Kabza ಚಿತ್ರಕ್ಕೆ ಬಹುಭಾಷಾ ತಾರೆಯರ ಆಗಮನ; ಮಾರ್ಚ್ 7ರಂದು ಫಸ್ಟ್‌ ಲುಕ್!

First Published | Mar 3, 2022, 9:58 AM IST

 ಮಾರ್ಚ್‌ 7ರಂದು ಕಬ್ಜ ಚಿತ್ರದ ಫಸ್ಟ್‌ ಲುಕ್ ಬಿಡುಗಡೆ. ಬೆಳ್ಳಿ ಪರದೆಯಲ್ಲಿ ರಿಯಲ್ ಸ್ಟಾರ್ ಸಿನಿಮಾ ನೋಡಲು ಕಾಯುತ್ತಿರುವ ಅಭಿಮಾನಿಗಳು...
 

ಉಪೇಂದ್ರ- ಸುದೀಪ್ ಕಾಂಬಿನೇಷನ್‌ನ ಕಬ್ಜ ಚಿತ್ರಕ್ಕೆ ಇಬ್ಬರು ಬಹುಭಾಷಾ ನಟಿಯರನ್ನು ನಾಯಕಿಯರನ್ನಾಗಿ ಆರ್. ಚಂದ್ರು ಆರಿಸಿದ್ದಾರೆ. 

ಇಂದಿನಿಂದ ನಾಯಕಿಯರು ಭಾಗವಹಿಸುವ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗುತ್ತದೆ. ಮಾರ್ಚ್ 7ರಂದು
ಬಹುಭಾಷಾ ನಾಯಕಿಯರ ಫಸ್ಟ್‌ ಲುಕ್ ಬಿಡುಗಡೆ ಮಾಡುವುದಾಗಿ ಚಂದ್ರು ಹೇಳಿದ್ದಾರೆ. 

Tap to resize

ಅಂದೇ ಆ ನಾಯಕಿಯರ ಹೆಸರು ಕೂಡ ಬಹಿರಂಗಗೊಳ್ಳಲಿದೆ. ‘ಇಲ್ಲಿ ಇಬ್ಬರು ಸ್ಟಾರ್‌ಗಳು ಇದ್ದಾರೆ. ಇಬ್ಬರು ನಾಯಕಿಯರನ್ನು ಆಯ್ಕೆ ಮಾಡಿದ್ದೇವೆ. ನಟರಾದ ಉಪೇಂದ್ರ ಹಾಗೂ ಸುದೀಪ್ ಅವರೊಂದಿಗೆ ಪ್ಯಾನ್ ಇಂಡಿಯಾ
ನಟಿಯರೇ ಹೆಜ್ಜೆ ಹಾಕಲಿದ್ದಾರೆ.'   

'ದೊಡ್ಡ ಸಿನಿಮಾ ಎಂದು ತೋರಿಸಿಕೊಳ್ಳುವುದಕ್ಕೆ ನಾನು ಬಹುಭಾಷೆಯ ಸ್ಟಾರ್ ನಟಿಯರನ್ನು ಕರೆತರುತ್ತಿಲ್ಲ. ಕತೆ ಮತ್ತು ಚಿತ್ರದ ನಾಯಕ ನಟರ ಪಾತ್ರಕ್ಕೆ ಹೊಂದಾಣಿಕೆ ಆಗುವಂತೆ ನಟಿಯರು ಬೇಕಿತ್ತು.'

'ಚಿತ್ರೀಕರಣದ ಸೆಟ್‌ನಿಂದಲೇ ಫಸ್‌ಟ್ ಲುಕ್ ಬಿಡುಗಡೆ ಮಾಡುವ ಮೂಲಕ ‘ಕಬ್ಜ’ ಚಿತ್ರದ ನಾಯಕಿಯರು ಯಾರು
ಎನ್ನುವ ಗುಟ್ಟು ರಟ್ಟು ಮಾಡಲಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಆರ್ ಚಂದ್ರು.

Latest Videos

click me!