2024ರಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕನ್ನಡ ನಟಿಯರ ಸಾಲಿಗೆ ಹರ್ಷಿಕಾ ಸೇರ್ಪಡೆ, ಯಾರೆಲ್ಲ ಇದ್ದಾರೆ?

Published : Jun 28, 2024, 12:29 PM ISTUpdated : Jul 03, 2024, 11:24 AM IST

ಕನ್ನಡದ ಅನೇಕ ಸ್ಟಾರ್  ನಟಿಯರು ಗರ್ಭಿಣಿಯಾಗಿರುವ ಬಗ್ಗೆ 2024ರಲ್ಲಿ ಘೋಷಿಸಿಕೊಂಡಿದ್ದು, ಕೆಲವರಿಗೆ ಈಗಾಗಲೇ ಮದ್ದಾದ ಮಗು ಜನಿಸಿದೆ. ಯಾರೆಲ್ಲ ಈ ಲಿಸ್ಟ್ ನಲ್ಲಿದ್ದಾರೆ ಇಲ್ಲಿದೆ ಮಾಹಿತಿ. 

PREV
110
2024ರಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕನ್ನಡ ನಟಿಯರ ಸಾಲಿಗೆ ಹರ್ಷಿಕಾ ಸೇರ್ಪಡೆ, ಯಾರೆಲ್ಲ ಇದ್ದಾರೆ?

ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜು.2ರಂದು ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಮಗು ಜನಿಸಲಿದೆ ಎಂದು ಬರೆದುಕೊಂಡಿದ್ದಾರೆ. 2023 ಆಗಸ್ಟ್  24ರಂದು ಕೊಡಗಿನಲ್ಲಿ ಇವರ ಮದುವೆ ನಡೆದಿತ್ತು.

210

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್‌ ನಟಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಇದ್ದಾರೆ. ಮಾರ್ಚ್ 8ರ ಶಿವರಾತ್ರಿ- ಮಹಿಳಾ ದಿನಚರಣೆ ದಿನ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿಕೊಂಡು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಈ ವರ್ಷ ಮಗುವನ್ನು ಸ್ವಾಗತಿಸಲಿದ್ದಾರೆ.

310

ಕಿರುತೆರೆ ನಟ ಚಂದನ್‌ಕುಮಾರ್ ಹಾಗು ನಟಿ ಕವಿತಾ ಗೌಡ ಇಬ್ಬರೂ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅವರಿಬ್ಬರೂ ಜೊತೆಯಾಗಿ ನಟಿಸಿದ್ದ 'ಲಕ್ಷ್ಮೀ ಬಾರಮ್ಮ' ಹಿಟ್‌ ಆಗಿತ್ತು. ಈ ಜೋಡಿ ಮೇ.5ರಂದು ಸಿಹಿ ಸುದ್ದಿ ಹಂಚಿಕೊಂಡರು. ಈ ವರ್ಷ  ಪೋಷಕರಾಗಲಿದ್ದಾರೆ.

410

 ಇನ್ನು 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನ ಬೊಂಬೆ ಖ್ಯಾತಿಯ ನೇಹಾ ಗೌಡ ಮತ್ತು ನಟ ಚಂದನ್ ಗೌಡ ಕಳೆದ ಮೇ 31ರಂದು ಪೊಷಕರಾಗುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು. 2018ರಲ್ಲಿ ವಿವಾಹವಾಗಿದ್ದ ಈ ಜೋಡಿ ಮದುವೆಯಾದ ಆರು ವರ್ಷಗಳ ಬಳಿಕ ಈ ವರ್ಷ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧವಾಗಿದ್ದಾರೆ.

510

ಕಾವೇರಿ ಕನ್ನಡ ಮೀಡಿಯಂ, ಮಹಾದೇವಿ ಮತ್ತು ಮಾಂಗಲ್ಯಂ ತಂತು ನಾನೇನಾ ಧಾರಾವಾಹಿಯಲ್ಲಿ ಅಭಿನಯಿಸಿರುವ ಕಿರುತೆರೆ ನಟ  ರಕ್ಷಿತ್ ಅರಸ್ (Rakshit Urs)ತಂದೆಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದರು. ಫೆಬ್ರವರಿ 14ರ ಪ್ರೇಮಿಗಳ ದಿನದಿಂದು  ಪತ್ನಿ ಮನೋರಂಜಿತಾ ಜೈನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಇತ್ತೀಚೆಗೆ ಸೀಮಂತದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

610

ಕಿರುತೆರೆ ಸೆಲೆಬ್ರಿಟಿ ಕಪಲ್ ನಟ ದರ್ಶಕ್‌ ಗೌಡ ಮತ್ತು ಪತ್ನಿ ನಟಿ ಶಿಲ್ಪಾ ರವಿ ಕಳೆದ ಮೇ ನಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ಹೇಳಿದ್ದರು. ಈಗ ಮುದ್ದಾದ ಗಂಡು ಮಗುವಿಗೆ ಪೋಷಕರಾಗಿದ್ದಾರೆ.
 

710

2024ರ ಹೊಸ ವರ್ಷದ ಮೊದಲ ದಿನ ನಟಿ ಅದಿತಿ ಪ್ರಭುದೇವ ಮತ್ತು ಉದ್ಯಮಿ ಯಶಸ್ ಪಟ್ಲಾ ಅವರು ಪೋಷಕರಾಗುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದರು. ಅದಿತಿ ಪ್ರಭುದೇವ ಏಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

810

ಸತ್ಯ ಧಾರಾವಾಹಿಯಲ್ಲಿ ಮಿಂಚುತ್ತಿರುವ ಸಾಗರ್ ಬಿಳಿಗೌಡ  ಮತ್ತು ನಟಿ ಸಿರಿ ರಾಜು  ಜನವರಿಯಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದರು. ಎಪ್ರಿಲ್ ನಲ್ಲಿ ಹೆಣ್ಣು ಮಗುವಿಗೆ ಪೋಷಕರಾದ ಬಗ್ಗೆ ಸಂತಸ ಹಂಚಿಕೊಂಡಿದ್ದರು.

910

ನಟಿ ಅಮಲಾ ಪೌಲ್ ಮದುವೆಯಾಗಿ ಎರಡೇ ತಿಂಗಳಿಗೆ ತಾನು ಗರ್ಭಿಣಿ ಎಂದು ಘೋಷಿಸಿದ್ದರು. ಕನ್ನಡದಲ್ಲಿ ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ಪರಭಾಷಾ ನಟಿ ಅಮಲಾ ಪೌಲ್‌ ಮುಂದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್‌ 11 ರಂದು ತಮ್ಮ ಮೊದಲ ಮಗುವನ್ನು ಅಮಲಾ ಪೌಲ್‌ ಹಾಗೂ ಜಗತ್‌ ದೇಸಾಯಿ ಜೋಡಿ ಸ್ವಾಗತಿಸಿದೆ.

1010

 ಕಿರುತೆರೆ ನಟಿ ಕಾವ್ಯಾ ಗೌಡ ಕೂಡ ಜನವರಿಯಲ್ಲಿ ಸಿಹಿಸುದ್ದಿ ಹಂಚಿಕೊಂಡು ಅದೇ ತಿಂಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗಾಂಧಾರಿ, ಶುಭ ವಿವಾಹ ಮತ್ತು ರಾಧಾ ರಮಣ ಸೀರಿಯಲ್‌ನಲ್ಲಿ ಮಿಂಚಿದರು. ಅಲ್ಲದೆ ಸಾಕಷ್ಟು ಖಾಸಗಿ ಬ್ರ್ಯಾಂಡ್‌ಗಳ ಖಾಹೀರಾತುಗಳಲ್ಲಿ ಮಿಂಚಿದ್ದರು.

Read more Photos on
click me!

Recommended Stories