ಜೂನ್ 7ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ನಟ ಚಿರಂಜೀವಿ ಸರ್ಜಾ.
'ವಾಯುಪುತ್ರ'ನ ಫೋಟೋ ಮತ್ತು ನೆಚ್ಚಿನ ವಸ್ತುಗಳನಿಟ್ಟು, ಗೆಳೆಯನನ್ನು ಸ್ಮರಿಸಿದ ಸ್ನೇಹಿತರು.
ಪನ್ನಗಾಭರಣ ಮನೆಯಲ್ಲಿ ಚಿರು ಫೇವರೆಟ್ ಜಾಗದಲ್ಲಿ ಫೋಟೋ ಇಡಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಪನ್ನಗಾಭರಣ.
'No more tears, Just cheers' ಎಂದು ಸ್ನೇಹಿತನ ಫೋಟೋ ಜೊತೆ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದಾರೆ.
ಚಿರು ಪತ್ನಿ ಮೇಘನಾ ರಾಜ್ ಕೂಡ ಪಾಲ್ಗೊಂಡಿದ್ದರು.
ಲೈಫ್ ತುಂಬಾ ಚಿಕ್ಕದು. ಸದಾ ನಗುನಗುತ್ತಾ ಇರು ಎಂದು ಚಿರು ಹೇಳುತ್ತಿದ್ದರಂತೆ.
ಪ್ರತಿ ವರ್ಷ, ಪ್ರತಿ ತಿಂಗಳು, ಪ್ರತಿ ದಿನ ಹಾಗೂ ಪ್ರತಿ ಕ್ಷಣ ಚಿರು ನಮ್ಮೊಟ್ಟಿಗೆ ಇದ್ದಾನೆ, ಎಂದು ಈ ಫೋಟೋ ಇಲ್ಲೇ ಇರಲಿದೆ ಎಂದಿದ್ದಾರೆ ಪನ್ನಗಾ.
ಇವರೆಲ್ಲಾ ಚಿರು ಬೆಸ್ಟ್ ಫ್ರೆಂಡ್ಸ್.
ಚಿರಂಜೀವಿ ನಗು ಮುಖ ನೋಡಿದರೆ ಎಂಥವರ ಮೊಗದಲ್ಲೂ ಮಂದಹಾಸ ಮೂಡುತ್ತದೆ.