ಫಸ್ಟ್‌ ಟೈಂ ಒಟ್ಟಿಗೆ ಅವಾರ್ಡ್‌ ಪಡೆದ ಚಿರು- ಮೇಘನಾ ರಾಜ್‌; ರಾಯನ್ ಮುಖದಲ್ಲಿ ಖುಷಿ ನೋಡಿ ನೆಟ್ಟಿಗರು ಭಾವುಕ

First Published | Jun 28, 2024, 4:10 PM IST

ಮಗನ ಜೊತೆ ಅವಾರ್ಡ್‌ ಹಿಡಿದು ಪೋಸ್ ಕೊಟ್ಟ ಮೇಘನಾ ರಾಜ್. ರಾಯನ್ ರಾಜ್ ಸರ್ಜಾ ಇಂಡಸ್ಟ್ರಿಗೆ ಕಾಲಿಡಲೇ ಬೇಕು ಎಂದ ನೆಟ್ಟಿಗರು....
 

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ವಿಶೇಷವಾದ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ಚಿತ್ರಸಂತೆ ಫಿಲ್ಮ್‌ ಅವಾರ್ಡ್‌ 2024 ಬೆಸ್ಟ್‌ ನಟಿ ಪ್ರಶಸ್ತಿಯನ್ನು ಮೇಘನಾ ರಾಜ್ ಸ್ವೀಕರಿಸಿದ್ದಾರೆ. ಬೆಸ್ಟ್‌ ನಟ ಪ್ರಶಸ್ತಿ ಪತಿ ಚಿರಂಜೀವಿ ಸರ್ಜಾಗೆ ಬಂದಿದ್ದು, ಮೇಘನಾ ಸ್ವೀಕರಿಸಿದ್ದಾರೆ.

Tap to resize

'ಇದು ರಾಜಾಮಾರ್ತಾಂಡ ತತ್ಸಮ ತದ್ಭವ ಕ್ಷಣ. ರಾಜಾಮಾರ್ತಾಂಡ ಚಿತ್ರಕ್ಕೆ ಬಂದಿರುವ ಅವಾರ್ಡ್‌ನ ತತ್ಸಮಗೆ ಬಂದಿದ್ದು ತದ್ಭವ ಹಿಡಿದುಕೊಂಡಿದೆ' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ.

'ಚಿರಂಜೀವಿ ಅವರಿಗೆ ಗೌರವಿಸಿರುವುದಕ್ಕೆ ಚಿತ್ರಸಂತೆಗೆ ವಂದನೆಗಳು. ಇದು ನಿಜಕ್ಕೂ ಸ್ಪೆಷಲ್ ಏಕೆಂದರೆ ಚಿರು ಮತ್ತು ನಾನು ಮೊದಲ ಸಲ ಅತ್ಯುತ್ತಮ ನಾಯಕ ಮತ್ತು ನಾಯಕಿ ಪ್ರಶಸ್ತಿ ಒಟ್ಟಿಗೆ ಪಡೆದಿರುವುದು'

 'ಈ ಕ್ಷಣ ಸದಾ ಅಮೂಲ್ಯ' ಎಂದು ಮೇಘನಾ ರಾಜ್‌ ಒಂದು ಅವಾರ್ಡ್‌, ರಾಯನ್ ರಾಜ್ ಸರ್ಜಾ ಒಂದು ಅವಾರ್ಡ್ ಹಿಡಿದು ಪೋಸ್ ಕೊಟ್ಟಿದ್ದಾರೆ.

ರಾಯನ್‌ ರಾಜ್‌ ಸರ್ಜಾ ನೋಡಿ ಭಾವುಕರಾದ ನೆಟ್ಟಿಗರು..'ನಮ್ಮ ಚಿತ್ರರಂಗವನ್ನು ಮುಂದಿನ ದಿನಗಳಲ್ಲಿ ಬೆಳಸಬೇಕಾದ ಪ್ರತಿಭೆ ನೀನು ರಾಯನ್' ಎಂದು ಕಾಮೆಂಟ್ ಮಾಡಿದ್ದಾರೆ.

Latest Videos

click me!