'ಮದಗಜ' ಚಿತ್ರದ ಮೊದಲ ಹಂತದ ಚಿತ್ರೀಕರಣ ಲಾಕ್‌ಡೌನ್ ಮುನ್ನವೇ ಪ್ರಾರಂಭವಾಗಿತ್ತು.
ಚಿತ್ರದಲ್ಲಿರುವ ವಿಲನ್ ಪಾತ್ರಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗೂ ಪರಿಚಿತ ಇರುವ ವಿಲನ್‌ನನ್ನು ಆಯ್ಕೆ ಮಾಡಲಾಗಿದೆ.
ವಿಲನ್ ಪಾತ್ರದಲ್ಲಿ ಜಗಪತಿ ಬಾಬು ಅಥವಾ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಜುಲೈ 13ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.
ವಿಲನ್ ಪಾತ್ರ ಮಾಡುವವರಿಗೆ 72 ರೂ. ಲಕ್ಷ ಸಂಭಾವನೆ ನೀಡುತ್ತಿರುವುದಾಗಿ ಚಿತ್ರದ ನಿರ್ದೇಕ ಮಹೇಶ್ ಹೇಳಿದ್ದಾರೆ.
16 ದಿನದ ಚಿತ್ರೀಕರಣಕ್ಕೆ ಇದೇ ಮೊದಲ ಬಾರಿ ಒಬ್ಬ ವಿಲನ್ ಪಾತ್ರಧಾರಿಗೆ ಇಷ್ಟೊಂದು ಹಣ ನೀಡುತ್ತಿರುವುದಂತೆ.
ವಿಲನ್‌ನನ್ನು ಟೀಸರ್ ಮೂಲಕ ಪರಿಚಯಿಸ ಬೇಕೆಂಬುದು ನಿರ್ಧರಿಸಿದ ತಂಡ.
ಜುಲೈ 1ರಂದು ಟೀಸರ್ ಚಿತ್ರೀಕರಿಸಿ ಅದರ ಮೂಲಕ ವಿಲನ್ ಪಾತ್ರವನ್ನು ಪರಿಚಯಿಸಲಾಗುತ್ತದೆ.
ಮದಗಜ ಚಿತ್ರದಲ್ಲಿ ಶ್ರೀಮುರಳಿಗೆ ಜೋಡಿಯಾಗಿ ನಟಿ ಕೀರ್ತಿ ಸುರೇಶ್ ಮಿಂಚಲ್ಲಿದ್ದಾರೆ.
Suvarna News