ನನ್ನ ತಾಯಿ ಒಂಟಿಯಾಗಿದ್ದು ನನ್ನ ಮತ್ತು ತಮ್ಮ ನನ್ನು ಬೆಳೆಸಿದಳು. ತುಂಬಾ ಬೇಗನೇ ತಂದೆ ತೀರಿಕೊಂಡು ಬಿಟ್ಟರು ಆ ಸಮಯದಲ್ಲಿ ಅಮ್ಮ ಕಷ್ಟ ಪಟ್ಟಿದ್ದಾರೆ.
ಜೀವನ ನಡೆದಲು ತಾಯಿ ಎಷ್ಟು ತ್ಯಾಗ ಮಾಡಬೇಕು ಎಷ್ಟು ಕಷ್ಟ ಪಡಬೇಕಿತ್ತು ನನಗೆ ಗೊತ್ತು. ಅವರ ಜೀವನಕ್ಕಿಂತ ನಾವು ಮುಖ್ಯವಾಗಿದ್ವಿ.
ನಮ್ಮ ಖುಷಿ ನಮ್ಮ ವಿದ್ಯಾಭ್ಯಾಸ, ದಿನ ಬೆಳಗ್ಗೆ ಎದ್ದು ಅಡುಗೆ ಮಾಡಿ ಮೂರ್ನಾಲ್ಕು ಬಸ್ ಬದಲಾಯಿಸಿಕೊಂಡು ಕೆಲಸಕ್ಕೆ ಹೋಗುತ್ತಿದ್ದರು.
ಇಂದಿರಾನಗರದಿಂದ ಹೆಬ್ಬಾಳಕ್ಕೆ ದಿನ ಪ್ರಯಾಣ ಮಾಡಬೇಕಿತ್ತು. ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮನೆ ನೋಡಿಕೊಂಡು ನಮಗೆ ಪಾಠ ಮಾಡುತ್ತಿದ್ದರು.
ಒಂದು ಸಣ್ಣ ಕೊರತೆ ಕಾಣಿಸಿಕೊಳ್ಳದಂತೆ ತಾಯಿ ತಮ್ಮ ಮತ್ತು ನನ್ನನ್ನು ನೋಡಿಕೊಂಡಿದ್ದಾರೆ. ನಾನು ತುಂಬಾ ಸ್ಟ್ರಾಂಗ್ ಆಗಿ ನಿಂತಿದ್ದೀನಿ ಅಂದ್ರೆ ಅದಕ್ಕೆ ನನ್ನ ತಾಯಿ ಕಾರಣ.
ನನ್ನ ತಾಯಿ ಬಗ್ಗೆ ಎಷ್ಟೇ ಹೇಳಿದರೂ ಸಾಲಲ್ಲ, ಪದಗಳಲ್ಲಿ ವರ್ಣಿಸಲು ಆಗಲ್ಲ. ನನ್ನ ತಾಯಿ ಹೆಸರು ಜಯಲಕ್ಷ್ಮಿ ಹರಿಹರನ್ ಎಂದು ಶ್ರುತಿ ಹೇಳಿದ್ದಾರೆ.
Vaishnavi Chandrashekar