ಮದುವೆ ಸಿಂಪಲ್‌ ಆಗಿದ್ರೂ ಜೀವನ ಗ್ರಾಂಡ್‌ ಆಗಿದೆ; 24ನೇ ವೆಡ್ಡಿಂಗ್ ಅನಿವರ್ಸರಿ ಖುಷಿಯಲ್ಲಿ ಶಾಲಿನಿ ಸತ್ಯನಾರಾಯಣ್

Published : Jun 13, 2024, 01:02 PM ISTUpdated : Jun 13, 2024, 03:59 PM IST

24 ವರ್ಷ ಫುಲ್ ಖುಷಿಯಾಗಿರುತ್ತೀರಾ ಅಲ್ವಾ ಸರ್...ಮೇಡಂ ವಸಿ ಕಾಮಿಡಿ ಮಾಡ್ತಾರಾ? ನೆಟ್ಟಿಗರ ಕಾಮೆಂಟ್ ವೈರಲ್...

PREV
17
ಮದುವೆ ಸಿಂಪಲ್‌ ಆಗಿದ್ರೂ ಜೀವನ ಗ್ರಾಂಡ್‌ ಆಗಿದೆ; 24ನೇ ವೆಡ್ಡಿಂಗ್ ಅನಿವರ್ಸರಿ ಖುಷಿಯಲ್ಲಿ ಶಾಲಿನಿ ಸತ್ಯನಾರಾಯಣ್

Shalini Sathyanarayan ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ನಿರೂಪಕಿ ಶಾಲಿನಿ ಸತ್ಯನಾರಾಯಣ್ ಹಾಗೂ ಅನಿಲ್‌ ಕುಮಾರ್ ತಮ್ಮ 24ನೇ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಳ್ಳುತ್ತಿದ್ದಾರೆ.

27

'24 ವರ್ಷ ಒಟ್ಟಿಗೆ ಜೀವನ ಹಂಚಿಕೊಂಡಿದ್ದೀವಿ, ಒಬ್ಬರಿಗೊಬ್ಬರು ಜೊತೆಯಾಗಿ ನಿಂತಿದ್ದೀವಿ. ಮದುವೆ ಸಿಂಪಲ್ ಆಗಿದ್ದರೂ ಜೀವನ ಗ್ರ್ಯಾಂಡ್ ಆಗಿದೆ' ಎಂದು ಶಾಲಿನಿ ಬರೆದುಕೊಂಡಿದ್ದಾರೆ.

37

'ನಾವು ದಿನವೂ ಒಳ್ಳೆಯ ಪಾರ್ಟ್‌ನರ್‌ಗಳಾಗಿ ಇರಬೇಕು ಎಂದು ಆಯ್ಕೆ ಮಾಡಿಕೊಂಡವರು. ಪ್ರೀತಿಗಿಂತ ಹೆಚ್ಚಾಗಿ ಏನೋ ನಮ್ಮನ್ನು ಒಟ್ಟಿಗೆ ಇರಿಸಿದೆ. 25ನೇ ವರ್ಷಕ್ಕೆ ಕಾಲಿಡುವ ಖುಷಿಯಲ್ಲಿದ್ದೀವಿ' ಎಂದ ಶಾಲಿನಿ.

47

'ನಾವಿಬ್ಬರೂ ಪರಿಚಯ ಆಗಿ 24 ವರ್ಷಗಳೇ ಕಳೆದಿದೆ.ಸಾಮಾನ್ಯವಾಗಿ ನಾನು ಯಾರೊಟ್ಟಿಗೂ ಬೆರೆಯುವ ವ್ಯಕ್ತಿ ಅಲ್ಲ. ಯಾರು ಅಂದ್ರೆ ಯಾರ ಹತ್ರಾನೂ ಮಿಂಗಲ್ ಆಗಲ್ಲ. ಆಗಬೇಕು ಅಂದ್ರೆ ನನಗೆ ತುಂಬಾ ಕಷ್ಟ ಆಗುತ್ತದೆ' ಎಂದು ಶಾಲಿನಿ ಬಗ್ಗೆ ವೇದಿಕೆ ಮೇಲೆ ಪತಿ ಒಮ್ಮೆ ಮಾತನಾಡಿದ್ದರು.

57

'ಯಾಕೆ ನಾನು ಮತ್ತೊಬ್ಬರ ಜೊತೆ ಬೆರೆಯುವುದಿಲ್ಲ ಅಂದ್ರೆ ಫುಲ್ ಪ್ಯಾಕೇಜ್ ಆಗಿ ನನ್ನ ಪತ್ನಿ ಇದ್ದಾಳೆ. ಶಾಲಿನಿ ನನ್ನ ಜೊತೆ ಇದ್ರೆ ಯಾವ ಕೊರತೆಯೂ ಇರೋಲ್ಲ'

67

'ಸ್ನೇಹಿತರ ಜೊತೆ ಬೆರೆಯುವುದಿಲ್ಲ ಕುಟುಂಬಸ್ಥರ ಜೊತೆ ಬರೆಯುವುದಿಲ್ಲ ನಾನು ಮನೆಯಿಂದ ಹೊರ ಹೋಗುವುದೇ ಇಲ್ಲ ಯಾಕೆ ಹೋಗಲ್ಲ ಅಂದ್ರೆ ಶಾಲಿನಿಯೇ ನಂಗೆ ಎಲ್ಲವೂ ಆಗಿ ಸಪೋರ್ಟ್ ಮಾಡುತ್ತಾಳೆ'

77

'ಮದುವೆಯಾದ ದಿನದಿಂದ ಇದುವರೆಗೂ ನಮ್ಮ ದಿನ ಆರಂಭ ಆಗುವುದೇ ಒಂದು ನಗು, ಮುತ್ತು ಮತ್ತು ಅಪ್ಪುಗೆಯಿಂದ. ಅದೇ ರೀತಿ ರಾತ್ರಿಯೂ ನಾವು ತಬ್ಬಿಕೊಂಡು ಮುತ್ತು ಕೊಟ್ಟು ಮಲಗುತ್ತೇವೆ' ಎಂದಿದ್ದಾರೆ ಅನಿಲ್. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories