ನಿನಗಾ ಇಬ್ರು ಮಕ್ಕಳು?; ನಟ ದರ್ಶನ್ ರಿಯಾಕ್ಷನ್ ರಿವೀಲ್ ಮಾಡಿದ ಅಮೂಲ್ಯ

Published : Jan 17, 2024, 09:27 AM IST

 ಚಾಲೆಂಜಿಂಗ್ ಸ್ಟಾರ್ ಜೊತೆಗಿರುವ ಸ್ಪೆಷಲ್ ಬಾಂಡ್ ರಿವೀಲ್ ಮಾಡಿದ ಅಮೂಲ್ಯ. ಮಗಳನ್ನು ಪ್ರೊಟೆಕ್ಟ್‌ ಮಾಡಬೇಕು ಎಂದು ಅಮ್ಮನಿಗೆ ಹೇಳುತ್ತಿದ್ದರು.

PREV
18
ನಿನಗಾ ಇಬ್ರು ಮಕ್ಕಳು?; ನಟ ದರ್ಶನ್ ರಿಯಾಕ್ಷನ್ ರಿವೀಲ್ ಮಾಡಿದ ಅಮೂಲ್ಯ

ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ಚೆಲುವಿನ ಚಿತ್ತಾರದ ಮೂಲಕ ಗೋಲ್ಡನ್ ಕ್ವೀಟ್ ಪಟ್ಟ ಪಡೆದರು. ಬಾಲ್ಯದಿಂದ ದರ್ಶನ್‌ನ ಬಹಳ ಹತ್ತಿರದಿಂದ ನೋಡಿಕೊಂಡು ಬಂದಿರುವ ಅಮೂಲ್ಯ, ದರ್ಶನ್‌ ಬಗ್ಗೆ ಮಾತನಾಡಿದ್ದಾರೆ. 

28

ದರ್ಶನ್ ಅವರನ್ನು ನಾನು ಎಲ್ಲರ ಎದುರು ಸರ್ ಸರ್ ಎಂದು ಮಾತನಾಡಿಸುತ್ತೀನಿ ಆದರೆ ಅವರು ಎಲ್ಲೇ ಸಿಕ್ಕರೂ ನಾನು ಅಂಕಲ್ ಅಂತಾರೆ ಕರೆಯೋದು ಎಂದು ಕನ್ನಡ ಖಾಸಗಿ ಸಂದರ್ಶನದಲ್ಲಿ ಅಮೂಲ್ಯ ಹೇಳಿದ್ದಾರೆ. 

38

ಕಾಟೇರ ಚಿತ್ರದಲ್ಲಿ ಒಂದು ಪುಟ್ಟ ಹುಡುಗಿ ಬರ್ತಾರೆ. ನಾಯಕಿಯ ಬಾಲ್ಯದ ಪಾತ್ರವನ್ನು ಚೆನ್ನಾಗಿ ತೋರಿಸಲಾಗಿದೆ. ನೋಡು ನೀನು ಹೀಗೆ ಇದ್ದಿದ್ದು ಅಂತಿದ್ದರು ದರ್ಶನ್ ಸರ್.

48

ಇಷ್ಟು ಚಿಕ್ಕವರಿದ್ರು ಈಗ ನೋಡಿ ಎಷ್ಟು ದೊಡ್ಡವರಾಗಿದ್ದಾರೆ ಅಂತಿದ್ರು ಸರ್. ಮೊನ್ನೆ ಕೂಡ ನನ್ನ ಮಕ್ಕಳಿಗೆ ಊಟ ಮಾಡಿಸುತ್ತಿದ್ದೆ ನೋಡಿ ಶಾಕ್ ಆದರು.

58

ನಿನಗಾ ಇಬ್ಬರು ಮಕ್ಕಳು? ನಿನಗೆ ಇಬ್ಬರು ಮಕ್ಕಳು ಅಂತಾನೂ ನಂಬಲು ಆಗಲ್ಲ. ಮಕ್ಕಳನ್ನು ಎತ್ತಿಕೊಂಡು ಬಂದ್ರೆ ನಾನು ನೋಡ್ತಾನೆ ಕೂತಿರುತ್ತೀನಿ ಅಂತಿದ್ರು.

68

ನನ್ನನ್ನು ಚಿಕ್ಕ ಹುಡುಗಿಯಿಂದ ದರ್ಶನ್ ಸರ್ ನೋಡುತ್ತಿದ್ದಾರೆ. ಅಲ್ಲದೆ ನನ್ನ ಮಗ ಆಧವ್‌ನ ನೋಡಿ ನನ್ನಂತೆ ಇದ್ದಾನೆ ಎಂದು ಹೇಳುತ್ತಿದ್ದರು.

78

ದರ್ಶನ್‌ ಸರ್ ತುಂಬಾ ಪ್ರೋಟೆಕ್ಟಿವ್ ಆಗಿದ್ದರು. ನಿಮ್ಮ ಮಗಳ ಜೊತೆಗೆ ಇರಬೇಕು ಅವಳನ್ನು ಹೀಗೆ ನೋಡಿಕೊಳ್ಳಿ ಎಂದು ಅಮ್ಮನಿಗೆ ಹೇಳುತ್ತಿದ್ದರು ಆಗ. 

88

ನಿಮ್ಮ ಮಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಆ ಸಮಯದಲ್ಲಿ ಸಿನಿಮಾ ಮಾಡುವಾಗ ನನಗಿಂತ ನನ್ನ ತಾಯಿ ಜೊತೆ ದರ್ಶನ್ ಸರ್ ಕ್ಲೋಸ್ ಆಗಿದ್ದರು. 

Read more Photos on
click me!

Recommended Stories