ನಂದನಾ ಪ್ರಭಾಕರ್ ಮುಖರ್ಜಿಗೆ 3 ವರ್ಷ: ಅದ್ಧೂರಿ ಬರ್ತಡೇ ಹೇಗಿತ್ತು ನೋಡಿ!

First Published | Aug 19, 2021, 1:10 PM IST

ಸ್ಯಾಂಡಲ್‌ವುಡ್ ನಟ ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ಮಗಳಿಗೆ  3 ವರ್ಷಗಳ ಸಂಭ್ರಮ. ಡಿಫರೆಂಟ್ ಥೀಮ್‌ನಲ್ಲಿ ಕೇಕ್‌, ಹೇಗಿತ್ತು ಬರ್ತಡೇ ಸೆಲೆಬ್ರೇಷನ್ ನೋಡಿ....

ಕನ್ನಡ ಚಿತ್ರಂಗದ ಸೆಲೆಬ್ರಿಟಿ ಕಪಲ್ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ಪುತ್ರಿ ನಂದನಾ ಹುಟ್ಟುಹಬ್ಬವನ್ನು ಡಿಫರೆಂಟ್‌ ಥೀಮ್‌ನಲ್ಲಿ ಆಚರಿಸಿದ್ದಾರೆ. 

ನಂದನಾ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೀಗಾಗಿ ಟ್ರೈನ್‌ ಥೀಮ್ ಕೇಕ್ ಮಾಡಿಸಲಾಗಿತ್ತು. ಈ ಮಗುವಿನ ಪ್ರತೀ ವರ್ಷದ ಹುಟ್ಟಿದಬ್ಬವನ್ನು ವಿಭಿನ್ನ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. 

Tap to resize

ಮೂರು ವರ್ಷಕ್ಕೆ ಕಾಲಿಟ್ಟ ನಂದನಾ ಸ್ಯಾಟಿನ್‌ ಫ್ರಾಕ್ ಧಿರಿಸಿದ್ದಾಳೆ. ಕೇಕ್ ಮುಂದೆ ನಿಂತು ಫೋಟೋಗೆ ಮುದ್ದಾಗಿ ಪೋಸ್ ನೀಡಿದ್ದಾಳೆ. 

ನಂದನಾ ಬರ್ತಡೇ ಆದ ಮಾರನೇ ದಿನವೇ ತಂದೆ ರಘು ಮುಖರ್ಜಿ ಹುಟ್ಟಹಬ್ಬ ಕೂಡ. ಹೀಗಾಗಿ ತಂದೆಯ ಬುಲೆಟ್‌ ಥೀಮ್ ಕೇಕ್‌ ಮುಂದೆಯೂ ನಂದನಾ ಪೋಸ್ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನಂದನಾ ಫ್ಯಾನ್ ಪೇಜ್‌ಗಳು ಡಿಫರೆಂಟ್ ಆಗಿ ಫ್ಯಾಮಿಲಿ ಫೋಟೋ ಎಡಿಟ್ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. 

ರಾಧಿಕಾ ಪಂಡಿತ್, ರಮ್ಯಾ, ರಚಿತಾ ರಾಮ್. ಅದ್ವಿತಿ ಶೆಟ್ಟಿ, ಅಪೇಕ್ಷಾ ಪುರೂಹಿತ್, ಮೈನಾ ನಾಯ್ಡು ಸೇರಿದಂತೆ ಅನೇಕ ಸ್ಟಾರ್ ನಟಿಯರು ನಂದನಾಗೆ ಬೇಬಿ ಡಾಲ್ ಎಂದು ಕರೆದು ವಿಶ್ ಮಾಡಿದ್ದಾರೆ.

Latest Videos

click me!