ಸಂಜನಾ ಬುರ್ಲಿ ಮೂಲತಃ ಉತ್ತರ ಕರ್ನಾಟಕದ ಪ್ರತಿಭೆಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಹಲವು ವರ್ಷಗಳಿಂದ ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಸಂಜನಾ ಎಂಜಿನಿಯರಿಂಗ್ ಪದವೀಧರೆ.
ಸದ್ಯಕ್ಕೆ 'ರಾಧಿ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಈ ಹಿಂದೆ ನಟ ಅನಂತ್ ನಾಗ್ ಜೊತೆ 'ವೀಕೆಂಡ್ ಸಿನಿಮಾ'ದಲ್ಲಿ ಅಭಿನಯಿಸಿದ್ದರು.
'ಪತ್ತೆದಾರಿ ಪ್ರತಿಭಾ' ಇವರ ಮೊದಲ ಧಾರಾವಾಹಿ.
'ಸ್ನೇಹರ್ಷಿ'- ಸಂಜನಾಳ ಮೊದಲ ಸಿನಿಮಾ.
ಲಾಕ್‌ಡೌನ್ ದಿನಗಳಲ್ಲಿ ಸಂಜನಾ ಗಿಟಾರ್ ನುಡಿಸುತ್ತಾ ಸಮಯ ಕಳೆದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ Q&A ಶೇರ್ ಮಾಡುವ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
'ವೀಕೆಂಡ್'ನಲ್ಲಿ ಅನಂತ್ ನಾಗ್ ಜೊತೆ ತೆರೆ ಹಂಚಿಕೊಂಡ ಬಗ್ಗೆ ಆಗಾಗ ಇನ್‌ಸ್ಟಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
Suvarna News