ಅನ್ನವನ್ನು ತಿಂದು, ಆಯುರ್ವೇದದ ಡಯೆಟ್‌ ಮೂಲಕ ನಟಿ Shubha Poonja ಸಣ್ಣಗಾಗಿದ್ದು ಹೇಗೆ? ಚಾಟ್‌ ಇಲ್ಲಿದೆ

Published : Dec 20, 2025, 01:09 PM IST

Actress Shubha Poonja Weight Loss: ನಟಿ ಶುಭಾ ಪೂಂಜ ಅವರು ತೂಕ ಇಳಿಸಿಕೊಂಡಿದ್ದಾರೆ. ಆಯುರ್ವೇದಿಕ್‌ ಪದ್ಧತಿ ಮೂಲಕ ಅವರು ತೂಕ ಇಳಿಸಿಕೊಂಡಿದ್ದಾರೆ. ಹಾಗಾದರೆ ಆಯುರ್ವೇದಿಕ್‌ ಡಯೆಟ್‌ ಹೇಗಿರಲಿದೆ? ಸೈಡ್‌ ಎಫೆಕ್ಟ್‌ ಇಲ್ಲದೆ ಸಣ್ಣಗಾಗಬಹುದು ಹೇಗೆ?

PREV
16
ನೀರು ಕುಡಿಯುವುದು

ಬೆಳಿಗ್ಗೆ ರಸಾಯನ ಕಾಲ ಎಂದು ಹೇಳಲಾಗುತ್ತದೆ. ಅಂದರೆ ನೀರು ಕುಡಿಬಹುದು ಒಂದು ಲೋಟದಷ್ಟು ನಿಮಗೆ ನಿಮ್ಮ ಪ್ರಕೃತಿ ಉದಾಹರಣೆಗೆ ವಾತ ಪ್ರಗತಿ ಅಥವಾ ಕಫ ಪ್ರಕೃತಿ ಆಗಿದ್ರೆ ಬಿಸಿ ನೀರು ಪಿತ್ತ ಪ್ರಗತಿ ಆಗಿದ್ರೆ ತಣ್ಣೀರು ನಿಮ್ಮ ದೇಹವನ್ನು ಕೇಳುತ್ತದೆ. ನಿತ್ಯ ಮೂರು ಲೀಟರ್‌ ನೀರು ಕುಡಿಯಬೇಕು.

26
ಜ್ಯೂಸ್‌ ಸೇವನೆ

ಸೂರ್ಯೋದಯ ಆದ ತಕ್ಷಣ ಅಥವಾ ಸೂರ್ಯೋದಯ ಆದ ನಂತರ ಜ್ಯೂಸ್ ಸೇವನೆ ಮಾಡಬಹುದು.‌ ಆ ಜ್ಯೂಸ್‌ಗಳಲ್ಲಿ ಹುಳಿ, ತುಂಬ ಕಹಿ, ಖಾರ, ಉಪ್ಪು ಈ ರೀತಿ ಇರುವಂತಹ ಜ್ಯೂಸ್ ತೆಗೆದುಕೊಳ್ಳೋದು ಸರಿಯಲ್ಲ. ಬೂದು ಗುಂಬಳಕಾಯಿ ಜ್ಯೂಸ್ ಅಥವಾ ಎಬಿಸಿ ಜ್ಯೂಸ್ ಈ ತರದ ಜ್ಯೂಸ್‌ಗಳನ್ನು ಬೇಕಿದ್ರೆ ತೆಗೆದುಕೊಳ್ಳಬಹುದು ಅಥವಾ ಗೋಧಿ ಹುಲ್ಲಿನ ಜ್ಯೂಸ್ ಕುಡಿಯಬಹುದು. ಹುಳಿ ಖಾರ ಉಪ್ಪು ಈ ರೀತಿ ಅಲ್ಲದೆ ಇರೋದ್ರಿಂದ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆಹಣ್ಣು ರಸಕ್ಕೆ ಜೇನುತುಪ್ಪ ಹಾಕಿಕೊಂಡು ಕುಡಿದ್ರೆ ತೂಕ ಇಳಿಕ ಆಗುವುದು. ಇದರಿಂದ ಸಮಸ್ಯೆ ಕೂಡ ಆಗುವುದು. ಯಾವುದೇ ಸಮಯದಲ್ಲಿ ಹೊಟ್ಟೆ ಖಾಲಿ ಇರುವಾಗ ಹುಳಿ ಪದಾರ್ಥವನ್ನು ಸೇವನೆ ಮಾಡಬಾರದು. ಹೊಟ್ಟೆ ಖಾಲಿ ಇರುವಾಗ ಸ್ವಲ್ಪ ಸಿಹಿ ಪ್ರಧಾನವಾಗಿರುವಂತದ್ದು.

36
ತಿಂಡಿ ಹೇಗಿರಬೇಕು?

ನಾಲ್ಕು ದೋಸೆಯ ಬದಲು ಎರಡೇ ದೋಸೆ ತಿಂದು ಉಳಿದ ಎರಡು ದೋಸೆಯ ಬದಲು ನೀವು ಬೇಳೆ ಕಾಳು ಸೊಪ್ಪು ಹಣ್ಣು ತರಕಾರಿಗಳು ತಿನ್ನಬಹುದು. ಮಾಂಸಾಹಾರಿಗಳು ಮೊಟ್ಟೆ ಸೇವನೆ ಮಾಡಬಹುದು. ಬೆಳಿಗ್ಗೆ ತಿಂಡಿ ಬದಲಿಗೆ ಬ್ರೆಡ್, ಬಿಸ್ಕೆಟ್ ಅನ್ನು ಅಥವಾ ಯಾವುದೋ ಅಂಗಡಿಯಿಂದ ತಂದು ಕೆಚಪ್ ಜಾಮ್ ತಂದು ತಿನ್ನಬಾರದು. ಆಯುರ್ವೇದದ ಪ್ರಕಾರ ನಾವು ಹೊಟ್ಟೆಯ ಮುಕ್ಕಾಲು ಭಾಗ ಊಟವನ್ನ ಮಾಡಬಹುದು. ಬೆಳಗ್ಗೆಯ ತಿಂಡಿ ಹೇಗಿರಬೇಕು ಅಂದ್ರೆ ಮಧ್ಯಾಹ್ನದ ಊಟಕ್ಕೆ ಹಸಿವೆ ಆಗುವಷ್ಟು ಮಾತ್ರ ನಾವು ಸೇವನೆ ಮಾಡಬೇಕು. ಅದು ಹೆಚ್ಚು ಅನುಕೂಲಕರ. ತಿಂಡಿಗಿಂತ ಮೊದಲು ಟೀ ಕುಡಿಯುವ ರೂಢಿ ತುಂಬ ಜನರಿಗೆ ಇದೆ. ಬೆಳಿಗ್ಗೆ ತಿಂಡಿ ಬಳಿಕ ನೀವು ಟೀ ಕುಡಿಯಬಹುದು.

46
ಮಧ್ಯಾಹ್ನ ಊಟ ಹೇಗಿರಬೇಕು?

ತೂಕ ಇಳಿಸಿಕೊಳ್ಳುವವರು ಹಸಿತರಕಾರಿಗಳನ್ನು ಅಥವಾ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಬೇಳೆ ಕಾಳುಗಳನ್ನ ಬಳಸಬೇಕು. ಮಧ್ಯಾಹ್ನ ಆದಷ್ಟು ಬೇಗ ಊಟ ಮಾಡಬೇಕು.

56
ರಾತ್ರಿ ಊಟ ಹೇಗಿರಬೇಕು?

ಸಂಜೆ ಆದಷ್ಟು ಬೇಗ ಊಟ ಮಾಡಬೇಕು. ಸಂಜೆ 6 ಗಂಟೆ ಒಳಗಡೆ ಊಟ ಮಾಡಿದರೆ ಒಳ್ಳೆಯದು. ಊಟ ಮಾಡಿಲ್ಲ ಅಂದರೆ ಒಂದು ಲೋಟ ಹಾಲು ಕುಡಿಯಬಹುದು. ರಾತ್ರಿ ಊಟ ಮಾಡಿದರೆ, ಯಾವುದೇ ದೈಹಿಕ ಪ್ರಕ್ರಿಯೆ ಇಲ್ಲದೆ ಹೊಟ್ಟೆಯಲ್ಲಿ ಬೊಜ್ಜು ಸೇವನೆ ಆಗುವುದು.

66
ಕಷಾಯ ಕುಡಿಯಬಹುದು

ಕೆಲವೊಬ್ಬರಿಗೆ ಉದಾಹರಣೆಗೆ ತುಂಬ ಕಫ ಆಗುತ್ತದೆ, ಬೊಜ್ಜಿದೆ ಅಥವಾ ಆಮುವಾದಂತ ತೊಂದರೆಗಳಿವೆ ಅಂತ ಸಮಸ್ಯೆ ಇರುವಂತವರು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಬೀಜ ಜೀರಿಗೆ ಶುಂಠಿ ಇಂಥವುಗಳ ಕಷಾಯವನ್ನ ಕುಡಿದರೆ ಹಿತ ಅನಿಸುತ್ತದೆ, ಪಚನಕ್ರಿಯೆ ಚೆನ್ನಾಗಿ ಆಗುವುದು.

Disclaimer: ( ಈ ಲೇಖವನ್ನು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಬೆಂಬಲಿಸುವುದಿಲ್ಲ, ಪ್ರತಿಯೊಬ್ಬರ ದೇಹದ ಪ್ರಕೃತಿ ಒಂದೊಂದು ಥರ ಇರುವುದು, ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ಡಯೆಟ್‌ ಮಾಡಿ )

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories