ನೆನಪಿದ್ಯಾ ಈ ಬಾಲನಟಿ ಕೀರ್ತನಾ? ಇಂದೀಕೆ ಐಎಎಸ್ ಆಫೀಸರ್!

First Published Apr 2, 2024, 10:36 AM IST

90ರ ದಶಕದ ಕನ್ನಡ ಚಿತ್ರಗಳನ್ನು ನೋಡಿದವರಿಗೆ ಕೀರ್ತನಾ ಎಂಬ ಬಾಲನಟಿ ಚಿರಪರಿಚಿತ. ನಟನೆಯಿಂದ ಚೆನ್ನಾಗಿ ಗುರುತಿಸಿಕೊಂಡಿದ್ದ ಈ ಕೀರ್ತನಾ ಇಂದು ಐಎಎಸ್ ಆಫೀಸರ್!

ಕೀರ್ತನಾ ಎಂಬ ಈ ಬಾಲನಟಿ ಕನ್ನಡದ ಎಲ್ಲ ಚಿತ್ರಪ್ರೇಮಿಗಳಿಗೂ ಚಿರಪರಿಚಿತ. ಇಂದಿಗೂ ಜನರು ಆಕೆಯ ನಟನಾ ಕೌಶಲ್ಯವನ್ನು ಮೆಚ್ಚುತ್ತಾರೆ.

ಕರ್ಪೂರದ ಗೊಂಬೆ, ಗಂಗಾ ಯಮುನ, ಮುದ್ದಿನ ಅಳಿಯ, ಉಪೇಂದ್ರ ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ​​ಸಿಂಹಾದ್ರಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಚೂಟಿ ಪುಟಾಣಿಯಾಗಿ ಕಾಣಿಸಿಕೊಂಡಿದ್ದರು ಕೀರ್ತನಾ.

ಮತ್ತು ಟಿವಿ ಧಾರಾವಾಹಿಗಳಾದ ಜನನಿ, ಚಿಗುರು, ಮತ್ತು ಪುಟಾಣಿ ಏಜೆಂಟ್ನಲ್ಲಿ ಕೂಡಾ ಕಾಣಿಸಿಕೊಂಡು ತಮ್ಮ ನಟನಾ ಕೌಶಲ್ಯಕ್ಕೆ ಮನೆ ಮಾತಾಗಿದ್ದರು. 

ಅಂದು ಕಲಾವಿದೆಯಾಗಿ ಹೆಸರು ಮಾಡಿದ್ದ ಕೀರ್ತನಾ ಅವರು UPSC CSE 2020 ರಲ್ಲಿ AIR ರ್ಯಾಂಕ್ 167 ಅನ್ನು ಪಡೆದು ಇಂದು ಐಎಎಸ್ ಆಫೀಸರ್ ಆಗಿದ್ದಾರೆ. 

ಯಶಸ್ವಿ ವೃತ್ತಿಜೀವನದ ಹೊರತಾಗಿಯೂ ಕೀರ್ತನಾ ಅವಳೊಳಗೆ ಆಳವಾಗಿ ನಿರಂತರವಾಗಿ ಕೇಳುತ್ತಿದ್ದ ಪಿಸುಮಾತನ್ನು ಹಿಂಬಾಲಿಸಿ ಭಾರತದ ಅತ್ಯಂತ ಕಠಿಣ ಪರೀಕ್ಷೆ ಪಾಸ್ ಮಾಡಿದ್ದಾರೆ. 

ತನ್ನ UPSC CSE ಸಿದ್ಧತೆಗಳನ್ನು ಪ್ರಾರಂಭಿಸುವ ಮೊದಲು, ಕೀರ್ತನಾ 2011 ರಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಿದ್ದರು. 

ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗNS ಅವರು ಐಎಎಸ್ ಅಧಿಕಾರಿಯಾಗಿ ರಾಷ್ಟ್ರಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು ಎಂಬ ಕಾರಣಕ್ಕೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತ ನಡೆಸತೊಡಗಿದರು. 

6ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಕೀರ್ತನಾ IAS ಅಧಿಕಾರಿಯಾಗಿ ತಮ್ಮ ಮೊದಲ ಪೋಸ್ಟಿಂಗ್‌ನಲ್ಲಿ,  ಮಂಡ್ಯ ಜಿಲ್ಲೆಯ ಸಹಾಯಕ ಆಯುಕ್ತರಾಗಿ ಆಡಳಿತಾತ್ಮಕ ಪಾತ್ರವನ್ನು ವಹಿಸಿಕೊಂಡರು.

ಅನೇಕ ವೈಫಲ್ಯಗಳ ನಂತರವೂ ಛಲ ಬಿಡದ ಐಎಎಸ್‌ ಎಚ್‌ಎಸ್‌ ಕೀರ್ತನಾ ಕಥೆ ಪ್ರತಿಯೊಬ್ಬ ಮಹತ್ವಾಕಾಂಕ್ಷಿಯೂ ಅನುಕರಿಸಬೇಕಾದ ಪಾಠವಾಗಿದೆ. 

ಪ್ರತಿ ವಿಫಲ ಪ್ರಯತ್ನವು ತನ್ನ ತಂತ್ರಗಳನ್ನು ಸುಧಾರಿಸಲು ಮತ್ತು ಮಾಡಿದ ಪ್ರಯತ್ನ ವಿಫಲವಾಗಬಾರದೆಂಬ ಹಟ ಗೆಲುವು ಪಡೆಯಲು ಸಹಾಯ ಮಾಡಿತು.

click me!