ಸರಿತಾ ಮೂಲತಃ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯವರು.
ತೆಲುಗು ನಟ ವೆಂಕಟೇಶ್ ಸುಬ್ಬಯ್ಯ ಅವರ ಜೊತೆ 1975 ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಂದು ವರ್ಷದೊಳಗೆ ಡೀವೋರ್ಸ್ ಪಡೆದರು.
ಮಾಲಿವುಡ್ ನಟ ಮುಖೇಶ್ ಅವರೊಟ್ಟಿಗೆ ಸೆಪ್ಟೆಂಬರ್ 2ರಂದು ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಸರಿತಾಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಹಿರಿಯ ಪುತ್ರ ವಿದೇಶದಲ್ಲಿ ಮೆಡಿಕಲ್ ಓದುತ್ತಿದ್ದರೆ, ಕಿರಿಯವನು ಎಂಜಿನಿಯರಿಂಗ್ ಮಾಡುತ್ತಿದ್ದಾನೆ.
ಸರಿತಾ ಎರಡನೇ ಪತಿಯಿಂದಲೂ 2011ರಲ್ಲಿ ದೂರವಾದರು.
ಟಾಲಿವುಡ್ 'ಮಾರೋ ಚರಿತ್ರ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
'ವಂದಿಚಕ್ಕಮ್' ಹಾಗೂ 'ಅಚ್ಚಾಮಿಲೈ ಅಚ್ಚಾಮಿಲೈ' ತಮಿಳು ಚಿತ್ರಗಳಿಗೆ ಫಿಲ್ಮ್‌ಫೇರ್ ಬೆಸ್ಟ್ ನಟಿ ಪ್ರಶಸ್ತಿ ಪಡೆದಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಸುಮಾರು 7ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
'ಎರಡು ಕನಸು', 'ಸಂಕ್ರಾಂತಿ' ಮತ್ತು 'ಮಲಯ ಮಾರುತ', ಮೌನಗೀತೆ ಹೆಚ್ಚು ಹೆಸರು ತಂದುಕೊಟ್ಟ ಚಿತ್ರಗಳು.
ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳಿಗೂ ಧ್ವನಿ ನೀಡಿದ್ದಾರೆ.