ಅನಿಮಲ್ ಚಿತ್ರದ ಹಾಡಿಗೆ ಕಿಶನ್-ಚೈತ್ರಾ ಆಚಾರ್ ರೊಮ್ಯಾಂಟಿಕ್​​​ ಡ್ಯಾನ್ಸ್: ವಾವ್.. ಸೂಪರ್​ ಕೆಮಿಸ್ಟ್ರಿ ಎಂದ ಫ್ಯಾನ್ಸ್!

First Published | Apr 3, 2024, 10:07 AM IST

ಸ್ಯಾಂಡಲ್‌ವುಡ್‌ನ ‘ಟೋಬಿ’ ಬೆಡಗಿ ಚೈತ್ರಾ ಆಚಾರ್ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಮೋಡಿ ಮಾಡುತ್ತಲೇ ಇರುತ್ತಾರೆ. ಇದೀಗ ಚೈತ್ರಾ ಆಚಾರ್, ಅಂತಃಪುರದ ರಾಣಿಯಾಗಿ ಕಂಗೊಳಿಸಿದಲ್ಲದೇ ಹೀರೋ ಕಿಶನ್ ಬಿಳಗಲಿ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 

ಇಬ್ಬರ ಡ್ಯುಯೇಟ್‌ ಸಾಂಗ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಟೋಬಿ ನಟಿ ಆಗಾಗ ಹೊಸ ಪರಿಕಲ್ಪನೆಯ ಫೋಟೋಶೂಟ್ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಾರೆ. ಮತ್ತೆ ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಚೈತ್ರಾ, ಇದೀಗ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. 

ಚೈತ್ರಾ ಬ್ಯೂಟಿಗೆ ಮತ್ತು ಡ್ಯಾನ್ಸ್‌ಗೆ ಡ್ಯಾನ್ಸರ್ ಕಿಶನ್ ಪಾಗಲ್ ಆಗಿದ್ದಾರೆ.‌ ರಣ್‌ಬೀರ್ ಕಪೂರ್, ತೃಪ್ತಿ ದಿಮ್ರಿ ನಟನೆಯ ‘ಅನಿಮಲ್’ ಚಿತ್ರದ ಪೆಹೆಲೆ ಬಿ ಮೇ ತುಮ್ಸೆ ಮಿಲಾ ಹು ಹಾಡಿಗೆ ರೊಮ್ಯಾಂಟಿಕ್ ಆಗಿ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ. 

Tap to resize

ಚೈತ್ರಾ ಅವರು ಕೆಂಪು ಝರಿಯಂಚಿನ ಬಿಳಿ ಬಣ್ಣದ ಸೀರೆ ಉಟ್ಟಿದ್ದು ಇದನ್ನು ಧೋತಿ ಸ್ಟೈಲ್​​​ನಲ್ಲಿ ಧರಿಸಿದ್ದಾರೆ. ಆಕರ್ಷಕವಾದ ಬ್ಲೌಸ್ ಧರಿಸಿದ್ದರು. ಕಿಶನ್ ಅವರು ಬ್ಲ್ಯಾಕ್ ಪ್ಯಾಂಟ್ ಹಾಗೂ ವೈಟ್ ಶರ್ಟ್ ಧರಿಸಿದ್ದರು. 

ನಟಿ ಚೈತ್ರಾ ಅವರು ಹೇರ್ ಫ್ರೀಯಾಗಿ ಬಿಟ್ಟಿದ್ದು ಹಣೆಗೆ ಕೆಂಪು ಬಣ್ಣದ ಬಿಂದಿಯನ್ನು ಇಟ್ಟಿದ್ದರು. ಈ ಲುಕ್​​ನಲ್ಲಿ ಅವರು ಕ್ಲಾಸಿಕ್ ಬ್ಯೂಟಿಯಾಗಿ ಕಾಣಿಸಿದ್ದಾರೆ. ಜೊತೆಗೆ ಆಕರ್ಷಕವಾಗಿ ಹೆಜ್ಜೆ ಹಾಕುವ ಮೂಲಕ ಕಿಶನ್ ಮತ್ತು ಚೈತ್ರಾ ಸೈ ಎನಿಸಿಕೊಂಡಿದ್ದಾರೆ. 

ಈ ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಪಡೆದುಕೊಂಡಿದೆ. ಇಬ್ಬರ ಜೋಡಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರಿಯಲ್ ಹಾಡನ್ನೇ ಮೀರಿಸುವಂತಿದೆ ಎಂದು ಫ್ಯಾನ್ಸ್ ಹಾಡಿ ಹೊಗಳಿದ್ದಾರೆ. 

ಕಿಶನ್, ಚೈತ್ರಾ ಅವರ ವಿಡಿಯೋಗೆ 74 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಬಹಳಷ್ಟು ಜನರು ಕಮೆಂಟ್ ಮಾಡಿ ಈ ಒಂದು ಹಾಡಿಗೆ, ಡ್ಯಾನ್ಸ್ ವಿಡಿಯೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕಿಶನ್ ಅವರು ಆಗಾಗ ನಟಿಯರ ಜೊತೆ ಡ್ಯಾನ್ಸ್ ಮಾಡುತ್ತಲೇ ಇರುತ್ತಾರೆ. ಕಿರುತೆರೆ ನಟಿ, ಬಿಗ್​ಬಾಸ್ ಸ್ಪರ್ಧಿಗಳ ಜೊತೆ ರೊಮ್ಯಾಂಟಿಕ್ ಹಾಡುಗಳಿಗೆ ಅವರು ಡ್ಯಾನ್ಸ್ ಮಾಡುತ್ತಾ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ನಟಿ ಚೈತ್ರಾ ಆಚಾರ್ ಇತ್ತೀಚೆಗೆ ನಟಿಸಿದ ‘ಟೋಬಿ’ ಸಿನಿಮಾ ಮತ್ತು ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಎಲ್ಲರ ಗಮನ ಸೆಳೆದಿತ್ತು. ಕನ್ನಡದ ಹಲವು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ನಾಯಕಿ ಬ್ಯುಸಿಯಾಗಿದ್ದಾರೆ.

Latest Videos

click me!