#HappybirthdayMeghanaRaj ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮೇಘನಾ ರಾಜ್!

Published : May 03, 2022, 09:00 AM ISTUpdated : May 03, 2022, 09:03 AM IST

ಹ್ಯಾಪಿ ಬರ್ತಡೇ ಸ್ಯಾಂಡಲ್‌ವುಡ್‌ ಸುಂದರ್, ಸೂಪರ್ ಮಾಮ್ ಮೇಘನಾ ರಾಜ್. ಚಿರು ಗೆಳೆಯ ಪನ್ನಗಾ ಅಪ್ಲೋಡ್ ಮಾಡಿರುವ ಫೋಟೋಗಳಿವು.....

PREV
17
#HappybirthdayMeghanaRaj ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮೇಘನಾ ರಾಜ್!

'ಪುಂಡ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಘನಾ ರಾಜ್‌ (Meghan Raj) ಇಂದು 32ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ಸೆಲೆಬ್ರೇಟ್ ಮಾಡಿದ್ದಾರೆ. 

27

'ಲೈಫಲ್ಲಿ ನನ್ನ ಜೊತೆ ಪ್ರತಿಯೊಂದು ಹೆಜ್ಜೆಗೂ ಸಾಥ್‌ ಕೊಡುವ ಸ್ನೇಹಿತರನ್ನು ಚಿರು ಕೊಟ್ಟಿದ್ದಾನೆ' ಎಂದು ಈ ಹಿಂದೆ ಮೇಘನಾ ಹೇಳಿದ್ದರು.

37

ಈಗ ಅದೇ ಸ್ನೇಹಿತರು ಮೇಘನಾ ರಾಜ್‌ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಮೇಘನಾ ಮಿಂಚಿದ್ದಾರೆ.

47

ಹುಟ್ಟುಹಬ್ಬ ಸೆಲೆಬ್ರೆಷನ್‌ನಲ್ಲಿ ನಿರ್ದೇಶಕ ಪನ್ನಗಾ ಭರಣ, ನಟ ಪ್ರಜ್ವಲ್ ದೇವರಾಜ್ , ನಟಿ ರಾಗಿಣಿ ಪ್ರಜ್ವಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

57

ಪನ್ನಗಾಭರಣ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ಕಳೆದ ವರ್ಷ ಪತಿ ಹುಟ್ಟುಹಬ್ಬದ ದಿನ ತಮ್ಮ ಸಿನಿಮಾ ಅನೌನ್ಸ್ ಮಾಡಿದ್ದರು.

67

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್‌ನಲ್ಲಿ (Dancin Champion) ಡ್ಯಾನ್ಸರ್ ಮಯೂರಿ, ನಟ ವಿಜಯ್ ರಾಘವೇಂದ್ರ (Vijay Raghavendra) ಜೊತೆ ಮೇಘನಾ ಕೂಡ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. 

77

ಮೇಘನಾ ರಾಜ್‌ರನ್ನು ಇಡೀ ಕರ್ನಾಟಕದ ಜನತೆ ಮನೆ ಮಗಳಂತೆ ಪ್ರೀತಿಸುತ್ತಾರೆ. ರಾಯನ್ ರಾಜ್‌ ಸರ್ಜಾ (Raayan Raj Sarja) ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರೆ ಸಾಕು ರಾತ್ರೋರಾತ್ರಿ ವೈರಲ್ ಅಗುತ್ತದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories