ಇಂದು ರಾಬರ್ಟ್‌ ಚಿತ್ರದ ಮತ್ತೊಂದು ಪೋಸ್ಟರ್‌ ಬಿಡುಗಡೆ!

First Published | Jul 27, 2020, 9:02 AM IST

ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಅವರ ಹುಟ್ಟುಹಬ್ಬಕ್ಕೆ ರಾಬರ್ಟ್‌ ಚಿತ್ರತಂಡದಲ್ಲಿ ವಿಶೇಷ ಪೋಸ್ಟರ್‌ ಬಿಡುಗಡೆ ಮಾಡಲಾಗುತ್ತಿದೆ

ಇಂದು (ಜು.27) ಬೆಳಗ್ಗೆ ಗಂಟೆಗೆ ಚಿತ್ರದ ಪೋಸ್ಟರ್‌ ಅನಾವರಣಗೊಳ್ಳುತ್ತಿದೆ
ಆ ಮೂಲಕ ರಾಬರ್ಟ್‌ ಚಿತ್ರತಂಡ ನಿರ್ಮಾಪಕ ಉಮಾಪತಿ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದೆ.
Tap to resize

ಈ ಪೋಸ್ಟರ್‌ ಎಂದಿನಂತೆ ದರ್ಶನ್‌ ಅವರ ಖಡಕ್‌ ಲುಕ್‌ಗಳಿಂದ ತುಂಬಿರಬಹುದಾ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ರ್ಶನ್‌ ನಾಯಕನಾಗಿ ನಟಿಸಿರುವ, ಆಶಾ ಭಟ್‌ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ತರುಣ್‌ ಸುಧೀರ್‌ ನಿರ್ದೇಶನ ಮಾಡಿದ್ದಾರೆ
ಈಗಾಗಲೇ ಚಿತ್ರದ ಫಸ್ಟ್‌ ಲುಕ್‌, ಟೀಸರ್‌ ಹಾಗೂ ಹಾಡುಗಳ ಮೂಲಕ ಸಾಕಷ್ಟುಸದ್ದು ಮಾಡಿರುವ ಈ ಚಿತ್ರದ ಮತ್ತೊಂದು ಪೋಸ್ಟರ್‌ ಹೇಗಿರುತ್ತದೆ ಎಂಬುದನ್ನು ದರ್ಶನ್‌ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.
ರಾಬರ್ಟ್‌ ಚಿತ್ರ ಒಟ್ಟು 108 ದಿನ ಚಿತ್ರೀಕರ ಮಾಡಲಾಗಿದೆ.
ಮೈಸೂರು, ಚೆನ್ನೈ, ಹೈದರಾಬಾದ್, ಪಾಂಡಿಚೇರಿ, ವಾರಾಣಸಿ, ಲಕ್ನೋ ಹೀಗೆ ಹಲವು ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ದರ್ಶನ್‌ ಅಭಿಮಾಣಿಗಳಿಗೆ ಬೇಕಾದ ಮಾಸ್ ಅಂಶಗಳ ಜತೆಗೆ ಒಂದು ಫ್ಯಾಮಿಲಿ ಕತೆ ಕೂಡ ಇದೆ.

Latest Videos

click me!