ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ ಅರ್ಜುನ್ ಸರ್ಜಾ ಮತ್ತು ನಟಿ ಆಶಾರಾಣಿ ಅವರ ಜೇಷ್ಠ ಪುತ್ರಿ ನಟಿ ಐಶ್ವರ್ಯ ಅರ್ಜುನ್ ಮದುವೆ ಅದ್ಧೂರಿಯಾಗಿ ನಡೆದಿದೆ.
26
ಜೂನ್ 10ರಂದು ಐಶ್ವರ್ಯ ಮತ್ತು ತಮಿಳು ನಟ ಉಮಾಪತಿ ರಾಮಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದುವೇ ಹನುಮಾನ ದೇಗುಲದಲ್ಲಿ ಎನ್ನುವುದು ವಿಶೇಷ.
36
ಚೆನ್ನೈನಲ್ಲಿ ಅರ್ಜುನ್ ಅರ್ಜಾ ಅವರು ಹನುಮಾನ ದೇಗುಲ ಕಟ್ಟಿಸಿದ್ದರು. ಇದೇ ದೇಗುಲದಲ್ಲಿ ಕಳೆದ ಅಕ್ಟೋಬರ್ 27ರಂದು ಐಶ್ವರ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
46
ಕೆಂಪು ಬಣ್ಣದ ರೇಶ್ಮೆ ಸೀರೆಯಲ್ಲಿ ಐಶ್ವರ್ಯ ಮಿಂಚಿದ್ದಾರೆ, ಕ್ರೀಮ್ ಬಣ್ಣದ ರೇಶ್ಮೆ ಪಂಚೆ ಸೆಟ್‌ನಲ್ಲಿ ಉಮಾಪತಿ ಕಾಣಿಸಿಕೊಂಡಿದ್ದಾರೆ.
56
ದೇಗುಲದಲ್ಲಿ ಮದುವೆ ಮಾಡಿಕೊಂಡಿರುವುದಕ್ಕೆ ಅನೇಕರ ಸಂತಸ ವ್ಯಕ್ತ ಪಡಿಸಿದ್ದಾರೆ. ವಧು ವರ ಅಲಂಕಾರ ಮಾಡಿಕೊಂಡಿರುವ ಶೈಲಿ ನೀಡಿ ಇದು ಸಿನಿಮಾ ಅನಿಸುತ್ತಿದೆ ಎಂದಿದ್ದಾರೆ.
66
ಸ್ಟಾರ್ ನಟ ಮತ್ತು ನಟಿಯ ಪುತ್ರಿಯಾಗಿರುವ ಐಶ್ವರ್ಯ ಕೂಡ ಪ್ರೇಮ ಬರಹ ಚಿತ್ರದ ಮೂಲಕ ಬಣ್ಣದ ಪ್ರಪಂಚದಲ್ಲಿ ಮಿಂಚಿದವರು. ಇಷ್ಟು ದೊಡ್ಡ ಮಂದಿ ದೇವಸ್ಥಾನದಲ್ಲಿ ಮದುವೆ ಆಗಿರುವುದು ಅನೇಕರಿ ಶಾಕಿಂಗ್ ವಿಚಾರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.