಟ ಶರಣ್ ಅವರು 90ರ ದಶಕದಿಂದಲೂ ನಮ್ಮನ್ನು ರಂಜಿಸುತ್ತಾ ಬಂದಿದ್ದಾರೆ. 52ರ ಹರೆಯದ ಈ ನಟ ತಮ್ಮ ಹೇರ್  ಟ್ರಾನ್ಸ್ ಪ್ಲಾಂಟ್ ಮಾಡಿಕೊಂಡಿದ್ದಾರೆ.

36

ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿರುವ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರು ತಮ್ಮ ವಯಸ್ಸಿನಲ್ಲಿ ಕೂದಲನ್ನು ಕಳೆದುಕೊಂಡಿದ್ದರು. 63 ವರ್ಷದ ನಟ ತನ್ನ ಗುಂಗುರು ಕೂದಲಿಗೆ ಕಸಿ ಮಾಡಿದ್ದು, ಈಗಲೂ ಹ್ಯಾಟ್‌ ಇಟ್ಟುಕೊಂಡೇ ಹೊರಹೋಗುತ್ತಾರೆ.

46

ನಟ ದರ್ಶನ್ ಕೂಡ ತಮ್ಮ ಹೇರ್  ಟ್ರಾನ್ಸ್ ಪ್ಲಾಂಟ್ ಮಾಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲುಪಾಲಾಗಿರುವ ನಟ ಕ್ರಾಂತಿ ಸಿನೆಮಾ ಸಮಯದಲ್ಲಿ  ಹೇರ್ ಫಿಕ್ಸಿಂಗ್ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಮಾತ್ರವಲ್ಲ ಕೊಲೆ ಸಂಬಂಧಿತ ತನಿಖೆಯಲ್ಲಿ ವಿಗ್ ತೆಗೆಸಿದ್ದರು ಎಂದು ಸುದ್ದಿಯಾಗಿತ್ತು.

56

ಸೂಪರ್ ಹಿಟ್ ಸಿನೆಮಾ ಎಕ್ಸ್ ಕ್ಯೂಸ್‌ ಮಿ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದಿದ್ದ ನಟ ಆಗ ಚಾಕಲೇಟ್ ಬಾಯ್ ತರ ಇದ್ದರೂ. ಬಳಿಕ ಸಿನೆಮಾ ರಂಗದಿಂದ ದೂರ ಉಳಿದಿದ್ದ ನಟ ಬೋಳು ತಲೆ ಹೊಂದಿದ್ದರು. ಈಗ ನಟ ಹೇರ್  ಟ್ರಾನ್ಸ್ ಪ್ಲಾಂಟ್ ಮಾಡಿಸಿಕೊಂಡು ಅಂದವಾಗಿ ಕಾಣಿಸುತ್ತಾರೆ ಮಾತ್ರವಲ್ಲ ಕನ್ನಡ ಸಿನೆಮಾಗೆ ಕಮ್‌ಬ್ಯಾಕ್ ಮಾಡಿದ್ದಾರೆ.

66

80ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಅಭಿಜಿತ್ ಗೆ ಈಗ 60 ವರ್ಷ ಇವರು ಕೂಡ ಬೋಳು ತಲೆ ಹೊಂದಿದ್ದರು ಆದರೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡು ತುಂಬಾ ಯಂಗ್ ಆಗಿ ಕಾಣಿಸುತ್ತಾರೆ. ಇಷ್ಟೇ ಅಲ್ಲದೆ ಶ್ರೀ ಮುರಳಿ, ಪ್ರೇಮ್, ಸತೀಶ್ ನೀನಾಸಂ,  ಶರತ್ ಲೋಹಿತಾಶ್ವ, ಪ್ರಶಾಂತ್ ನೀಲ್ ಮತ್ತು ಕೃಷ್ಣ ಚೈತನ್ಯ ಅವರಂತಹ ಅನೇಕ ತಾರೆಯರು ಹೇರ್  ಟ್ರಾನ್ಸ್ ಪ್ಲಾಂಟ್ ಮಾಡಿಸಿಕೊಂಡಿದ್ದಾರೆಂದು ವರದಿ ತಿಳಿಸಿದೆ.

Read more Photos on
click me!

Recommended Stories