ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ ನಿರ್ಮಾಣದ 'ಫ್ರೆಂಚ್ ಬಿರಿಯಾನಿ' ಸಿನಿಮಾ.
ನೇರವಾಗಿ ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆದ ಕನ್ನಡದ ಎರಡನೇ ಸಿನಿಮಾವಾದ ಇದು ಸಿನಿ ಪ್ರೇಮಿಗಳ ಮೆಚ್ಚುಗೆ ಪಡೆದುಕೊಂಡಿದೆ.
ಅದರಲ್ಲೂ ನಟ ಡ್ಯಾನಿಶ್ ತಮ್ಮ ನಟನೆ ಮತ್ತು ಡೈಲಾಗ್ ಡೆಲಿವರಿಯಿಂದ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ.
ಭಾರತೀಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ , ನಿರೂಪಕ, ರೆಡಿಯೋ ಜಾಕಿ ಮತ್ತು ನಟ ಈ ಡ್ಯಾನಿಶ್.
ಎಫ್ ಎಂ ರೆಡಿಯೋ 104 FMನಲ್ಲಿ ಇವರು ನಡೆಸಿಕೊಡುತ್ತಿದ್ದ ಪ್ರ್ಯಾಂಕ್ ಕಾಲ್ ಕಾರ್ಯಕ್ರಮ ಸಿಕ್ಕಾಪಟ್ಟೆ ಹಿಟ್ ಆಗಿತ್ತು.
ಬೆಂಗಳೂರಿನಲ್ಲಿ ಅನೇಕ ಸ್ಟ್ಯಾಂಡ್ ಅಪ್ ಕಾಮಿಡಿ ಶೋಗಳನ್ನು ಮಾಡಿದ್ದಾರೆ.
ಪ್ರೋ ಕಬಡಿ ಲೀಗ್ ಮತ್ತು ಐಪಿಎಲ್ ನಲ್ಲಿ ನಿರೂಪಕನಾಗಿದ್ದರು ಮತ್ತು ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ತಮ್ಮದೇ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಕ್ರಿಯೇಟಿವ್ ವಿಡಿಯೋ ಶೇರ್ ಮಾಡಿಕೊಳ್ಳುತ್ತಾರೆ.
'ಬೇವರ್ಸಿ ಕುಡ್ಕ' ಮತ್ತು 'ಪ್ಯಾರಿ ಬಕರೀದ್' ವಿಡಿಯೋಗಳು ತುಂಬಾನೇ ವೈರಲ್ ಆಗಿತ್ತು.
'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರದಲ್ಲಿ ರಾಜಕಾರಣಿಯಾಗಿ ಅಭಿನಯಿಸಿದ್ದಾರೆ.