ಸಿನಿಮಾ ಕತೆ ಬರೆದ ಪೊಲೀಸ್‌ ಅಧಿಕಾರಿ ಉಮೇಶ್‌; ಸಪ್ತಮಿ ಗೌಡ ನಾಯಕಿ!

First Published | Aug 10, 2020, 10:05 AM IST

ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌ ಕೆ ಉಮೇಶ್‌ ಬರೆದಿರುವ ಕತೆ ಇದೀಗ ‘ಹೇ ರಾಮ್‌’ ಹೆಸರಿನಲ್ಲಿ ಸಿನಿಮಾವಾಗುತ್ತಿದೆ.

ಪಾಪ್‌ಕಾರ್ನ್‌ ಮಂಕಿ ಟೈಗರ್‌ನಲ್ಲಿ ನಟಿಸಿದ್ದ ಸಪ್ತಮಿ ಗೌಡ ಇದರ ನಾಯಕಿ.
ಧರ್ಮ ತನಿಖಾಧಿಕಾರಿಯಾಗಿ ಮುಖ್ಯಪಾತ್ರದಲ್ಲಿದ್ದಾರೆ.
Tap to resize

ಇತ್ತೀಚೆಗಷ್ಟೆಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಅಪರಾಧಗಳ ಸುತ್ತ ಸಾಗುವ ಕತೆ ಇದಾಗಿದ್ದು, 2002 ರಿಂದ 2013ರ ವರೆಗೆ ನಡೆದ ಹಲವು ಕ್ರೈಮ್‌ ಘಟನೆಗಳು ಚಿತ್ರದಲ್ಲಿ ಬರಲಿವೆ.
ಒಬ್ಬ ವ್ಯಕ್ತಿ ತನ್ನ ತಾಯಿ ಹಾಗೂ ಅಕ್ಕನ ಜೀವನದ ಸಲುವಾಗಿ ಪಾತಕಲೋಕದಲ್ಲಿ ಯಾವ ಮಟ್ಟಕ್ಕೆ ಇಳಿಯುತ್ತಾನೆ ಎಂಬುದು ಚಿತ್ರದ ಒಂದು ಸಾಲಿನ ಕತೆ.
ಈ ಹಿಂದೆ ‘ಕಾವೇರಿತೀರದ ಚರಿತೆ’ ಚಿತ್ರ ನಿರ್ದೇಶಿಸಿದ್ದ ಪ್ರವೀಣ್‌ ‘ಹೇ ರಾಮ್‌’ನ ನಿರ್ದೇಶಕರು. ವಿಎಫ್‌ಎಕ್ಸ್‌ ಕೆಲಸವನ್ನೂ ಇವರೇ ನಿರ್ವಹಿಸಲಿದ್ದಾರೆ. ಚೈತ್ರಕೊಟ್ಟೂರು, ಸಚಿನ್‌ ಪುರೋಹಿತ್‌, ನವೀನ್‌ ರಾಜ್‌, ಮಂಜುನಾಥ್‌, ಪೂರ್ಣ ಮುಂತಾದವರು ಮುಖ್ಯಪಾತ್ರದಲ್ಲಿದ್ದಾರೆ.
ವಿಶೇಷ ಅಂದರೆ ಸಾಹಿತ್ಯ ಜತೆಗೆ ಡಾ ವಿ ನಾಗೇಂದ್ರ ಪ್ರಸಾದ್‌ ಸಂಗೀತವನ್ನೂ ನೀಡುತ್ತಿದ್ದಾರೆ. ಪ್ರದೀಪ್‌ ವಿ ಬಂಗಾರುಪೇಟೆ ಕ್ಯಾಮೆರಾ ಹಿಡಿಯಲಿದ್ದಾರೆ. ಡಾಲಿ ಧನಂಜಯ್‌ ಮುಹೂರ್ತದಲ್ಲಿ ಪಾಲ್ಗೊಂಡು ಕ್ಲಾಪ್‌ ಮಾಡಿದರು.

Latest Videos

click me!