ರುದ್ರಾಕ್ಷಿ, ಹಯಗ್ರೀವ ಜೊತೆ ಧ್ರುವ ಸರ್ಜಾ, ಪ್ರೇರಣಾ ಮುದ್ದಾದ ಫೋಟೋಶೂಟ್

First Published | Jan 25, 2024, 7:09 PM IST

ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಇತ್ತೀಚೆಗಷ್ಟೇ ತನ್ನ ಇಬ್ಬರು ಮಕ್ಕಳ ನಾಮಕರಣ ಶಾಸ್ತ್ರ ಅದ್ಧೂರಿಯಾಗಿ ನಡೆಸಿದ್ದು, ಇದೀಗ ಮಕ್ಕಳ ಜೊತೆ ಮುದ್ದಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. 
 

Dhruva Sarja and Prerana photoshoot with kids pav

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಜನವರಿ 22 ರಂದು ತಮ್ಮ ಇಬ್ಬರು ಮಕ್ಕಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದು, ಕಾರ್ಯಕ್ರಮದಲ್ಲಿ ಬಂಧುಗಳು ಮತ್ತು ಸಿನಿಮಾ ತಾರೆಯರು ಆಗಮಿಸಿದ್ದರು. 
 

Dhruva Sarja and Prerana photoshoot with kids pav

ಧ್ರುವ ಸರ್ಜಾ ಮತ್ತು ಪ್ರೇರಣಾ (Prerana) ದಂಪತಿಗಳು ಮಕ್ಕಳಿಗೆ ದೇವರ ಹೆಸರನ್ನಿಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದರು. ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದರು. 
 

Tap to resize

ಅಕ್ಟೋಬರ್ 2 ರ 2022 ರಲ್ಲಿ ಧ್ರುವ ಸರ್ಜಾ ಮಗಳು ಹುಟ್ಟಿದ್ದಳು. 2023 ರ ಸೆಪ್ಟೆಂಬರ್‌ನಲ್ಲಿ ಗಂಡು ಮಗುವಿನ ಜನನವಾಗಿತ್ತು. ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ದಿನವೇ ಹನುಮ ಭಕ್ತ ಧ್ರುವ ಮಕ್ಕಳಿಗೆ ನಾಮಕರಣ ನೆರವೇರಿಸಿದ್ದಾರೆ. 
 

ಧ್ರುವ ಸರ್ಜಾ ಹನುಮನ ಭಕ್ತರು (devotee of Hanuma) ಅನ್ನೋದು ಗೊತ್ತೆ ಇದೆ.  ಹಾಗಾಗಿಯೇ ರಾಮ ಮಂದಿರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದ ದಿನವೇ , ಜೊತೆಗೆ ಪ್ರತಿಷ್ಟಾಪನೆಯಾದ ಸಮಯದಲ್ಲೇ ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.
 

ಧ್ರುವ ಸರ್ಜಾ ಮಕ್ಕಳ ನಾಮಕರಣವನ್ನು ಮಾವ ಅರ್ಜುನ್ ಸರ್ಜಾ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ. ಇನ್ನು ಈ ಸಮಾರಂಭದಲ್ಲಿ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಭಾಗವಹಿಸಿರೋದು ವಿಶೇಷವಾಗಿದೆ. 
 

ಮಕ್ಕಳಿಗೆ ಯಾವುದೇ ಫ್ಯಾನ್ಸಿ ಹೆಸರು ಇಡಬಾರದು, ಜೊತೆಗೆ ಒತ್ತಕ್ಷರ ಇರುವಂತಹ ಹೆಸರು ಇಟ್ಟರೆ ಒಳ್ಳೆಯದು ಎನ್ನುವ ಕಾರಣಕ್ಕೆ ಮಕ್ಕಳಿಗೆ ರುದ್ರಾಕ್ಷಿ (Rudrakshi) ಮತ್ತು ಹಯಗ್ರೀವ (Hayagreeva) ಎನ್ನುವ ದೇವರಿಗೆ ಸಂಬಂಧಿಸಿದ ಹೆಸರನ್ನು ಇಡಲಾಗಿದೆ. 
 

ನಾಮಕರಣದ ಹಿನ್ನೆಲೆಯಲ್ಲಿ ಫೋಟೋ ಮಕ್ಕಳ ಜೊತೆ ಫೋಟೋ ಶೂಟ್ (Photoshoot) ಮಾಡಿಸಿಕೊಂಡಿರುವ ಧ್ರುವ ಸರ್ಜಾ ದಂಪತಿಗಳು, ಅವುಗಳ ವಿಡಿಯೋ ಮಾಡಿ ಮಕ್ಕಳ ಹೆಸರುಗಳನ್ನು ರಿವೀಲ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 
 

ಬಿಳಿ ಬಣ್ಣದ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ ಧ್ರುವ ಸರ್ಜಾ, ಬಿಳಿ ಡ್ರೆಸ್ ನಲ್ಲಿ ಮುದ್ದಾಗಿ ಕಾಣಿಸುತ್ತಿದ್ದ ಮಗಳಿಗೆ ಮ್ಯಾಚ್ ಮಾಡಿಕೊಂಡರೆ, ಪ್ರೇರಣಾ ಮತ್ತು ಮಗ ಹಯಗ್ರೀವ ಕೇಸರಿ ಬಣ್ಣದ ಬಟ್ಟೆ ತೊಟ್ಟು ಒಬ್ಬರಿಗೊಬ್ಬರು ಮ್ಯಾಚ್ ಮಾಡಿಕೊಂಡಿದ್ದಾರೆ. 
 

ಇನ್ನು ನೆಚ್ಚಿನ ನಟ ತಮ್ಮ ಮಕ್ಕಳಿಗೆ ದೇವರ ಹೆಸರನ್ನಿಟ್ಟಿರೋದು ಅಭಿಮಾನಿಗಳಿಗಂತೂ ತುಂಬಾನೆ ಖುಷಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. 
 

Latest Videos

click me!