ಮದ್ವೆಯಲ್ಲಿ ಖುಷಿಯಾಗಿರುವ ಶ್ರೀದೇವಿ ಫೋಟೋ ವೈರಲ್; ನಗುನೇ ಕಿತ್ಕೊಂಡು ಬಿಟ್ರು ಎಂದು ನೆಟ್ಟಿಗರು ಗರಂ

First Published | Jun 12, 2024, 3:32 PM IST

ದೊಡ್ಡೆ ಮನೆ ಸೊಸೆಗೆ ಬೆಂಬಲ ಕೊಟ್ಟ ನೆಟ್ಟಿಗರು. ಶ್ರೀದೇವಿ ಮುಖದಲ್ಲಿ ನಗು ಕಾಣಬೇಕು ಎಂದ ಎಲ್ಲೆಡೆ ಪೋಸ್ಟ್‌....

ನಟ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ನಾಲ್ಕು ವರ್ಷದ ಕೆಳಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೆ 10 ಸಾವಿರ ಜನರು ಸಾಕ್ಷಿ ಎನ್ನಲಾಗಿದೆ. 

ಆದರೆ ಕಳೆದ ಡಿಸೆಂಬರ್‌ನಲ್ಲಿ ಮಾನಸಿಕ ಕಿರುಕುಳ ಆರೋಪದೊಂದಿಗೆ ಡಿವೋರ್ಸ್‌ ಬೇಕು ಎಂದು ಯುವ ರಾಜ್‌ಕುಮಾರ್ ನೋಟಿಸ್‌ ಕಳುಹಿಸಿದ್ದಾರೆ.

Tap to resize

ಅಲ್ಲಿಂದ ಶುರುವಾಗುದ ಡಿವೋರ್ಸ್‌ ವಿಚಾರ ದಿನದಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇಲ್ಲಿ ಶ್ರೀದೇವಿ ಪರ ಬೆಂಬಲ ಹೆಚ್ಚಿದೆ. 

ಶ್ರೀದೇವಿ ಮತ್ತು ಯುವ ರಾಜ್‌ಕುಮಾರ್ ಮದುವೆ ಫೋಟೋ ಸಖತ್ ವೈರಲ್ ಆಗುತ್ತಿದೆ. ಪ್ರತಿಯೊಂದು ಫೋಟೋದಲ್ಲೂ ಶ್ರೀ ನಗುತ್ತಿದ್ದಾರೆ. 

ನಿಮ್ಮನ್ನು ನೋಡಿದರೆ ನಮ್ಮ ಮನೆ ಹೆಣ್ಣು ಮಕ್ಕಳನ್ನು ನೋಡಿದಂತೆ ಆಗುತ್ತದೆ ಎಂದು ಅನೇಕರು ಶ್ರೀದೇವಿ ಫೋಟೋಗೆ ಕಾಮೆಂಟ್ ಮಾಡಿ ಬೆಂಬಲ ನೀಡುತ್ತಿದ್ದಾರೆ.

ಆಕೆ ನಗು ಕಿತ್ತುಕೊಂಡು ಬಿಟ್ರಲ್ಲೋ.... ಆ ನಗು ಮತ್ತೆ ಬರಬೇಕು ಆಕೆ ಜೀವನದಲ್ಲಿ ಕಷ್ಟ ನೋಡಬಾರದು ನಿಮ್ಮ ಕುಟುಂಬಕ್ಕೆ ಆಕೆನೇ ಶಕ್ತಿ ಎಂದಿದ್ದಾರೆ ನೆಟ್ಟಿಗರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣದಿಂದ ಮನೆಯನ್ನು ಶ್ರೀದೇವಿ ಚೆನ್ನಾಗಿ ನಡೆಸಿಕೊಂಡು ಬಂದಿದ್ದಾರೆ. ಅಲ್ಲದೆ ಅಪ್ಪು ಅಗಲಿದಾಗ ಶ್ರೀ ಮುಂದೆ ನಿಂತು ಕೆಲಸ ಮಾಡಿರುವುದನ್ನು ಇಡೀ ಮೀಡಿಯಾ ನೋಡಿದೆ. 

ಡಿವೋರ್ಸ್‌ ಸುದ್ದಿ ದೊಡ್ಡದಾಗುತ್ತಿದ್ದಂತೆ ಶ್ರೀದೇವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಮದುವೆ ಫೋಟೋಗಳು ವೈರಲ್ ಆಗುತ್ತಿದೆ. ಕೆಲವೊಂದು ಅಭಿಮಾನಿಗಳ ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ. 

Latest Videos

click me!