'ಮಂಡ್ಯದ ಗಂಡು' ಹುಟ್ಟು ಹಬ್ಬಕ್ಕೆ ಪತ್ನಿ ಸುಮಲತಾ ಶುಭಾಶಯ ತಿಳಿಸಿದ್ದಾರೆ.
ಇಂದು ಅಂಬರೀಷ್ ಅವರ ಸಮಾಧಿ ಬಳಿ 68ನೇ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.
'ನಿಮ್ಮ ಮನಸ್ಸು ವಿಶ್ವದಷ್ಟು ವಿಶಾಲ, ಜೀವನದ ದೋಣಿಯಲ್ಲಿ ನಿಮ್ಮ ಜತೆ ಹೆಜ್ಜೆ ಹಾಕಿರುವುದಕ್ಕೆ ನಾನು ಪುಣ್ಯ ಮಾಡಿರುವೆ' ಎಂದು ಬರೆದುಕೊಂಡಿದ್ದಾರೆ.
'ನಿಮ್ಮ ನೆನಪೇ ನಿತ್ಯ ಜ್ಯೋತಿ, ನಿಮ್ಮ ಸ್ಮರಣೆಯೇ ಅಮರ ಪ್ರೀತಿ' ಎಂದು ಹೇಳಿದ್ದಾರೆ.
ಅಂಬಿ ಹುಟ್ಟು ಹಬ್ಬದ ಪ್ರಯುಕ್ತ ಅಭಿಷೇಕ್ ಅಂಬರೀಶ್ ಅವರ ಎರಡನೇ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಸಮಾಧಿಯ ಬಳಿ ಕೇಕ್ ಕಟ್ ಮಾಡಿಸಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್ ಹಾಗೂ ಸುನಿಲ್ ಪುರಾಣಿಕ್ ಪಾಲ್ಗೊಂಡಿದ್ದಾರೆ.
ಅಂಬರೀಶ್ ಎಂದೆಂದಿಗೂ ನಮ್ಮೊಂದಿಗೆ ಶಾಶ್ವತ ಎಂದು ಸುಮಲತಾ ತಿಳಿಸಿದ್ದಾರೆ.
ಹಳದಿ ಹಾಗೂ ಶ್ವೇತ ವರ್ಣದ ಹೂಗಳಿಂದ ಅಲಂಕಾರಗೊಂಡಿರುವ ಸಮಾಧಿ.
ಫಸ್ಟ್ ಲುಕ್ ಬಿಡುಗಡೆ ವೇಳೆ ಪಾಲ್ಗೊಂಡಿದ್ದ ಜನರು ಮಾಸ್ಕ್ ಧರಿಸಿದ್ದಾರೆ.
Suvarna News