ಶಿವರಾಜ್‌ಕುಮಾರ್ 'ಭಜರಂಗಿ 2' ಚಿತ್ರಕ್ಕೆ U/A ಸರ್ಟಿಫಿಕೇಟ್!

First Published | Oct 21, 2021, 10:49 AM IST

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ಚಿತ್ರಕ್ಕೆ ಈಗಷ್ಟೆಸೆನ್ಸಾರ್‌ ಆಗಿದೆ. ಕಟ್‌ ಅಥವಾ ಮ್ಯೂಟ್‌ ಇಲ್ಲದೆ ಚಿತ್ರಕ್ಕೆ ‘​ಯು/ಎ’ ಸರ್ಟಿಫಿಕೇಟ್‌ ನೀಡಲಾಗಿದೆ. 

ಇದೇ ತಿಂಗಳು 29ಕ್ಕೆ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಪ್ರತಿಷ್ಠಿತ ಐಎಂಡಿಬಿಯಲ್ಲಿ (IMDB) ಬಹು ನಿರೀಕ್ಷೆಯ ಚಿತ್ರಗಳ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿರುವ ಈ ಚಿತ್ರ, ಕನ್ನಡ ಚಿತ್ರರಂಗದಲ್ಲೂ ಕುತೂಹಲ ಹೆಚ್ಚಿಸಿದೆ. 

ನಿರ್ಮಾಪಕ ಜಯಣ್ಣ ಹಾಗೂ ಭೋಗೇಂದ್ರ (Jayanna Bhogendra) ಅವರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು, ಎ ಹರ್ಷ (A Harsha) ನಿರ್ದೇಶನ ಮಾಡಿದ್ದಾರೆ. 

Tap to resize

ಇವರ ಕಾಂಬಿನೇಶನ್‌ನ ಚಿತ್ರಗಳು ಈ ಹಿಂದೆ ಹಿಟ್‌ ಆಗಿದ್ದು, ‘ಭಜರಂಗಿ 2’ (Bhajarangi 2) ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ನಂಬಿಕೆ ಚಿತ್ರತಂಡದ್ದು.

ಸದ್ಯ ಹಾಡು, ಟೀಸರ್‌ (Teaser) ಜತೆಗೆ ಚಿತ್ರದಲ್ಲಿ ನಟಿಸಿರುವ ಶ್ರುತಿ (Sruthi), ಜಾಕಿ ಭಾವನಾ (Bhavana), ಖಳನಾಯಕ ಚೆಲುವರಾಜ್‌ (Cheluvaraj) ಪಾತ್ರಗಳ ಲುಕ್‌ ಬಿಡುಗಡೆ ಆಗಿದೆ. 

ಆನಂದ್‌ ಆಡಿಯೋ (Anand Audio) ಯೂಟ್ಯೂಬ್‌ನಲ್ಲಿ ಚಿತ್ರದ ಟ್ರೈಲರ್‌ ಬಿಡುಗಡೆ ಆಗಿದೆ. ನೋಡಿದವರು ಮೆಚ್ಚಿಕೊಂಡಿದ್ದಾರೆ. ಶಿವಣ್ಣ ಅವರ ಎಂಟ್ರಿ, ಡೈಲಾಗ್‌ಗಳು ಟ್ರೈಲರ್‌ನ ಹೈಲೈಟ್‌.

'ನಮ್ಮ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ಬಂದಿರುವುದು ಯಾವುದೇ ತೊಂದರೆ ಇಲ್ಲ. ಯಾಕೆಂದರೆ ದೊಡ್ಡವರ ಜತೆ ಮಕ್ಕಳೂ ನೋಡಬಹುದು ಎಂದು ಸೆನ್ಸಾರ್‌ ಮಂಡಳಿಯೇ (Censor board) ಹೇಳಿದೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ'

'350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಈಗ ಸೆನ್ಸಾರ್‌ ಮುಗಿದಿರುವುದರಿಂದ ಮೊದಲೇ ಅಂದುಕೊಂಡಂತೆ ಅ.29ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.'- ಜಯಣ್ಣ, ನಿರ್ಮಾಪಕ (Producer)

Latest Videos

click me!