ಐಷಾರಾಮಿ ಕಾರು ಬಿಟ್ಟು ಸ್ಕೂಟಿ ಬಳಸುತ್ತಿರುವ ರಮ್ಯಾ; ರಸ್ತೆ ಗುಂಡಿ- ಟ್ರಾಫಿಕ್ಸ್ Maza Aaya ಎಂದ ನೆಟ್ಟಿಗರು?

Published : Mar 02, 2023, 09:27 AM IST

ಮೋಹಕ ತಾರೆ ಬೈಕ್ ಸವಾರಿ ಫೋಟೋ ವೈರಲ್. ರಸ್ತೆಯಲ್ಲಿ ಕಂಡರೆ ಅಡ್ಡ ಹಾಕಲು ರೆಡಿಯಾದ ಅಭಿಮಾನಿಗಳು..

PREV
17
ಐಷಾರಾಮಿ ಕಾರು ಬಿಟ್ಟು ಸ್ಕೂಟಿ ಬಳಸುತ್ತಿರುವ ರಮ್ಯಾ; ರಸ್ತೆ ಗುಂಡಿ- ಟ್ರಾಫಿಕ್ಸ್ Maza Aaya ಎಂದ ನೆಟ್ಟಿಗರು?

ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ, ಸಿನಿಮಾ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹಾಗೂ ಸಿನಿಮಾ ಸಹಿ ಮಾಡುತ್ತಿರುವುದೇ ಅಭಿಮಾನಿಗಳಿಗೆ ಬಿಗ್ ನ್ಯೂಸ್. 

27

ಹೀಗಿರುವಾಗ ರಮ್ಯಾ ಬೆಂಗಳೂರಿನ ರಸ್ತೆಗಳಲ್ಲಿ ಸ್ಕೂಟಿ ರೌಡ್‌ ಹೋಗಿರುವುದು ಕಂಡು ಆಶ್ಚರ್ಯ ಪಟ್ಟಿದ್ದಾರೆ. ಐಷಾರಾಮಿ ಕಾರು ಬಿಟ್ಟು ಸ್ಕೂಟಿ ಬಳಸುತ್ತಿರುವುದಕ್ಕೆ ಖುಷಿ ಪಟ್ಟಿದ್ದಾರೆ.

37

ಧನಂಜಯ ಜೊತೆಗೆ ‘ಉತ್ತರಕಾಂಡ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುತ್ತಿರುವ ರಮ್ಯಾ ದ್ವಿಚಕ್ರ ವಾಹನದಲ್ಲಿ ಬೆಂಗಳೂರು ಸುತ್ತಿದ್ದಾರೆ. ಸ್ನೇಹಿತೆ ಸುಮನ್‌ ರಾಜ್‌ ಜೊತೆ ಹೆಲ್ಮೆಟ್‌ ತೊಟ್ಟು ರೌಂಡ್ಸ್‌ ಹೊರಟಿರುವ ರಮ್ಯಾ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

47

ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ಗೆ ವೈಟ್ ಜಾಗಿಂಗ್ ಶೋ ಧರಿಸಿದ್ದಾರೆ. ಜೊತೆಗೆ ಬ್ಲ್ಯಾಕ್ ಹೆಲ್ಮೆಟ್‌ ಕೂಡ ಧರಿಸಿದ್ದಾರೆ. ರಮ್ಯಾ No makeup ಲುಕ್‌ನಲ್ಲಿದ್ದಾರೆ. 

57

 ರಮ್ಯಾ ಜೊತೆಗಿರುವ ವ್ಯಕ್ತಿ ಯಾರೆಂದು ಗೊತ್ತಿಲ್ಲ...ರಮ್ಯಾ ಸಹೋದರಿ? ರಮ್ಯಾ ಸ್ನೇಹಿತೆ ಅಥವಾ ರಮ್ಯಾ ಸಿನಿಮಾ ತಂಡದವರಾ ಎನ್ನುವ ಮಾಹಿತಿ ಇಲ್ಲ ಅದರೆ ಆ ಹುಡುಗಿ ಲಕ್ಕಿ ಎನ್ನುತ್ತಾರೆ ಅಭಿಮಾಣಿಗಳು. 

67

ಐಷಾರಾಮಿ ಕಾರುಗಳಲ್ಲಿ ರಸ್ತೆ ಗುಂಡಿಗಳು ಗೊತ್ತಾಗುವುದಿಲ್ಲ...ಹೇಗಿತ್ತು ಸ್ಕೂಟಿ ರೌಂಡ್? ಕಾರಿನಲ್ಲಿ ವೇಟಿಂಗ್ ಫೀಲ್ ಆಗುವುದಿಲ್ಲ ಸ್ಕೂಟಿಯಲ್ಲಿ ಟ್ರಾಫಿಕ್ ಫೀಲ್ ಹೇಗಿತ್ತು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

77

ರಮ್ಯಾ ಅಭಿಮಾನಿಗಳು ಕೊಂಚ ಬೇಸರ ಮಾಡಿಕೊಂಡಿದ್ದಾರೆ. ಯಾವ ರಸ್ತೆಯಲ್ಲಿ ಪ್ರಯಾಣ ಮಾಡಿದ್ದು ಮತ್ತೆ ಯಾವ ದಾರಿಯಲ್ಲಿ ಹೋಗುವುದು ಎಂದು ಹೇಳಿ ನಿಮ್ಮನ್ನು ಅಡ್ಡ ಹಾಕಿ ಮಾತನಾಡಿಸಬೇಕು ಎಂದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories