ಸಿಂಗಾರ ಸಿರಿಯೇ ಅನ್ನುತ್ತಲೇ ಸಿಂಗರ್‌ ಜೊತೆ ಎಂಗೇಜ್ ಆದ ಚಿತ್ರ ಸಾಹಿತಿ ಪ್ರಮೋದ್ ಮರವಂತೆ!

Published : Sep 10, 2024, 08:49 PM IST

 ಸ್ಯಾಂಡಲ್‌ವುಡ್‌ನ ಯುವ ಲಿರಿಕ್ ರೈಟರ್ ಪ್ರಮೋದ್ ಮರವಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆ ಸುಚೇತನಾ ಅವರೊಂದಿಗೆ ಪ್ರಮೋದ್ ಮರವಂತೆ ಅವರ ನಿಶ್ಚಿತಾರ್ಥ ನೆರವೇರಿದೆ.

PREV
15
ಸಿಂಗಾರ ಸಿರಿಯೇ ಅನ್ನುತ್ತಲೇ ಸಿಂಗರ್‌ ಜೊತೆ ಎಂಗೇಜ್ ಆದ ಚಿತ್ರ ಸಾಹಿತಿ ಪ್ರಮೋದ್ ಮರವಂತೆ!

 ಸ್ಯಾಂಡಲ್‌ವುಡ್‌ನ ಯುವ ರೈಟರ್, ಕಾಂತಾರ ಚಿತ್ರದ ಖ್ಯಾತಿಯ ಲಿರಿಕ್ ರೈಟರ್ ಪ್ರಮೋದ್ ಮರವಂತೆಗೆ  (Pramod Maravanthe)ಗೆ ಕಂಕಣಭಾಗ್ಯ ಕೂಡಿ ಬಂದಿದೆ. ತನ್ನ ನಿಶ್ಚಿತಾರ್ಥದ ಫೋಟೋ ಹಾಕಿರುವ ಪ್ರಮೋದ್ "ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ" ಎಂದು ಸಾಲು ಬರೆದು ಅಭಿಮಾನಿಗಳಿಗೆ ತನ್ನ ಭಾವೀ ಪತ್ನಿಯನ್ನು ಪರಿಚಯಿಸಿಕೊಟ್ಟಿದ್ದಾರೆ.

25

ಇವರ ಹೆಸರು ಸುಚೇತ  ಬಸ್ರೂರು. ಹಾಡುಗಾರ್ತಿ ಬಸ್ರೂರು ಗರಡಿಯಲ್ಲಿ ಬೆಳೆದಾಕೆ. ಕೆಜಿಎಫ್‌ 2 ಚಿತ್ರದ ಗಗನ ನೀ  ಭುವನ ನೀ.. ಶಿಖರ..ನೀ..ಧಣಿದರೆ ಧರಣಿಗೆ ಉದಯ ನೀ ಹಾಡಿಗೆ ಧ್ವನಿಯಾಗಿದ್ದಾರೆ. 

35

ಪ್ರಮೋದ್ ಕೈ ಹಿಡಿಯಲಿರುವ ಸುಚೇತ  ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದು, ಅವರ ಅಕ್ಕನ ಮಗಳಾಗಿದ್ದಾರೆ. ಇವರ ಸಹೋದರ ಸಚಿನ್ ಅಲ್ಬಂ ಸಾಂಗ್‌ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

45

ಸ್ಯಾಂಡಲ್​ವುಡ್​ನ ಬ್ಲಾಕ್​ಬಸ್ಟರ್​ ಚಿತ್ರ ಕಾಂತಾರದ ಸುಮಧುರ ಹಾಡುಗಳಲ್ಲಿ ಒಂದು ಸಿಂಗಾರ ಸಿರಿಯೆ ಹಾಡು ಸೇರಿದಂತೆ ಹಲವು ಸೂಪರ್‌ ಹಿಟ್‌ ಹಾಡುಗಳನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ಮಾತ್ರವಲ್ಲ ಕಿರುತೆರೆಯ ಫೇಮಸ್‌ ಧಾರವಾಹಿ ಸೀತಾರಾಮ ಕ್ಕೂ ಇವರೇ ಟೈಟಲ್ ಟ್ರ್ಯಾಕ್ ಬರೆದಿದ್ದಾರೆ. 

55

ಪ್ರಮೋದ್‌ ಮರವಂತೆ ಅವರಿಗೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಸಿಂಗಾರ ಸಿರಿಯೇ ಹಾಡು ಬರೆಯಲು ಇವರೇನಾ ಸ್ಫೂರ್ತಿ ಎಂದು ಕೆಲವರು ಕೇಳಿದರೆ, ಮತ್ತೆ ಕೆಲವರು ಇಲ್ಲ ಚಂದ ಚಂದ ನನ್ನ ಹೆಂಡ್ತಿ ಹಾಡು ಬರೆಯಲು ಇರಬೇಕು ಎಂದು ಕಾಲೆಳೆದಿದ್ದಾರೆ.

click me!

Recommended Stories