Instagramಗೆ ಕಾಲಿಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್; ಅಭಿಮಾನಿಗಳು ಟ್ಯಾಗ್‌ ಮಾಡಿದ ಪೋಟೋಗಳಿವು!

First Published | Nov 18, 2021, 4:43 PM IST

ಅಭಿಮಾನಿಗಳು ಹಾಗೂ ಕರ್ನಾಟಕ ಸರ್ಕಾರ ಅಪ್ಪುಗೆ ತೋರಿಸಿರುವ ಪ್ರೀತಿಗೆ ಧನ್ಯವಾದಗಳನ್ನು ತಿಳಿಸಿದ ಅಶ್ವಿನಿ. ಸಾಮಾಜಿಕ ಜಾಲತಾಣಕ್ಕೆ ಕಾಲಿಟ್ಟಿದ್ದಾರೆ....

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯಿ ನೋವಿನಲ್ಲಿರುವ ಕುಟುಂಬಸ್ಥರು ಪ್ರತಿ ಸಲವೂ ಮಾಧ್ಯಮದ ಎದುರು ಅಭಿಮಾನಿಗಳು ಮತ್ತು ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಪುನೀತ್‌ರಿಂದ ಪ್ರೇರಣೆಗೊಂಡ ಅಭಿಮಾನಿಗಳು ನೇತ್ರದಾನ ನೋಂದ ಣಿ ಮಾಡಿಸುತ್ತಿದ್ದಾರೆ. ಅವರ ಪ್ರೀತಿ ಮತ್ತು ಗೌರವಕ್ಕೆ ಅಶ್ವಿನಿ ಅವರು ಪತ್ರದ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ. 

Tap to resize

ಪತ್ರ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ಕಾಲಿಟ್ಟಿದ್ದಾರೆ. ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದು ಒಂದೇ ದಿನವಾಗಿದೆ. ಪತ್ರ ಹಂಚಿಕೊಂಡಿದ್ದಾರೆ. ಆಗಲೇ  52 ಸಾವಿರಕ್ಕೂ ಹೆಚ್ಚು ಫಾಲೋವರ್‌ ಇದ್ದಾರೆ. 

ತಮ್ಮ ಹೆಸರಿನ ಕೆಳಗೆ ನಿರ್ಮಾಪಕಿ, ಪಿಆರ್‌ಕೆ ಪ್ರೊಡಕ್ಷನ್ಸ್ (PRK Productions) ಮತ್ತು ಪಿಆರ್‌ಕೆ ಆಡಿಯೋ (PRK Audio) ಎಂದು ಬರೆದುಕೊಂಡಿದ್ದಾರೆ. 

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಡಿಪಿ ಹಾಗಿ ಪುನೀತ್ ನಗು ಮುಖದ ಫೋಟೋ ಹಂಚಿಕೊಂಡಿದ್ದಾರೆ ಹಾಗೂ ಅದರ ಮೇಲೆ ಅಶ್ವಿನಿ ಎಂದು ಹೆಸರು ಬರೆಯಲಾಗಿದೆ.

Latest Videos

click me!