ನೀವೂ ಬದುಕಿ ನನಗೂ ಬದುಕಲು ಬಿಡಿ; ಡಿವೋರ್ಸ್‌ ಕಾರಣ ಬಿಚ್ಚಿಟ್ಟ ಸೋನು ಗೌಡ

First Published | Dec 12, 2023, 5:06 PM IST

ಮರೀಚಿ ಸಿನಿಮಾ ರಿಲೀಸ್ ಸಮಯದಲ್ಲಿ ನಟಿ ಸೋನು ಗೌಡ ಮತ್ತೊಮ್ಮೆ ಮದುವೆಯಾಗಲು ರೆಡಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. 

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಸೋನು ಗೌಡ ಸಿಂಗಲ್ ರೆಡಿ ಟು ಮಿಂಗಲ್ ಎಂದು ಹೇಳಿಕೊಂಡಿದ್ದಾರೆ. ಸೋನು ಮದುವೆ ಆಗುವ ಹುಡುಗ ಹೇಗಿರಬೇಕು ನೀವೇ ನೋಡಿ...

ಸಿಂಗಲ್ ಅಥವಾ ಮ್ಯಾರಿಡ್ ಲೈಫ್‌ನಲ್ಲಿ ಯಾವುದು ಬೆಸ್ಟ್‌ ವರ್ಸ್ಟ್‌ ಅಂತಿಲ್ಲ. ಎಲ್ಲವೂ ಚೆನ್ನಾಗಿರುತ್ತದೆ. ನಾವು ಹೇಗೆ ಇಟ್ಟುಕೊಂಡಿರುತ್ತೀವಿ ಹಾಗೆ. ನನಗೆ ಸೂಕ್ತವಾದ ಸಂಗಾತಿ ಸಿಕ್ಕಾಗ ಮದುವೆ ಮಾಡಿಕೊಳ್ಳಬೇಕು ಅನ್ನೋ ಆಲೋಚನೆ ನನಗೆ ಬಂದಿದೆ. 

Tap to resize

ಒಂದು ವೇಳೆ ಮದುವೆ ಮಾಡಿಕೊಂಡಿಲ್ಲ ಅಂದ್ರೂ ಸಮಸ್ಯೆ ಇಲ್ಲ ಖುಷಿಯಾಗಿರುತ್ತೀನಿ. ಇರುವಷ್ಟು ದಿನ ಖುಷಿಯಾಗಿ ಇರಬೇಕು ಅನ್ನೋದಷ್ಟೆ ನನ್ನ ಯೋಚನೆ. ಯುಟ್ಯೂಬ್‌ನಲ್ಲಿ ವಿಡಿಯೋ ಮಾಡಲು ಸಂಗಾತಿ ಹುಡುಕಿಕೊಳ್ಳಲು ಆಗಲ್ಲ.

ಮಾಧ್ಯಮ ಪಬ್ಲಿಸಿಟಿ ಎಲ್ಲವೂ ಬೇಕು ಆದರೆ ಜೀವನದಲ್ಲಿ ನಿಜಕ್ಕೂ ಬೇಕಿರುವುದು ನೆಮ್ಮದಿ. ಯಾವುದೇ ಮುಚ್ಚು ಮರೆ ಇಲ್ಲದೆ ನೆಮ್ಮದಿಯಾಗಿ ಮದುವೆ ಮಾಡಿಕೊಂಡು ಖುಷಿಯಾಗಿರಬೇಕು ಆ ವ್ಯಕ್ತಿ ಜೊತೆ. 

 ದಿನ ಹೀಗಿತ್ತು ಅಂತ ಹೇಳಿದ್ರೆ ನಿನ್ನ ಬಗ್ಗೆ ಹಾಗೆ ಮಾತನಾಡಿದ್ದಾರಾ? ನೀನು ಅಷ್ಟು ಸ್ಪೇಸ್ ಕೊಟ್ಟಿರುವೆ ಇಲ್ಲ ನೀವು ಇಷ್ಟು ಕ್ಲೋಸಾ ಅನ್ನೋ ರೀತಿ ಪ್ರಶ್ನೆ ಮಾಡಬಾರದು. ನನ್ನ ತಂದೆ ತಾಯಿ ಜೊತೆ ಎಲ್ಲವೂ ಶೇರ್ ಮಾಡಿಕೊಳ್ಳುತ್ತೀನಿ...ನನಗೆ  ಗಂಡ ಜೊತೆನೂ ಹಾಗೆ ಇರಬೇಕು. 

ಒಳ್ಳೆ ಸ್ನೇಹಿತನಾಗಿ ನನ್ನ ಜೊತೆ ಜೀವನ ಮಾಡಬೇಕು. ಹೇಳಿದರೆ ಭಯ ಆಗುತ್ತದೆ ಅನ್ನೋ ರೀತಿ ಇರಬಾರದು. ಎಲ್ಲರ ಎದುರು ನಾನು ಮರ್ಯಾದೆ ಕೊಡುತ್ತೀನಿ ಇಬ್ರಿಗೂ ಕಂಫರ್ಟ್ ಜೋನ್ ಇರಬೇಕು. ನಾಳೆ ದಿನ ಏನೇ ಆದರೂ ನನ್ನ ಜೊತೆ ನಿಂತುಕೊಳ್ಳುತ್ತಾರೆ ಅನ್ನೋ ಧೈರ್ಯ ಇದ್ದ ಮೇಲೆ ಆ ಹುಡುಗನನ್ನು ಮದುವೆ ಮಾಡಿಕೊಳ್ಳುವೆ.

ಎಷ್ಟೇ ನೋವಿದ್ದರೂ ಖುಷಿಯಾಗಿ ಜೀವನ ನಡೆಸುತ್ತಿರುವೆ. ಯಾರೊಟ್ಟಿಗೂ ನೋವು ಹೇಳಿಕೊಂಡಿಲ್ಲ. ಪ್ರಮಾಣಿಕವಾಗಿ ಜೀವನ ಮಾಡುತ್ತಿರುವ, ಅವಕಾಶ ಕೊಟ್ಟಿಲ್ಲ ಅಥವಾ ಕಿತ್ತುಕೊಂಡು ಜೀವನ ಮಾಡುತ್ತಿಲ್ಲ. 

ನಾನು ಯಾರಿಗೂ ಮೋಸ ಮಾಡಿಲ್ಲ ಅಂದ್ಮೇಲೆ ಯಾಕೆ ಹೆದರಿಕೊಳ್ಳಬೇಕು? ಇದುವರೆಗೂ ಒಬ್ಬರ ಬಗ್ಗೆ ನೆಗೆಟಿವ್ ಮಾತನಾಡಿಲ್ಲ. ನನ್ನ ಎಕ್ಸ್‌ ಏನ್ ಏನೋ ಮಾಡಿದರೂ ಅದರಲ್ಲಿ ನಾನು ಮಾತ್ರವಲ್ಲ ಅವರೂ ಇದ್ದರು. 

ಇದುವರೆಗೂ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಒಂದು ಸಮಯದಲ್ಲಿ ಇಬ್ಬರು ಇಷ್ಟ ಪಟ್ಟು ಮದುವೆ ಮಾಡಿಕೊಂಡಿದ್ದು. ವರ್ಕೌಟ್ ಆಗುತ್ತಿಲ್ಲ ಸರಿ ಹೋಗುತ್ತಿಲ್ಲ ಅಂದ ಮೇಲೆ ಡಿವೋರ್ಸ್ ಪಡೆದಿದ್ದು. 

ಅವರಿಗೂ ಜೀವನ ಇದೆ ತಂದೆ ತಾಯಿ ತಮ್ಮ ಇದ್ದಾರೆ ಖುಷಿಯಾಗಿದ್ದಾರೆ ಇರಲಿ. ನನಗೂ ಫ್ಯಾಮಿಲಿ ಇದೆ. ನೀವು ಬದುಕಿ ನನಗೂ ಬದುಕಲು ಬಿಡಿ ಅಷ್ಟೆ. ಯಾರಿಗೂ ನೋವು ಕೊಡಲು ಇಷ್ಟ ಪಡುವುದಿಲ್ಲ. 

Latest Videos

click me!