ಕೆರೆ ದಂಡೆ ಮೇಲೆ ಒಂಟಿಯಾಗಿ ಕುಳಿತ ರುಕ್ಮಿಣಿ ಪುಟ್ಟಿ: ನಿಮ್ಮನ್ನ ನೋಡ್ತಿದ್ರೆ ಪರಿಸರಕ್ಕೂ ಅಸೂಯೆ ಆಗುತ್ತೆ ಎಂದ ಫ್ಯಾನ್ಸ್‌!

Published : Feb 16, 2024, 12:30 AM IST

ಸ್ಯಾಂಡಲ್‌ವುಡ್‌ನ ರುಕ್ಮಿಣಿ ವಸಂತ್ ಸದ್ಯ ಪರ ಭಾಷೆಯ ಸಿನಿಮಾಗಳಲ್ಲೂ ಬ್ಯುಸಿ ಆಗುತ್ತಿದ್ದಾರೆ. ತಮಿಳು ತೆಲುಗು ಹೀಗೆ ಇತರ ಭಾಷೆಯ ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಿಂದಲೇ ಹೆಸರು ಮಾಡಿರೋ ರುಕ್ಮಿಣಿ ವಸಂತ್ ಇದೀಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.  

PREV
17
ಕೆರೆ ದಂಡೆ ಮೇಲೆ ಒಂಟಿಯಾಗಿ ಕುಳಿತ ರುಕ್ಮಿಣಿ ಪುಟ್ಟಿ: ನಿಮ್ಮನ್ನ ನೋಡ್ತಿದ್ರೆ ಪರಿಸರಕ್ಕೂ ಅಸೂಯೆ ಆಗುತ್ತೆ ಎಂದ ಫ್ಯಾನ್ಸ್‌!

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಹೀರೋಯಿನ್ ರುಕ್ಮಿಣಿ ವಸಂತ್ ಎಲ್ಲೇ ಹೋದ್ರೂ ಅವರನ್ನ ಪುಟ್ಟಿ ಎಂದೇ ಫ್ಯಾನ್ಸ್ ಕರೆಯುತ್ತಿದ್ದಾರೆ. ಸದ್ಯ ಹೊಸ ಫೋಟೋಶೂಟ್ ಮಾಡಿಸಿರುವ ರುಕ್ಮಿಣಿ ವಸಂತ್ ಅವರು ಕೆರೆ ದಡದ ಮೇಲೆ ವಿಧ ವಿಧವಾದ ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ. 

27

ಸಂಜೆ ಸಮಯದಲ್ಲಿ ಯಾವುದೋ ಕೆರೆಯ ದಡಕ್ಕೆ ಫೋಟೋಗ್ರಾಫರ್ ಜೊತೆ ಹೋಗಿರುವ ರುಕ್ಮಿಣಿ ವಸಂತ್ ಕ್ಯಾಮೆರಾಗಳಿಗೆ ಮಸ್ತ್ ಲುಕ್ ಕೊಟ್ಟಿದ್ದಾರೆ. ಈ ಸಂಬಂಧ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

37

ಫೋಟೋ ಶೂಟ್‌ ಮಾಡಿಸಿರುವ ರುಕ್ಮಿಣಿ ವಸಂತ್ ಅವರು ವಿಡಿಯೋ ಮೂಲಕ ತಮ್ಮ ಚಂದದ ಫೋಟೋಗಳನ್ನ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ ವಿಡಿಯೋದಲ್ಲಿ ಬೇರೆ ಬೇರೆ ಭಂಗಿಗಳಲ್ಲಿ ಪೋಸ್ ಕೊಟ್ಟಿರುವ ಪೋಟೋಗಳು ಇವೆ. 

47

ರುಕ್ಮಿಣಿ ವಸಂತ್ ಫೋಟೋಗಳನ್ನು ನೋಡಿದ ನೆಟ್ಟಿಗರು, ಸೂಪರ್ ಪುಟ್ಟಿ, ಬಿಳಿ ಹಂಸ, ಸೌಂದರ್ಯ ರಾಶಿಯೇ ಧರೆ ಇಳಿದಂತೆ, ಈ ನಗು ಯಾವಾಗಲೂ ಹೀಗೆ ಇರಲಿ, ನಿಮ್ಮನ್ನ ನೋಡ್ತಿದ್ರೆ ಪರಿಸರಕ್ಕೂ ಅಸೂಯೆ ಆಗುತ್ತೆ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

57

ದೂರದ ಲಂಡನ್‌ನಲ್ಲಿ ಸಿನಿಮಾ ಅಭ್ಯಾಸ ಮಾಡಿಕೊಂಡು ಬಂದಿರುವ ಮುದ್ದು ಮುಖದ ಚೆಲುವೆ ರುಕ್ಮಿಣಿ ವಸಂತ್​​ ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆಯ ನಟಿಯಾಗಿದ್ದು, ತನ್ನ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ.

67

ಸ್ಯಾಂಡಲ್‌ವುಡ್‌ನ ನಟಿ ರುಕ್ಮಿಣಿ ವಸಂತ್ ಸದ್ಯ ತೆಲುಗು ಚಿತ್ರ ಒಪ್ಪಿದ್ದಾರೆ. ವಿಜಯ್ ಸೇತುಪತಿ ಜೊತೆಗೆ ತಮಿಳು ಚಿತ್ರವನ್ನೂ ಮಾಡಿದ್ದಾರೆ. ಕನ್ನಡದ ಭೈರತಿ ರಣಗಲ್ ಸಿನಿಮಾದ ಚಿತ್ರೀಕರಣದಲ್ಲೂ ಸದ್ಯ ಬ್ಯುಸಿ ಇದ್ದಾರೆ ಅಂತಲೇ ಹೇಳಬಹುದು.

77

ರಕ್ಷಿತ್‌ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಸಿನಿಮಾದ ಬಳಿಕ ಇದೀಗ ಶ್ರೀಮುರಳಿ ಅಭಿನಯದ ಬಘೀರ ಚಿತ್ರದಲ್ಲೂ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಈ ಚಿತ್ರದ ಒಂದೇ ಒಂದು ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

Read more Photos on
click me!

Recommended Stories